ಸೋಮವಾರಪೇಟೆ, ಏ. ೨೩: ನಾವು ಪ್ರತಿಷ್ಠಾನ ಸೇವಾ ಸಂಸ್ಥೆಯ ವತಿಯಿಂದ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ವಿಶ್ವ ಭೂದಿನವನ್ನು ಆಚರಿಸಲಾಯಿತು.

ಭೂಮಿಯ ಅವಶ್ಯಕತೆ, ಜೀವರಾಶಿಗಳ ಬದುಕು, ಪರಿಸರ ರಕ್ಷಣೆ, ಭೂಮಿಯ ಮೇಲೆ ಮಾನವನ ದೌರ್ಜನ್ಯ, ಪ್ರಕೃತಿ ನಾಶ ಇವುಗಳ ಬಗ್ಗೆ ಮಕ್ಕಳಿಗೆ ರೂಪಕದ ಮೂಲಕ ಜಾಗೃತಿ ಮೂಡಿಸಲಾಯಿತು. ಪರಿಸರ ರಕ್ಷಣೆ, ಜೀವರಾಶಿಗಳ ಬದುಕು, ಹವಾಮಾನದÀ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ನಾವು ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕಿ ಸುಮನ ಮ್ಯಾಥ್ಯು ಮಾತನಾಡಿ, ಮಕ್ಕಳು ಪರಿಸರ ರಕ್ಷಣೆ, ತ್ಯಾಜ್ಯವಿಲೇವಾರಿಯ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು. ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಕಾರ್ಯಕ್ರಮ ನಿರ್ವಹಿಸಿದರು.