ಗೋಣಿಕೊಪ್ಪಲು, ಏ. ೨೨: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೧೬ನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು.

ಮನೆಯಪಂಡ ಹಾಗೂ ಕೋಳೆರ ನಡುವಿನ ಪಂದ್ಯದಲ್ಲಿ ಕೋಳೆರ ೧ ವಿಕೆಟ್ ಕಳೆದುಕೊಂಡು ೩೨ ರನ್ ಗಳಿಸಿತು. ಗುರಿ ಬೆನ್ನತ್ತಿದ ಮನೆಯಪಂಡ ೭ ವಿಕೆಟ್ ಕಳೆದುಕೊಂಡು ೨೬ ರನ್ ಗಳಿಸಿ ಸೋಲು ಅನುಭವಿಸಿತು.

ಚೋವಂಡ ವಿರುದ್ಧ ಕೋಡಿರ ವಿಜಯ ಸಾಧಿಸಿತು. ಕೋಡಿರ ನೀಡಿದ್ದ ೬೨ ರನ್ ಗುರಿ ಬೆನ್ನತ್ತಿದ ಚೋವಂಡ ೬೧ ರನ್ ಕಲೆಹಾಕಿ ೧ ರನ್‌ಗಳ ಅಂತರದಲ್ಲಿ ವಿರೋಚಿತ ಸೋಲನ್ನು ಕಂಡಿತು.

ಕೋಲಿರ (ಚೆಯ್ಯಂಡಾಣೆ) ವಿರುದ್ಧ ಕೊಚ್ಚೇರ ಭರ್ಜರಿ ೬೦ ರನ್ ಅಂತರದ ಗೆಲುವು ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಚ್ಚೇರ ಬರೋಬ್ಬರಿ ೧೦೨ ರನ್ ಕಲೆ ಹಾಕಿತು. ಇದನ್ನು ಬೆನ್ನತ್ತಿದ ಕೋಲಿರ ೨ ವಿಕೆಟ್ ಕಳೆದುಕೊಂಡು ಕೇವಲ ೪೨ ರನ್ ಗಳಿಸಲು ಶಕ್ತವಾಯಿತು.

ಕಲಿಯಾಟಂಡ ವಾಕ್‌ಓವರ್ ಹಿನ್ನೆಲೆ ನಾಪಂಡ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡಿತು. ಬದಲೇರ ವಿರುದ್ಧ ಪುಳ್ಳಂUಡ ಗೆಲುವು ತನ್ನದಾಗಿಸಿಕೊಂಡಿತು. ಪುಳ್ಳಂಗಡ ೪ ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿತು. ಬದಲೇರ ೬ ವಿಕೆಟ್ ಕಳೆದುಕೊಂಡು ೩೪ ರನ್ ಕಲೆಹಾಕಿ ಅಲ್ಪಮೊತ್ತದ ಅಂತರದಿAದ ಪಂದ್ಯಾಟದಿAದ ನಿರ್ಗಮಿಸಬೇಕಾಯಿತು.

ಕೂತಂಡ ವಿರುದ್ಧ ಮಲಚೀರ ಗೆಲುವು ಪಡೆಯಿತು. ೩ ವಿಕೆಟ್ ನಷ್ಟಕ್ಕೆ ೭೩ ರನ್ ಬಾರಿಸಿದ ಮಲಚೀರದ ಗುರಿ ಬೆನ್ನತ್ತಿದ ಕೂತಂಡ ೫ ವಿಕೆಟ್ ನಷ್ಟಕ್ಕೆ ೩೯ ರನ್ ಪೇರಿಸಿ ಸೋಲು ಕಂಡಿತು.

ಬೊಳ್ಳೆಪಂಡ ಹಾಗೂ ಅರಮಣಮಾಡ (ಬೇಗೂರ್) ನಡುವಿನ ಪಂದ್ಯದಲ್ಲಿ ಅರಮಣಮಾಡ ೧ ವಿಕೆಟ್ ಕಳೆದುಕೊಂಡು ೫೫ ರನ್ ಕಲೆ ಹಾಕಿತು. ಬೊಳ್ಳೆಪಂಡ ೫ ವಿಕೆಟ್ ಕಳೆದುಕೊಂಡು ೫೪ ಗಳಿಸಿ ೧ ರನ್ ಅಂತರದಲ್ಲಿ ಸೋಲು ಅನುಭವಿಸಿತು.

- ಹೆಚ್.ಕೆ.ಜಗದೀಶ್