ಸುAಟಿಕೊಪ್ಪ: ಸಮೀಪದ ಪನ್ಯದ ಉದ್ದಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ದೈವಗಳ ನೇಮೋತ್ಸವ ಎರಡು ದಿನಗಳ ಕಾಲ ನಡೆಯಿತು. ಮೊದಲ ದಿನ ಬೆಳಿಗ್ಗೆ ಗಣಹೋಮ, ಸತ್ಯ ನಾರಾಯಣ ಪೂಜೆ ನೆರವೇರಿತು.

ರಾತ್ರಿ ೮ ಗಂಟೆಗೆ ಭಂಡಾರ ತೆಗೆಯಲಾಯಿತು. ೧೦ ಗಂಟೆಯ ನಂತರ ಶಕ್ತಿ ದೈವಗಳಾದ ಪಾಷಾಣ ಮೂರ್ತಿ(ಕಲ್ಲುರ್ಟಿ) ಮತ್ತು ಪಂಜುರ್ಲಿ ಗುಳಿಗ ದೈವಗಳ ಕೋಲ ನಡೆಯಿತು.

ಎರಡನೇ ದಿನ ಬೆಳಿಗ್ಗೆ ೬ ಗಂಟೆಯಿAದ ಗುಳಿಗ ಮತ್ತು ಕೊರಗಜ್ಜನ ನೇಮ, ಅಗೇಲು ಸೇವೆ ನಡೆಯಿತು. ಭಕ್ತರು ತಮ್ಮ ಹರಕೆಗಳನ್ನು ದೈವಶಕ್ತಿಗಳಿಗೆ ಅರ್ಪಿಸಿದರು. ಮುಖ್ಯಸ್ಥರಾದ ಮೋನಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಮಣಿ ಮುಖೇಶ್, ಕೆ.ಪಿ. ಜಗನ್ನಾಥ್, ನಾಗೇಶ್ ಪೂಜಾರಿ, ರಮೇಶ್ ಪೂಜಾರಿ, ಪದ್ಮನಾಭ, ಬಿ.ಕೆ. ಮೋಹನ್ ದೇಜಪ್ಪ, ಇತರರು ಇದ್ದರು.ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನ

ಚೆಯ್ಯಂಡಾಣೆ: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ ೧೫ನೇ ವಾರ್ಷಿಕೋತ್ಸವ ತಾ. ೨೭ ರಿಂದ ವಿವಿಧ ಕಾರ್ಯಕ್ರಮಗಳ ಮೂಲಕ ತಾ. ೩೦ ರವರೆಗೆ ನಡೆಯಲಿದೆ.

ತಾ. ೨೭ ರಂದು ಬೆಳಿಗ್ಗೆ ೯ ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ, ಸಂಜೆ ೫ಕ್ಕೆ ಬಾಚಮಂಡ ತಕ್ಕರ ಮನೆಯಿಂದ ಭಂಡಾರ ಆಗಮಿಸುವುದು, ರಾತ್ರಿ ೭ಕ್ಕೆ ಅಂದಿ ಬೊಳಕ್, ತೂಚಂಬಲಿ ಮತ್ತು ದೇವರು ಹೊರಗೆ ಬರುವುದು ಹಾಗೂ ಮಹಾಪೂಜೆ ನಡೆಯಲಿದೆ.

ತಾ. ೨೮ ರಂದು ಪ್ರಾತಕಾಲ ೫.೩೦ ಗಂಟೆಗೆ ದೇವರ ನೃತ್ಯ ೯.೩೦ಕ್ಕೆ ವಿಶೇಷ ಪೂಜೆ, ೧೧ಕ್ಕೆ ಎತ್ತುಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಹಾಪೂಜೆ ನಂತರ ಅನ್ನದಾನ, ಅಪರಾಹ್ನ ೨ ಗಂಟೆಗೆ ದೇವರು ಹೊರಗೆ ಬರುವುದು ಮತ್ತು ನೆರಪು ನೃತ್ಯ, ೩ ಗಂಟೆಗೆ ದೇವರು ಪೋನ್ನೊಲ ಸಾರ್ಥಾವು ದೇವಸ್ಥಾನಕ್ಕೆ ಮಲೆ ಮುರಿಯುವುದು, ಪೊನ್ನೋಲ ದೇವಸ್ಥಾನದಲ್ಲಿ ಪೂಜೆ ಸಂಜೆ ೭ಕ್ಕೆ ಮಂಟಪದಲ್ಲಿ ವಸಂತ ಪೂಜೆ ರಾತ್ರಿ ೮ಕ್ಕೆ ಮಹಾಪೂಜೆ ಮತ್ತು ಅನ್ನದಾನ ನಡೆಯಲಿದೆ.

ತಾ. ೨೯ ರಂದು ಬೆಳಿಗ್ಗೆ ೯ ಗಂಟೆಯಿAದ ವಿಶೇಷ ಪೂಜೆ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ೧.೩೦ಕ್ಕೆ ವಾರ್ಷಿಕ ಮಹಾಸಭೆ, ೩.೩೦ಕ್ಕೆ ದೇವರು ಅವಭೃತ ಸ್ನಾನಕ್ಕೆ ಹೊರಡುವುದು, ನಂತರ ದೇವರ ನೃತ್ಯ, ಮಹಾಪೂಜೆ, ಅನ್ನದಾನ ನಡೆಯಲಿದೆ.

ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಭಂಡಾರ ಲೆಕ್ಕ ಮಾಡುವುದು, ಶುದ್ಧ ಕಲಶ ಸಮಾರಾಧನೆ ಪೂಜೆ, ಮಂತ್ರಾಕ್ಷತೆ, ದೇವತಕ್ಕರ ಮನೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದೆ.ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ

ವೀರಾಜಪೇಟೆ: ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಚಂಡಿಕಾ ಹೋಮ ಶ್ರದ್ಧಾಭಕ್ತಿಯಿಂದ ಜರುಗಿತು.

ಮೊದಲಿಗೆ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ನಾಗ, ಶ್ರೀ ವನದುರ್ಗಾ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಯಿತು. ಮಹಾಗಣಪತಿ ಹೋಮ, ಶ್ರೀ ಲಕ್ಷಿ÷್ಮ ಸತ್ಯನಾರಾಯಣ ಪೂಜೆ ಶಾಸ್ತೊçÃಕ್ತವಾಗಿ ನಡೆಯಿತು. ಶ್ರೀ ಲಕ್ಷಿ÷್ಮ ಸತ್ಯನಾರಾಯಣ ಸ್ವಾಮಿಗೆ ಹಾಗೂ ಶ್ರೀ ದೇವಿಗೆ ಅಲಂಕಾರ ಸೇವೆ, ಅಷ್ಟೋತ್ತರ ಪಠಣ, ಕುಂಕುಮಾರ್ಚನೆ, ನೈವೇದ್ಯ ಅಭಿಷೇಕ ಸೇವೆಗಳು ನಡೆದವು. ಮಹಾ ಚಂಡಿಕಾಯಾಗದ ಸಂದರ್ಭದಲ್ಲಿ ವಿಶೇಷವಾಗಿ ಅಷ್ಟಾವದನ ಸೇವೆ ನಡೆದು ಚಂಡೆ ಬಳಗದವರಿಂದ ಚಂಡೆ ಸೇವೆ, ಭರತನಾಟ್ಯ, ಭಜನೆ, ದೇವಿಯ ಶ್ಲೋಕ ಪಠಣ ಸೇವೆಗಳು ನಡೆದವು. ಧಾರ್ಮಿಕ ಕಾರ್ಯಕ್ರಮಗಳು ಪುತ್ತೂರಿನ ಪುರೋಹಿತರದ ಪ್ರವೀಣ್ ಭಟ್ ನೇತೃತ್ವದ ಅರ್ಚಕರ ತಂಡ ಹಾಗೂ ಹೆಗ್ಗಳ ಗ್ರಾಮದ ವಾಮನ ಮೂರ್ತಿ ಭಟ್, ವೇಣುಗೋಪಾಲ್ ಭಟ್ ರವರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು, ವೀರಾಜಪೇಟೆ ನಗರ, ಬೆಟೋಳಿ, ಹೆಗ್ಗಳ, ಆರ್ಜಿ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಸೇವೆ ಜರುಗಿತು.*ಗೋಣಿಕೊಪ್ಪ: ಮಾಯಮುಡಿ ಗ್ರಾಮದ ಕಲ್ತೋಡು ಮುತ್ತಪ್ಪ ದೇವರ ವಾರ್ಷಿಕೋತ್ಸವ ನಡೆಯಿತು.

ಗಣಪತಿ ಹೋಮ, ಮುತ್ತಪ್ಪನ್ ವೆಳ್ಳಾಟಂ, ಅನ್ನಸಂತರ್ಪಣೆ ನೆರವೇರಿತು. ಭಾನುವಾರ ವಿವಿಧ ಆಚರಣೆಗಳು ನಡೆದವು. ಭಕ್ತರು ಪೈಂಗುತ್ತಿ, ಮುತ್ತಪ್ಪನ್ ವೆಳ್ಳಾಟಂ ಸೇವೆ ಮೂಲಕ ಹರಕೆ ಒಪ್ಪಿಸಿದರು.ಹೆಗ್ಗಳ ಶ್ರೀ ಅಯ್ಯಪ್ಪ ಭಗವತಿ ದೇವರ ಉತ್ಸವ

ವೀರಾಜಪೇಟೆ: ಬೇಟೊಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಶ್ರೀ ಅಯ್ಯಪ್ಪ ಭಗವತಿ ದೇವರ ವಾರ್ಷಿಕ ಉತ್ಸವ ತಾ. ೨೩ ರಿಂದ ೨೭ ರವರೆಗೆ ನಡೆಯಲಿದೆ.

ತಾ. ೨೩ ರಂದು ಪಟ್ಟಣಿ, ತಾ. ೨೪ ರಂದು ಎತ್ತುಪೋರಾಟ ದೊಡ್ಡಹಬ್ಬ, ತಾ. ೨೫ ರಂದು ಕುದುರೆ, ತಾ. ೨೬ ರಂದು ಚೂಳೆಕಳಿ, ತಾ. ೨೭ ರಂದು ಶುದ್ಧ ಕಲಶ ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮ ಕಾಪಳ ಕಾಲೋನಿಯ ದೇವರ ವಾರ್ಷಿಕ ಹಬ್ಬ ನೆರವೇರಿತು.

ವಾರ್ಷಿಕ ಹಬ್ಬದಲ್ಲಿ ಶ್ರೀ ಕುಞ್ಞಬೊಳುತ್ತು, ವಿಷ್ಣುಮೂರ್ತಿ, ಬೀರ, ಭದ್ರಕಾಳಿ ಹಾಗೂ ಚಟ್ಟಿ ಅಜ್ಜಪ್ಪ ಮತ್ತು ಪಡೇಬೀರ ದೇವರ ತೆರೆ ಮಹೋತ್ಸವ ಹಾಗೂ ಇನ್ನಿತರ ಆಚರಣೆಗಳು ಸಾಂಪ್ರದಾಯಿಕವಾಗಿ ನೆರವೇರಿದವು. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷರಾದ..ಕೆ.ಟಿ. ಧನು, ಕಾರ್ಯದರ್ಶಿ ಕೆ.ಟಿ. ತಮ್ಮಯ್ಯ, ಉಪಾಧ್ಯಕ್ಷ ಕೆ.ಎಂ ಮಿಲನ್, ತಕ್ಕ ಮುಖ್ಯಸ್ಥರಾದ ಪೊನ್ನಪ್ಪ, ಕಾಳಪ್ಪ, ಚಂಗಪ್ಪ. ಜಾಮಿಯಪ್ಪ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.ಪರಿವಾರ ದೈವಗಳ ನೇಮೋತ್ಸವ

ವೀರಾಜಪೇಟೆ: ಪÀರಿವಾರ ದೈವಗಳ ವಾರ್ಷಿಕ ನೇಮೋತ್ಸವ ತಾ. ೨೬ ಮತ್ತು ೨೭ ರಂದು ಕಡಂಗಮುರೂರು ಗ್ರಾಮದಲ್ಲಿ ನಡೆಯಲಿದೆ.

ಕಡಂಗಮುರೂರು ಗ್ರಾಮದ ೪ನೇ ಮೈಲಿಯಲ್ಲಿರುವ ಪರಿವಾರ ದೈವಗಳ ನೇಮೋತ್ಸವ ತಾ. ೨೬, ೨೭ ರಂದು ನಡೆಯಲಿದೆ. ತಾ. ೨೬ ರಂದು ಸಂಜೆ ೬.೩೦ಕ್ಕೆ ದೇವರ ಅಲಂಕಾರ ಸೇವೆ, ರಾತ್ರಿ ೭ ಗಂಟೆಗೆ ದೇವರ ವಿಶೇಷ ಸೇವೆ, ೮ ಗಂಟೆಗೆ ಚಂಡೆ ವಾದ್ಯ, ೯ ಗಂಟೆಗೆ ಪಾಷಾಣ ಮೂರ್ತಿ ಹಾಗೂ ಪರಿವಾರ ದೈವಗಳ ದರ್ಶನ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಣ್ಣಪ್ಪ ಪಂಜುರ್ಲಿ ದೈವ ನೇಮ. ವರ್ಣ ಪಂಜುರ್ಲಿ ದೈವದ ನೇಮ, ಕೊನೆಯಲ್ಲಿ ಪಾಷಾಣ ಮೂರ್ತಿ ದೈವದ ನೇಮ ನಡೆಯಲಿದೆ. ತಾ. ೨೭ ರಂದು ಬೆಳಿಗ್ಗೆ ೯ ಗಂಟೆಗೆ ಗುಳಿಗ ದೈವದ ನೇಮ, ಕೊರಗಜ್ಜ ನೇಮ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.ಸೋಮವಾರಪೇಟೆ: ಪಟ್ಟಣದ ಮಹದೇಶ್ವರ ಬ್ಲಾಕ್‌ನಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ಮತ್ತು ಚಾಮುಂಡೇಶ್ವರಿ ಅಮ್ಮನವರ ೮ನೇ ವಾರ್ಷಿಕ ಮಹಾಪೂಜೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.

ದೇವಾಲಯದಲ್ಲಿ ಮಹಾಗಣಪತಿ ಹೋಮ, ದುರ್ಗಾಹೋಮ ಮತ್ತು ಕಲಶ ಪ್ರತಿಷ್ಠಾಪನೆ, ನವಕ ಕಲಶ ಪ್ರತಿಷ್ಠಾಪನೆ, ಕಲಶಾಭಿಷೇಕ, ಅಲಂಕಾರ, ಮಹಾಪೂಜೆ ನಡೆಯಿತು. ಸಂಜೆ ಪಂಚ ದುರ್ಗಾದೀಪ ನಮಸ್ಕಾರ, ಮಹಾಮಂಗಳಾರತಿ ನೆರವೇರಿದವು. ಅರ್ಚಕ ಜಗದೀಶ ಉಡುಪ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಮಹದೇಶ್ವರ ಭಕ್ತವೃಂದದ ಸಮಿತಿ ಅಧ್ಯಕ್ಷ ಆರ್. ಸುರೇಶ್, ಗೌರವಾಧ್ಯಕ್ಷ ದೊರೆ, ಕಾರ್ಯದರ್ಶಿ ವಿ.ಸಿ. ಲೋಕೇಶ್, ಖಜಾಂಚಿ ಗೋವಿಂದ, ಪದಾಧಿಕಾರಿಗಳಾದ ತಿಮ್ಮಶೆಟ್ಟಿ, ದಯಾನಂದ, ಮನೋಹರ, ಭೀಮಯ್ಯ, ನಾಗರಾಜು, ಮಹೇಶ, ಬಿಂದು, ಪಾರ್ವತಿ, ರಾಜು, ಅಣ್ಣಪ್ಪ ಸೇರಿದಂತೆ ಸಮಿತಿ ಸದಸ್ಯರು, ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.ಚೆಯ್ಯಂಡಾಣೆ: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್‌ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ವಾರ್ಷಿಕ ಉತ್ಸವವು ವಿಜೃಂಭಣೆಯಿAದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಿತು.

ತಾ. ೧೩ ರಂದು ಬೆಳಿಗ್ಗೆ ೯ ಗಂಟೆಗೆ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಭಂಡಾರ ಆಗಮಿಸುವುದರ ಮೂಲಕ ಧಾರ್ಮಿಕ ವಿಧಿವಿಧಾನಗಳು ಆರಂಭಗೊAಡವು. ನಂತರ ತಾ. ೧೭ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಎತ್ತುಪೋರಾಟ, ಮಹಾಪೂಜೆ, ಅಂದಿಬೊಳಕ್, ತೆಂಗಿನಕಾಯಿ ಪೊರುವುದು, ಕಣಿ ಪೂಜೆ, ವಿಶೇಷ ಪೂಜೆ, ವಾರ್ಷಿಕ ಮಹಾಸಭೆ, ದೇವತಕ್ಕರ ಮನೆಗೆ ಭಂಡಾರ ಹೊರಡುವುದು, ಪುದಿಯೋದಿ ದೇವರಿಗೆ ಮೇಲೇರಿ ಸೌದೆಕಡಿಯುವುದು, ದೇವತಕ್ಕರ ಮನೆಯಿಂದ ಭಂಡಾರ ಬರುವುದು, ಮೊದಲ ತೋತ, ಎರಡನೇ ತೋತ, ಮೆಲೇರಿ ಅಗ್ನಿ ಹಾಕುವುದು, ಮೂರನೇ ತೋತ, ಬಿರಾಳಿ ತೆರೆ, ಪುದಿಯೋದಿ ತೆರೆ, ಭದ್ರಕಾಳಿ ತೆರೆ ನಡೆದು ನಂತರ ತಕ್ಕರ ಮನೆಗೆ ಭಂಡಾರ ಹಿಂದಿರುಗಿಸಲಾಯಿತು.

ಈ ಬಾರಿ ಸ್ಥಳೀಯ ೪ ಜನ ತಿರುವಳಕಾರರು, ಕೇರಳದ ಚಂಡೆ ಮೇಳದ ತಂಡದವರಿAದ ಚಂಡೆ ವಾದ್ಯ ಹಾಗೂ ಆಕರ್ಷಕ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ನಾಪೋಕ್ಲು: ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ದೇವರ ವಿಗ್ರಹವನ್ನು ಶ್ರದ್ಧಾಭಕ್ತಿಯಿಂದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದೊಂದಿಗೆ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮಾಡುವ ತೀರ್ಮಾನವನ್ನು ಸಮಿತಿಯು ಕೈಗೊಂಡಿದೆ.

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಡ್ಯದ ಸೋಮಣ್ಣ, ಉಪಾಧ್ಯಕ್ಷರಾಗಿ ಚೊಕ್ಕಾಡಿ ಅಪ್ಪಯ್ಯ, ಕಾರ್ಯದರ್ಶಿಯಾಗಿ ಪಟ್ಟಡ ಸುಗುಣ ಕುಮಾರ್, ಖಜಾಂಚಿಯಾಗಿ ಬೆಳ್ಯನ ಚಂದ್ರಪ್ರಕಾಶ್, ಅರ್ಚಕರಾಗಿ ದಿನೇಶ್ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕುಮಾರಳ್ಳಿ ಗ್ರಾಮದಲ್ಲಿ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿAದ ನಡೆಯಿತು.

ಸುಗ್ಗಿ ಕಟ್ಟೆಯಲ್ಲಿ ಗ್ರಾಮಸ್ಥರು ಶ್ರೀ ಸಬ್ಬಮ್ಮ ದೇವರಿಗೆ ಸಾಮೂಹಿಕ ಪೂಜೆ ಸಲ್ಲಿಸಿ, ನಾಡಿನ ಸುಭೀಕ್ಷೆಗಾಗಿ ಪ್ರಾರ್ಥಿಸಿದರು. ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಕೊಂಡ ಹಾಯುವ ಮೂಲಕ ವಿಶೇಷ ಮಡಿವಂತಿಕೆಯೊAದಿಗೆ ಪೂಜೆ ಸಲ್ಲಿಸಲಾಯಿತು.

ಸಮಿತಿಯ ಅಧ್ಯಕ್ಷ ದೇಶರಾಜು, ಉಪಾಧ್ಯಕ್ಷ ಎಂ.ಎಸ್. ತಮ್ಮಯ್ಯ ಹೆಗ್ಗಡಮನೆ, ಕಾರ್ಯದರ್ಶಿ ಕಿರಣ್ ಬೀದಳ್ಳಿ, ಖಜಾಂಚಿ ಅವಿನಾಶ್ ಕುಮಾರಳ್ಳಿ ಅವರುಗಳು ಸುಗ್ಗಿಯ ಉಸ್ತುವಾರಿ ವಹಿಸಿದ್ದರು. ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಹೆಗ್ಗಡಮನೆ, ಬೀದಳ್ಳಿ, ಕುಮಾರಳ್ಳಿ, ಹಂಚಿನಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಮಾಲ್‌ಮನೆ, ಕೋಡಳ್ಳಿ ಗ್ರಾಮಗಳ ನೂರಾರು ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಭಾಗಿಯಾಗಿದ್ದರು.ಸೋಮವಾರಪೇಟೆ: ಸಮೀಪದ ಕೂಗೆಕೋಡಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಹಿಂದಿನಿAದ ನಡೆದು ಬಂದ ಪದ್ದತಿಯಂತೆ ಪ್ರತಿ ಮನೆಯಿಂದ ಒಬ್ಬ ಸದಸ್ಯರಂತೆ ರಾತ್ರಿ ಪೂರ್ತಿ ದೇವಸ್ಥಾನದಲ್ಲಿಯೇ ಇದ್ದು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಕಳಸದೊಂದಿಗೆ ದೇವಾಲಯಕ್ಕೆ ಆರತಿ ತಂದು ಪೂಜೆ ಸಲ್ಲಿಸಿದರು.

ಗ್ರಾಮ ದೇವತೆಯ ಗಂಗಾ ಸ್ನಾನದ ನಂತರ ವಾದ್ಯಗೋಷ್ಠಿ ಮತ್ತು ಪಟಾಕಿಗಳನ್ನು ಸಿಡಿಸುತ್ತಾ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಕರೆತರಲಾಯಿತು. ನಂತರ ದೇವಸ್ಥಾನದಲ್ಲಿ ಕೆಂಡ ಹಾಯುವುದು ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ಜರುಗಿದವು. ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.