ಮಡಿಕೇರಿ, ಏ. ೨೨: ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಮೂರನೇ ದಿನವಾದ ಮಂಗಳವಾರದAದು ಮಡಿಕೇರಿ ಕ್ರಿಕೆಟ್ ಕ್ಲಬ್ ಹಾಗೂ ಬಿಳಿಗೇರಿ ಪ್ಲಾಂರ‍್ಸ್ ಕ್ಲಬ್ ಗೆಲುವು ದಾಖಲಿಸಿತು.
ಲಾ ಕಗ್ಗೋಡ್ಲು ಹಾಗೂ ಮಡಿಕೇರಿ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಡಿಕೇರಿ ಕ್ರಿಕೆರ‍್ಸ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೨೩ ರನ್‌ಗಳನ್ನು ದಾಖಲಿಸಿ ಗುರಿ ನೀಡಿತು. ಇದನ್ನು ಬೆನ್ನತ್ತಿದ ಲಾ ಕಗ್ಗೋಡ್ಲು ತಂಡ ೨೦ ಓವರ್‌ಗೆ ೯ ವಿಕೆಟ್ ಕಳೆದುಕೊಂಡು ೧೪೨ ರನ್‌ಗಳನ್ನಷ್ಟೆ ದಾಖಲಿಸಲು ಶಕ್ತವಾಗಿ ೮೧ ರನ್‌ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು.
ಜಿ. ಕಿಂಗ್ಸ್ ಸಿದ್ದಲಿಂಗಪುರ ವಿರುದ್ಧ ಬಿಳಿಗೇರಿ ಪ್ಲಾಂರ‍್ಸ್ ಕ್ಲಬ್ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ಜಿ. ಕಿಂಗ್ಸ್ ೧೭ ಓವರ್‌ನಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ೮೯ ರನ್ ದಾಖಲಿಸಿತ್ತು. ಸುಲಭ ಗುರಿ ಬೆನ್ನತ್ತಿದ ಪ್ಲಾಂರ‍್ಸ್ ಕ್ಲಬ್ ೮ ಓವರ್‌ನಲ್ಲಿಯೇ ಯಾವುದೇ ವಿಕೆಟ್ ನಷ್ಟವಿಲ್ಲದೆ ೯೨ ರನ್ ಪೇರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಶತಕ ಸಂಭ್ರಮ
ಮಡಿಕೇರಿ ಕ್ರಿಕೆಟ್ ಕ್ಲಬ್‌ನ ಎ.ಎಸ್. ರಾಹುಲ್ ೬೨ ಬಾಲ್‌ಗೆ ೧೪೧ ರನ್ ಬಾರಿಸಿ ತನ್ನ ೨ನೇ ಶತಕವನ್ನು ಟೂರ್ನಿಯಲ್ಲಿ ದಾಖಲಿಸಿದರು. ನಿತಿನ್ ಚೊಕ್ಕಾಡಿ, ಜಿ.ಸಿ. ಜಶ್ವಂತ್ ಅರ್ಧ ಶತಕ ಸಿಡಿಸಿದರು. ಇದರೊಂದಿಗೆ ಮಡಿಕೇರಿ ಕ್ರಿಕೆಟ್ ಕ್ಲಬ್ ದಾಖಲಿಸಿದ ೨೨೩ ರನ್ ಟೂರ್ನಿಯ ಅತ್ಯಂತ ಹೆಚ್ಚು ರನ್ ಎಂಬ ಕೀರ್ತಿಗೂ ಪಾತ್ರವಾಯಿತು. ಬಿಳಿಗೇರಿ ಪ್ಲಾಂರ‍್ಸ್ ಕ್ಲಬ್‌ನ ಜಗತ್ ದಂಬೆಕೋಡಿ ೪ ವಿಕೆಟ್ ತೆಗೆದು ಮಿಂಚಿದರು.