ಮಡಿಕೇರಿ, ಏ. ೧೭: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ೩೧ನೇ ವರ್ಷದ ಎಡಮ್ಯಾರ್ ೧ನ್ನು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆಯ ಮೂಲಕ ಆಚರಿಸಿತು.
ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಆರ್.ಎಂ.ಸಿ. ಆವರಣದಿಂದ ಬಸ್ ನಿಲ್ದಾಣದವರೆಗೆ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆಯಲ್ಲಿ ಸಾಗಿದ ಸದಸ್ಯರು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.
ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಎನ್.ಯು. ನಾಚಪ್ಪ ಅವರು, ಪೊಂಬೊಳಕ್ ಮೆರವಣಿಗೆ ಆಚರಣೆಯು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಶ್ರೀಮಂತ ಪರಂಪರೆ ಮತ್ತು ಕಾನೂನು ಬದ್ಧ ಸಾಂವಿಧಾನಿಕ ಹಕ್ಕುಗಳ ಕುರಿತು ಜಗತ್ತಿಗೆ ತಿಳಿಸುವ ಉದ್ದೇಶವಾಗಿದೆ ಎಂದರು.
ಕೊಡವ ಜನಾಂಗೀಯ ಸಮುದಾಯ ಪಂಚಾAಗದ ಪ್ರಕಾರ ಸೌರಮಾನ ಕ್ಯಾಲೆಂಡರ್ ಕೊಡವ ಬುಡಕಟ್ಟಿನ ಹೊಸ ವರ್ಷ ಅಂದರೆ ಎಡಮ್ಯಾರ್-೧ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಹೊಂದಿಕೆಯಾಗುತ್ತದೆ. ಎಡಮ್ಯಾರ್-೧ ಕೊಡವ ಜನಾಂಗದ ಸೌರಮಾನ ಹೊಸ ವರ್ಷವನ್ನು ಪ್ರಕೃತಿಯ ಚಕ್ರದಲ್ಲಿ ಮೊದಲ ಹಬ್ಬವೆಂದು ಪರಿಗಣಿಸಲಾಗಿದೆ. ಕೊಡವ ಮಂಗಳಕರ ಹೊಸ ವರ್ಷವನ್ನು ನಾವು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದೇವೆ ಎಂದರು.
ಚಾರಿತ್ರಿಕ ದಂತಕತೆಗಳಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಎಂ.ಕೆ. ಗಾಂಧಿ ಅವರುಗಳ ಆದರ್ಶವಾದ ಇಂದಿಗೂ ಪ್ರಸ್ತುತ ಎಂದು ತಿಳಿಸಿದರು. ಡಾ. ಅಂಬೇಡ್ಕರ್ ಅವರು ರಾಷ್ಟçದಾದ್ಯಂತ ಜಾತಿ, ಮತ, ಧರ್ಮ, ಜನಾಂಗ, ಲಿಂಗ, ಜನಾಂಗೀಯತೆ, ಸಮುದಾಯದ ಗಾತ್ರ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಜನರ ಯೋಗಕ್ಷೇಮಕ್ಕಾಗಿ ಭೂಮಿಯ ಮೇಲಿನ ಶ್ರೇಷ್ಠ ಸಂವಿಧಾನವನ್ನು ಧರ್ಮಗ್ರಂಥವನ್ನು ರಚಿಸಿದ್ದಾರೆ.
ಎಂ.ಕೆ. ಗಾಂಧಿಯವರು ತಮ್ಮ ಹಕ್ಕುಗಳನ್ನು ಸಾಧಿಸಲು ಇಡೀ ಜಗತ್ತಿಗೆ ಶಾಂತಿಯುತ ಮತ್ತು ಸತ್ಯವಾದ ಅಹಿಂಸಾತ್ಮಕ ಸತ್ಯಾಗ್ರಹವನ್ನು ಕಲಿಸಿದರು. ಸಿ.ಎನ್.ಸಿ. ಈರ್ವರು ಶ್ರೇಷ್ಠ ದಾರ್ಶನಿಕರ ಸಂದೇಶಗಳನ್ನು ಅಂತರ್ಗತ ಮಾಡಿಕೊಂಡಿದೆ. ಗೆಲುವಿನ ತನಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಸೌಮ್ಯ ಪೃಥ್ವಿ, ಸರ್ವಶ್ರೀ ಕೊಲ್ಲೀರ ಗಯಾ, ಬಾಚರಣಿಯಂಡ ಚಿಪ್ಪಣ್ಣ, ಕೊಲ್ಲೀರ ಗೋಪಿ ಚಿಣ್ಣಪ್ಪ, ಕಂಬೀರAಡ ಬೋಪಣ್ಣ, ಅಳಮಂಡ ಜೈ ಗಣಪತಿ, ಪುಚ್ಚಿಮಾಡ ಸುಭಾಷ್, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಅಜ್ಜಿಕುಟ್ಟೀರ ಲೋಕೇಶ್, ಪಟ್ಟಮಾಡ ಕುಶ, ಕಾಂಡೇರ ಸುರೇಶ್, ಕಿರಿಯಮಾಡ ಶೆರಿನ್, ಡಾ. ಕಾಳಿಮಾಡ ಶಿವಪ್ಪ, ಪ್ರೊ. ಇಟ್ಟೀರ ಬಿದ್ದಪ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚಂಬAಡ ಜನತ್, ಮಂದಪAಡ ಮನೋಜ್, ಮದ್ರಿರ ಕರುಂಬಯ್ಯ, ಅಪ್ಪಾರಂಡ ಪ್ರಸಾದ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ಚೋಳಪಂಡ ನಾಣಯ್ಯ, ಪಟ್ರಪಂಡ ರಮೇಶ್, ನೆರ್ಪಂಡ ಜಿಮ್ಮಿ, ನಂದೇಟಿರ ರವಿ, ನೆಲ್ಲಮಕ್ಕಡ ವಿವೇಕ್, ಚಂಗAಡ ಚಾಮಿ ಪಳಂಗಪ್ಪ, ಕೊಣಿಯಂಡ ಸಂಜು, ಪುಟ್ಟಿಚಂಡ ದೇವಯ್ಯ, ಕೇಚಮಾಡ ಶರತ್, ಚಿರಿಯಪಂಡ ಶ್ಯಾಮ್, ಪಟ್ಟಮಾಡ ಪೃಥ್ವಿ, ಅಪ್ಪೆಂಗಡ ಮಾಲೆ, ಚೋಳಪಂಡ ನಾಣಯ್ಯ, ಕೊಲ್ಲೀರ ಆದಿ ಅಚ್ಚಯ್ಯ, ಕೊಲ್ಲೀರ ಡೆನ್ ಸೋಮಯ್ಯ, ಪುದಿಯೊಕ್ಕಡ ಪೃಥ್ವಿ, ಚೀಯಬೇರ ಸತೀಶ್, ನೆರ್ಪಂಡ ಪೊನ್ನಣ್ಣ, ಪೊನ್ನೊಲ್‌ತಂಡ ಕಿರಣ್, ಚೇಂದ್ರಿಮಾಡ ಗಣೇಶ್, ಕೊಟೇರ ಸುರೇಶ್, ಕೊಣಿಯಂಡ ಧ್ಯಾನ್ ಪೆಮ್ಮಯ್ಯ, ಪಂದ್ಯAಡ ವಾಸು, ಬೇಪಡಿಯಂಡ ಅರುಣ್, ಚೊಕ್ಕಂಡ ಕಟ್ಟಿ ಪಳಂಗಪ್ಪ, ಚಂಗನಮಕ್ಕಡ ವಿನು, ಸಾದೇರ ರಮೇಶ್, ಜಮ್ಮಡ ಗಿಲ್, ಕಿರಿಯಮಾಡ ಸವನ್ ಮತ್ತಿತರರು ಪಾಲ್ಗೊಂಡಿದ್ದರು.