ಗೋಣಿಕೊಪ್ಪಲು, ಏ. ೨೨: ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ನೀಡುತ್ತಿರುವ ಗೋಣಿಕೊಪ್ಪಲುವಿನ ಬಿಬಿಸಿ ಕ್ಲಬ್ ವತಿಯಿಂದ ಆಯೋಜಿಸಿದ್ದ ೨೦ ದಿನಗಳ ಬಾಸ್ಕೆಟ್ ಬಾಲ್ ತರಬೇತಿ ಶಿಬಿರವು ಯಶಸ್ವಿಯಾಗಿ ಮುಕ್ತಾಯ ಕಂಡಿತು.
ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ೨೦ ವಿದ್ಯಾರ್ಥಿಗಳು ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದರು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಿಬಿಸಿ ಕ್ಲಬ್‌ನ ಅಧ್ಯಕ್ಷ ನಿವೃತ್ತ ಲೆ.ಕರ್ನಲ್ ಒಲಂಪಿಯನ್ ಬಾಳೆಯಡ ಸುಬ್ರಮಣಿ ಮಾತನಾಡಿ, ಬಿಬಿಸಿ ಕ್ಲಬ್‌ನಲ್ಲಿ ಅಭ್ಯಾಸ ನಡೆಸಿದ್ದ ನೂರಾರು ಕ್ರೀಡಾಪಟುಗಳು ಅತ್ಯುನ್ನತ ಹುದ್ದೆಗಳನ್ನು ಪಡೆಯುವ ಮೂಲಕ ದೇಶ ಹಾಗೂ ವಿದೇಶದಲ್ಲಿ ತಮ್ಮ ನೌಕರಿಗಳನ್ನು ಕಂಡುಕೊAಡಿದ್ದಾರೆ.
೫೦ ವರ್ಷ ಇತಿಹಾಸವಿರುವ ಬಿಬಿಸಿ ಕ್ಲಬ್‌ಅನ್ನು ಚೆಪ್ಪುಡಿರ ಸುಭಾಶ್ ಮುತ್ತಣ್ಣ ಆರಂಭಿಸಿದರು. ನೂರಾರು ಕ್ರೀಡಾಪಟುಗಳು ಪ್ರತಿನಿತ್ಯ ಮೈದಾನಕ್ಕೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದರು. ಇದೀಗ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಲು ಶಿಬಿರಗಳನ್ನು ಆಯೋಜಿಸಲಾಗಿದೆ. ಕ್ರೀಡಾಪಟುಗಳಿಗೆ ಉಚಿತವಾಗಿ ಶಿಬಿರವನ್ನು ಆಯೋಜಿಸಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಮತ್ತೊಂದು ಬಾಸ್ಕೆಟ್‌ಬಾಲ್ ಶಿಬಿರವನ್ನು ಆಯೋಜಿಸಲಾಗುವುದು ಎಂದರು.
ಬಿಬಿಸಿ ಕ್ಲಬ್‌ನ ಉಪಾಧ್ಯಕ್ಷ ಪಳಂಗAಡ ವಾಣಿಚಂಗಪ್ಪ ಮಾತನಾಡಿ, ಹಲವು ವರ್ಷಗಳ ನಂತರ ಮಹಿಳೆಯರಿಗಾಗಿ ಬಾಸ್ಕೆಟ್‌ಬಾಲ್ ತರಬೇತಿ ಶಿಬಿರ ಆಯೋಜನೆ ಮಾಡಲಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನುರಿತ ತರಬೇತುದಾರರಿಂದ ತರಬೇತಿ ನೀಡಲಾಗಿದೆ.ಹೆಣ್ಣು ಮಕ್ಕಳಲ್ಲಿ ಕ್ರೀಡೆಗೆ ಹೆಚ್ಚಿನ ಆಸಕ್ತಿ ಮೂಡಿಸಲಾಗಿದೆ. ಮುಂದೆಯು ಕೂಡ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾವೇರಿ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ನಿರ್ದೇಶಕರಾದ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ,ಕೊಂಗAಡ ಅಚ್ಚಯ್ಯ, ಪಳಂಗAಡ ಸುರೇಶ್ ಚಂಗಪ್ಪ, ಅಜ್ಜಿಕುಟ್ಟಿರ ಮುತ್ತಣ್ಣ, ಕರ್ತಮಾಡ ಸೋಮಣ್ಣ, ಕೇಚೆಟ್ಟಿರ ರವಿ ದೇವಯ್ಯ, ಮನೆಯಪಂಡ ಮೋಂತಿ ಉತ್ತಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು. ತರಬೇತುದಾರರಾಗಿ ಚೀಯಣಮಾಡ ಸನ್ನು ಗಣಪತಿ, ಚೊಟ್ಟೆಯಂಗಡ ಸೋಮಯ್ಯ ಕಾರ್ಯನಿರ್ವಹಿಸಿದರು.