ಮಡಿಕೇರಿ, ಏ.೨೨ : ಮುದ್ದಂಡ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭ ನಡೆಯುವ ಏ.೨೭ ರಂದು ಪ್ರತಿಷ್ಠಿತ ಪ್ರಶಸ್ತಿ ವಿಜೇತ, ಶ್ರೇಷ್ಠ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.
೧೯೭೫ರ ವಿಶ್ವಕಪ್ ಹಾಕಿ ವಿಜೇತ, ವಿಶ್ವದಲ್ಲೇ ಅತಿ ಹೆಚ್ಚು ಪದಕ ಗಳಿಸಿರುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕೊಡಗಿನ ಸಿಡಿಲಮರಿ ಖ್ಯಾತಿಯ ಬಿ.ಪಿ.ಗೋವಿಂದ ಅವರು ಮುದ್ದಂಡ ಹಾಕಿ ಹಬ್ಬಕ್ಕೆ ಆಗಮಿಸಲಿದ್ದಾರೆ. ೧೯೭೨ ಮ್ಯುನಿಚ್ ಒಲಂಪಿಕ್ಸ್, ೧೯೭೩ ವಿಶ್ವಕಪ್, ೧೯೭೬ ಮಾಂಟ್ರಿಲ್ ಒಲಂಪಿಕ್ಸ್ನ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗಳಿಸಿದ ಖ್ಯಾತಿ ಇವರದ್ದು.
ವಿಶ್ವಕಪ್ ಹಾಕಿ ಭೂಪಟದಲ್ಲಿ ಭಾರತ ಹಾಕಿ ತಂಡದ ಹೆಸರನ್ನು ಅಜರಾಮರಗೊಳಿಸಿದ ಕೊಡಗಿನ ವೀರ, ೧೯೭೫ ವಿಶ್ವಕಪ್ ಹಾಕಿ ವಿಜೇತ ತಂಡದ ಆಟಗಾರ ಪೈಕೇರ ಕಾಳಯ್ಯ, ೧೯೮೦ ಮಾಸ್ಕೋ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದ ನಾಯಕ, ಭಾರತ ತಂಡದ ತರಬೇತುದಾರ, ವಿಶ್ವಕಪ್ ಹಾಗೂ ಒಲಂಪಿಕ್ಸ್ ನಲ್ಲಿ ಹೆಸರು ಗಳಿಸಿದ, ದಕ್ಷಿಣ ರೈಲ್ವೆ ತಂಡದ ಅದ್ಭುತ ಆಟಗಾರ ಪದ್ಮಶ್ರೀ ಪುರಸ್ಕöÈತ ವಾಸುದೇವ ಭಾಸ್ಕರ್, ೧೯೮೦ ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ, ೧೯೮೪ ಲಾಸ್ ಏಂಜಲೀಸ್ ಒಲಂಪಿಕ್ಸ್, ೧೯೮೮ ಸಿಯೋಲ್ ಒಲಂಪಿಕ್ಸ್ ನ ನಾಯಕ, ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಹಾಗೂ ಇನ್ನು ಹಲವು ಪಂದ್ಯಾವಳಿಗಳಲ್ಲಿ ಆಡಿದ ಕೊಡಗಿನ ಏಕೈಕ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಎಂ.ಎA.ಸೋಮಯ್ಯ ಆಗಮಿಸಲಿದ್ದಾರೆ.
೧೯೬೮ ಒಲಂಪಿಕ್ಸ್ ನ ಗೋಲ್ ಕೀಪರ್ ಆಗಿ ಪ್ರತಿನಿಧಿಸಿದ ಆಟಗಾರ. ಒಲಂಪಿಕ್ಸ್, ವಿಶ್ವಕಪ್, ಚಾಂಪಿಯನ್ ಟ್ರೋಫಿ, ಏಷ್ಯನ್ ಗೇಮ್ಸ್ ಗಳಲ್ಲಿ ಟೆಕ್ನಿಕಲ್ ಅಫಿಶಿಯಲ್ ಆಗಿ ಬಹಳಷ್ಟು ವರ್ಷ ಸೇವೆ ಸಲ್ಲಿಸಿದ ಹಾಗೂ ಹಾಕಿ ಪಂದ್ಯಾವಳಿಯ ಬಗ್ಗೆ ಅಪಾರ ಅನುಭವವಿರುವ ಮುನೀರ್ ಸೇಟ್, ೧೯೯೬ ಹಾಗೂ ೨೦೦೦ ಒಲಂಪಿಕ್ಸ್ ಆಟಗಾರ. ಏಷ್ಯನ್ ಗೇಮ್ಸ್, ವಿಶ್ವಕಪ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಮಹಮ್ಮದ್ ರಿಯಾಜ್ ಅವರು ಆಗಮಿಸಲಿದ್ದಾರೆ. ಈ ಹಾಕಿ ದಿಗ್ಗಜರನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡು ತೆರೆದ ಜೀಪಿನಲ್ಲಿ ಕೊಡಗಿನ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್ ನೊಂದಿಗೆ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುವುದು ಎಂದು ರಶಿನ್ ಸುಬ್ಬಯ್ಯ ಮಾಹಿತಿ ನೀಡಿದರು.
ಕೊಡವ ಕೌಟುಂಬಿಕ ಹಾಕಿ ಮೂರು ಬಾರಿ ಲಿಮ್ಕಾ ದಾಖಲೆ, ಒಂದು ಬಾರಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇಂದು ಕೊಡವ ಹಾಕಿ ವಿಶ್ವ ವಿಖ್ಯಾತ ಪಡೆದಿದೆ. ಎಲ್ಲಾ ಕ್ರೀಡಾ ಪ್ರೇಮಿಗಳು ಮುದ್ದಂಡ ಹಾಕಿ ಹಬ್ಬದ ಕೊನೆಯ ದಿನದ ಅದ್ಭುತ ಕ್ಷಣವನ್ನು ವೀಕ್ಷಿಸಬೇಕು ಎಂಬುವುದು ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿಯ ಬಯಕೆ ಎಂದು ಅವರು ಹೇಳಿದರು.
ಹಾಕಿ ಜನಕನ ಕನಸು ನನಸು
ಕೌಟುಂಬಿಕ ಹಾಕಿಯ ಜನಕ ಪಾಂಡAಡ ಕುಟ್ಟಪ್ಪ ಅವರು ವಿಶ್ವಕಪ್ ವಿಜೇತರು ಹಾಗೂ ಒಲಂಪಿಕ್ ನಲ್ಲಿ ಚಿನ್ನ ಗೆದ್ದ ಕೊಡಗಿನ ಆಟಗಾರರನ್ನು ಒಂದೇ ವೇದಿಕೆಗೆ ಕರೆತರಬೇಕೆಂಬ ಕನಸು ಕಂಡಿದ್ದರು, ಅದು ಇಂದು ನನಸಾಗುತ್ತಿದೆ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ, ವಿಶ್ವಕಪ್ ವಿಜೇತರಾದ ಕಾಳಯ್ಯ ಹಾಗೂ ಗೋವಿಂದ ಅವರು ವಿಶ್ವಕಪ್ ಗೆದ್ದು ೫೦ ವರ್ಷ ತುಂಬಿದ ಸಡಗರದಲ್ಲಿದ್ದಾರೆ. ಹಾಕಿ ಪ್ರೇಮಿಗಳ ಸಮ್ಮುಖದಲ್ಲಿ ಇವರನ್ನು ಗೌರವಿಸಬೇಕು ಎಂಬ ತೀರ್ಮಾನವನ್ನು ಕೊಡವ ಹಾಕಿ ಅಕಾಡೆಮಿ ಹಾಗೂ ಮುದ್ದಂಡ ಕುಟುಂಬದವರು ತೆಗೆದುಕೊಂಡಿದ್ದಾರೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು.
೧೯೮೦ರ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ೪೫ ವರ್ಷಗಳು ತುಂಬಿದ ಸಂಭ್ರಮದಲ್ಲಿರುವ ಪದ್ಮಶ್ರೀ ಪುರಸ್ಕöÈತ ವಾಸುದೇವ ಭಾಸ್ಕರ್ ಹಾಗೂ ಕೊಡಗಿನವರಾದ ಮನೆಯಪಂಡ ಸೋಮಯ್ಯ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಗುವುದು ಎಂದರು.