ಮಡಿಕೇರಿ, ಏ. ೨೩: ಮಡಿಕೇರಿ ನಗರಸಭಾ ವ್ಯಾಪ್ತಿಯ ಕನ್ನಂಡಬಾಣೆಯಲ್ಲಿರುವ ಕರ್ನಾಟಕ ರಾಜ್ಯದ ಏಕೈಕ ಶ್ರೀ ದೃಷ್ಟಿ ಗಣಪತಿ ದೇವಾಲಯದ ೨೧ನೇ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಾರ್ಷಿಕೋತ್ಸವದ ಅಂಗವಾಗಿ ನಿನ್ನೆಯಿಂದಲೇ ವಿವಿಧ ಪೂಜಾದಿ ಕಾರ್ಯಗಳು ನೆರವೇರಿದವು. ವಾಸ್ತುಹೋಮ, ಸ್ಥಳ ಶುದ್ಧಿ, ಬಿಂಬಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತುಬಲಿ, ಪ್ರಸಾದ ಶುದ್ಧಿ, ಸುದರ್ಶನ ಹೋಮ, ತೀರ್ಥ-ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿತು.

ಇಂದು ಬೆಳಿಗ್ಗೆಯಿಂದ ಸಾಮೂಹಿಕ ಗಣಹೋಮ, ಆಶ್ಲೇಷ ಬಲಿ, ಕಲಶಪೂಜೆ, ನಾಗತಂಬಿಲ, ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ತಂತ್ರಿಗಳಾದ ಕೃಷ್ಣಮೂರ್ತಿ ಭಟ್ ಮತ್ತು ತಂಡದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಆಡಳಿತ ಮಂಡಳಿಯವರು, ಸದಸ್ಯರುಗಳು, ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.