ಗೋಣಿಕೊಪ್ಪಲು. ಏ. ೧೨: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಏಳನೇ ದಿನ ಎಂಟು ತಂಡಗಳು ಮುಂದಿನ ಹಂತ ಪ್ರವೇಶಿಸಿವೆ. ಕಾಕಮಾಡ ಹಾಗೂ ಚೊಟ್ಟೆಯಂಡಮಾಡ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೊಟ್ಟೆಯಂಡಮಾಡ ೧ ವಿಕೆಟ್ ಕಳೆದುಕೊಂಡು ೨೪ ರನ್ ಗಳಿಸಿತು. ಕಾಕಮಾಡ ತಂಡ ೮ ವಿಕೆಟ್ ಕಳೆದುಕೊಂಡು ಕೇವಲ ೨೧ ರನ್ ಗಳಿಸುವ ಮೂಲಕ ಸೋಲನ್ನುಭವಿಸಿತು. ಚೊಟ್ಟೆಯಂಡಮಾಡ ಗೆಲುವು ಸಾಧಿಸಿತು.
ಎರಡನೇ ಪಂದ್ಯವು ಅಪ್ಪುಡ ಹಾಗೂ ಮಲಚಿರ ತಂಡದ ನಡುವೆ ನಡೆದು ಮಲಚಿರ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ ಓವರ್ನಲ್ಲಿ ೩ ವಿಕೆಟ್ ಕಳೆದುಕೊಂಡು ೬೫ ರನ್ ಬಾರಿಸಿತು. ಅಪ್ಪುಡ ತಂಡವು ೫ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಸೋಲನ್ನು ಅನುಭವಿಸಿತು. ಮಲಚಿರ ತಂಡವು ೭ ವಿಕೆಟ್ ಅಂತರದಲ್ಲಿ ಜಯ ಗಳಿಸಿತ್ತು.
ಮೂರನೆಯ ಪಂದ್ಯವು ಕೊಟ್ಟುಕತ್ತಿರ ಹಾಗೂ ಮಾಚಂಗಡ ತಂಡದ ನಡುವೆ ನಡೆಯಿತು. ಮಾಚಂಗಡ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ ಓವರ್ ನಲ್ಲಿ ಭರ್ಜರಿ ೧೧೧ ರನ್ ಗಳಿಸಿತ್ತು. ಕೊಟ್ಟುಕತ್ತಿರ ತಂಡವು ೪ ವಿಕೆಟ್ ಕಳೆದುಕೊಂಡು ೯೦ ರನ್ ಗಳಿಸಿ ಸೋಲು ಕಂಡಿತು. ಮಾಚಂಗಡ ತಂಡವು ೨೧ ರನ್ ಗಳ ಹಂತರದಲ್ಲಿ ಜಯಗಳಿಸಿತು.
ನಾಲ್ಕನೇ ಪಂದ್ಯವು ನಾಗಚೆಟ್ಟಿರ ಹಾಗೂ ಪೆಬ್ಬಟ್ಟಿರ ತಂಡದ ನಡುವೆ ನಡೆದು ನಾಗಚೆಟ್ಟಿರ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ ಓವರ್ನಲ್ಲಿ ೪ ವಿಕೆಟ್ ಕಳೆದುಕೊಂಡು ೮೭ ರನ್ ಗಳಿಸಿತು. ಪೆಬ್ಬಟ್ಟಿರ ತಂಡವು ೮ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಸೋಲು ಅನುಭವಿಸಿತು. ನಾಗಚೆಟ್ಟಿರ ತಂಡವು ೨೪ ರನ್ಗಳ ಅಂತರದಲ್ಲಿ ಜಯ ಗಳಿಸಿತು.
ಐದನೆ ಪಂದ್ಯವು ಮೊಳ್ಳೆರ ಹಾಗೂ ಚೇಂದAಡ ತಂಡದ ನಡುವೆ ನಡೆಯಬೇಕಿತ್ತಾದರೂ ಮೊಳ್ಳೆರ ತಂಡ ಗೈರಾದ ಹಿನ್ನೆಲೆಯಲ್ಲಿ ಚೇಂದAಡ ತಂಡಕ್ಕೆ ವಾಕ್ ಓವರ್ ದೊರೆಯಿತು.
ಆರನೇ ಪಂದ್ಯವು ಕುಪ್ಪಣಮಾಡ (ಬಿರುನಾಣಿ) ಹಾಗೂ ಪಳಂಗೇಟಿರ ತಂಡದ ನಡುವೆ ನಡೆದು ಮೊದಲು ಬ್ಯಾಟಿಂಗ್ ಮಾಡಿದ ಕುಪ್ಪಣಮಾಡ ೪ ವಿಕೆಟ್ ಕಳೆದುಕೊಂಡು ೧೫೩ ರನ್ ಗಳಿಸಿತು. ಪಳಂಗೇಟಿರ ತಂಡವು ೬ ವಿಕೆಟ್ ಕಳೆದುಕೊಂಡು ಕೇವಲ ೪೫ ರನ್ ಗಳಿಸಿ ಸೋಲು ಕಂಡಿತು.
ಕುಪ್ಪಣ್ಣಮಾಡ ತಂಡವು ಭರ್ಜರಿ ೧೦೯ ರನ್ ಗಳ ಅಂತರದಲ್ಲಿ ಜಯಗಳಿಸಿತು ಏಳನೆ ಪಂದ್ಯವು ಬಾಳೆಯಡ ಹಾಗೂ ಕಾಳಚಂಡ ತಂಡದ ನಡುವೆ ನಡೆಯಬೇಕಿತ್ತು. ಆದರೆ ಕಾಳಚಂಡ ಗೈರಾದ ಹಿನ್ನೆಲೆಯಲ್ಲಿ ಬಾಳೆಯಡ ತಂಡವು ವಾಕ್ ಓವರ್ ಮೂಲಕ ಮುಂದಿನ ಹಂತ ಪ್ರವೇಶಿಸಿತು.
ಎಂಟನೇ ಪಂದ್ಯವು ಕೊಟ್ಟಂಗಡ ಹಾಗೂ ಕಾಂಚೇರಿರ ತಂಡದ ನಡುವೆ ನಡೆದು ಮೊದಲು ಬ್ಯಾಟಿಂಗ್ ಮಾಡಿದÀ ಕೊಟ್ಟಂಗಡ ತಂಡವು ನಿಗದಿತ ಓವರ್ನಲ್ಲಿ ೩ ವಿಕೆಟ್ ಕಳೆದುಕೊಂಡು ೧೪೦ ರನ್ ಬಾರಿಸಿತು. ಕಾಂಚೇರಿರ ತಂಡವು ೯ ವಿಕೆಟ್ ಕಳೆದುಕೊಂಡು ಕೇವಲ ೫೬ ರನ್ ಗಳಿಸಿತು.
ಕೊಟ್ಟಂಗಡ ತಂಡವು ೮೪ ರನ್ ಗಳ ಅಂತರದಲ್ಲಿ ಜಯಗಳಿಸಿತು.
- ಹೆಚ್.ಕೆ.ಜಗದೀಶ್