ಮಡಿಕೇರಿ, ಏ. ೧೨ : ಉತ್ತರ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಏರ್ಪಡಿಸಲಾಗಿರುವ ಕದಂಬೋತ್ಸವದ ಕವಿಗೋಷ್ಠಿಗೆ ಜಿಲ್ಲೆಯ ಕವಯತ್ರಿ ಮಿಲನ ಕೆ. ಭರತ್ ಆಯ್ಕೆಯಾಗಿದ್ದಾರೆ. ತಾ. ೧೩ರಂದು (ಇಂದು) ಕವಿಗೋಷ್ಠಿ ನಡೆಯಲಿದೆ. ಮಿಲನ ಪ್ರಸ್ತುತ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.