ವೀರಾಜಪೇಟೆ, ಏ. ೧೨: ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಯು ಕೊರೋನಾ ಅವಧಿಯಲ್ಲಿ ಪ್ರಾರಂಭಗೊAಡು ಪ್ರಗತಿಯತ್ತ ಮುನ್ನಡೆಯುತ್ತಿದ್ದು ೨೦೨೪-೨೫ ಸಾಲಿನ ವಾರ್ಷಿಕ ಲೆಕ್ಕಪತ್ರ ಕೊನೆಗೊಂಡು ಈ ವರ್ಷವೂÀÅ ಕೂಡ ಲಾಭದಲ್ಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಸಂಘದಲ್ಲಿ ೧೩೪೦ ಸದಸ್ಯರಿದ್ದು ಒಂದು ಕೋಟಿ ಪಾಲು ಬಂಡವಾಳ ಇದೆ. ೮.೩೩ ಕೋಟಿ ವಿವಿಧ ಬಗೆಯ ಠೇವಣಿಗಳಾಗಿವೆ. ೮ ಕೋಟಿ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ಇತರೆ ಬ್ಯಾಂಕ್‌ಗಳಲ್ಲಿ ೧.೮೦ ಕೋಟಿ ಹೂಡಿಕೆ ಮಾಡಲಾಗಿದ್ದು ೩೧.೦೩.೨೫ ನೇ ಸಾಲಿನಲ್ಲಿ ಶೇ ೯೬ ರಷ್ಟು ಸಾ¯ ವಸೂಲಾತಿ ಆಗಿದೆ.

ಸಹಕಾರಿ ಸಂಸ್ಥೆಯ ಸಂಪೂರ್ಣ ಗಣಕೀಕೃತವಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸಿಟ್ ಲಾಕರ್ ಹಾಗು ಇ ಸ್ಟಾಂಪಿAಗ್ ಸೌಲಭ್ಯ, ಕ್ಯಾಶ್‌ಲೆಸ್ ಸೇವೆಗಳಾದ ನೆಫ್ಟ್, ಆರ್‌ಟಿಜಿಎಸ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವು ಕೂಡ ಸದಸ್ಯರಿಗೆ ಡಿವಿಡೆಂಟ್ ನೀಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಚೇಂದ್ರಿಮಾಡ ನಂಜಪ್ಪ, ನೆಲ್ಲಚಂಡ ಭೀಮಯ್ಯ, ಕಾಂಡAಡ ಚರ್ಮಣ, ಕೇಳಪಂಡ ವಿಶ್ವನಾಥ್, ಕೊಂಗಾAಡ ನಾಣಯ್ಯ, ಕಾಳೇಂಗಡ ತಿಮ್ಮಯ್ಯ, ಪಟ್ಟಡ ದಿವ್ಯ, ಮೇಕೇರಿರ ಪಾಲಿ ಸುಬ್ರಮಣಿ, ನೆಲ್ಲಮಕ್ಕಡ ಬೆಳ್ಯಪ್ಪ, ಬೊಳ್ಳೆಪಂಡ ಸುರೇಶ್ ಐನಂಡ ಗಣಪತಿ ಉಪಸ್ಥಿತರಿದ್ದರು.