“ಚಕ್ರವರ್ತಿ”

ಮಡಿಕೇರಿ, ಏ.೧೧: ಕೊಡಗಿನ ಪವಿತ್ರ ಕ್ಷೇತ್ರ, ಕರ್ನಾಟಕದ ಕಣ್ಮಣಿ ದೇಶದ ಕೋಟ್ಯಂತರ ರೈತರ, ಸಾಮಾನ್ಯ ಜನರ ಬಾಳಿಗೆ ಆಸರೆಯಾಗಿರುವ ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಕರಿ ಛಾಯೆ ಆವರಿಸಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗಲೂ ಸಮರ್ಪಕ ಸಮಿತಿ ರಚನೆ ಮಾಡದೆ ನ್ಯಾಯಾಲಯದ ಮೆಟ್ಟಿಲೇರಿ ಹಲವು ವರ್ಷ ಸಮಿತಿ ರಚನೆ ಸ್ಥಗಿತಗೊಂಡಿತ್ತು. ಈಗಿನ ಕಾಂಗ್ರೆಸ್ ಸರಕಾರದಲ್ಲಿ ಜಿಲ್ಲೆಯಲ್ಲಿ ಭಕ್ತರ ಗಮನಕ್ಕೇ ಬಾರದೆ ರಾಜ್ಯಮಟ್ಟದಲ್ಲಿ ಸಮಿತಿ ರಚಿಸುವ ಪ್ರಯತ್ನ ನಡೆದಿರುವುದು “ಶಕ್ತಿ”ಗೆ ತಿಳಿದು ಬಂದಿದೆ.

ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ತಲಕಾವೇರಿ- ಭಾಗಮಂಡಲ ಕ್ಷೇತ್ರ ಒಂದು ಸಾಮಾನ್ಯ ಧಾರ್ಮಿಕ ಕೇಂದ್ರ ಎಂಬ ಭಾವನೆಯಿದ್ದಂತೆ ಈ ಹಿಂದಿನಿAದಲೂ ಕಾರ್ಯ ನಿರ್ವಹಿಸಿಕೊಂಡು ಬಂದಿರುವುದು ಕಂಡುಬAದಿದೆ. ಈ ಹಿಂದೆ ಸಾರ್ವಜನಿಕ ಭಕ್ತಾದಿಗಳನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯಿದ್ದರೂ “ಶಕ್ತಿ” ಗೆ ಲಭ್ಯವಿರುವ ಆಡಿಟ್ ವರದಿ ಪ್ರಕಾರ ಅನೇಕ ಲಕ್ಷಗಟ್ಟಲೆ, ಕೋಟಿಗಟ್ಟಲೆ ಮೌಲ್ಯದ ಕಾಮಗಾರಿಗಳು ಭಾಗಮಂಡಲ ಕ್ಷೇತ್ರದಲ್ಲಿ ರಾಜ್ಯ ಕಾವೇರಿ ನಿಗಮ ಮತ್ತಿತರ ಇಲಾಖೆಗಳ ಪರಿವ್ಯಾಪ್ತಿಯಲ್ಲಿ ನಡೆದಿದ್ದರೂ ಅಸಮರ್ಪಕ ಕಾರ್ಯ ವೈಖರಿ, ಆರ್ಥಿಕ ದುರ್ಬಳಕೆ ಎದ್ದು ಕಾಣುತ್ತದೆ.

ಈ ಹಿಂದೆ ಜಗದೀಶ್‌ಕುಮಾರ್ ಅವರು ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾಗ ಅನೇಕ ಪ್ರಮುಖ ಕಾಮಗಾರಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಸಮರ್ಪಕ ಅನುಮತಿ ಪಡೆಯದೆ ಕಾರ್ಯ ನಿರ್ವಹಿಸಿರುವುದು ಕಂಡು ಬಂದಿದೆ. ಆಗ ಸಾರ್ವಜನಿಕ ಭಕ್ತಾದಿಗಳನ್ನೊಳಗೊಂಡ ಸಮಿತಿಯಿದ್ದರೂ ತೀರಾ ನಿರ್ಲಕ್ಷö್ಯ ವಹಿಸಲಾಗಿದೆ. ಬಿಜೆಪಿ ಆಡಳಿತÀದ ಅವಧಿಯಲ್ಲಿ ಇಂತಹ ಪರಮ ನಿರ್ಲಕ್ಷö್ಯತನಕ್ಕೆ ಆಡಿಟ್ ವರದಿಯಲ್ಲಿ ಪ್ರಸ್ತಾಪಿಸಿರುವ ಅನೇಕ ನ್ಯೂನತೆಗಳು ಸಾಕ್ಷಿಯಾಗಿವೆ. ಆದರೆ, ಈ ಸಂಬAಧ ಆಗಿನ ಜನಪ್ರತಿನಿಧಿಗಳು ಮೌನ ವಹಿಸಿದ್ದುದು ಆಶ್ಚರ್ಯಕರ. ಮಾತ್ರವಲ್ಲ, ಆಗಿನ ವ್ಯವಸ್ಥಾಪನಾ ಸಮಿತಿಯ ಬೇಜವಾಬ್ದಾರಿಕೆಯೂ ಎದ್ದು ಕಾಣುತ್ತದೆ. ಈ ಕೋಟಿಗಟ್ಟಲೆ ಠೇವಣಾತಿ ಹಣ ವಿವಿಧ ಕಾಮಗಾರಿಗಳಿಗೆಂದು ಖರ್ಚಾಗಿದ್ದರೆ, ಅನ್ನಛತ್ರಕ್ಕೆಂದು ಪುನರ್ ಪ್ರತಿಷ್ಠಾಪನಾ ಸಮಿತಿ ನೀಡಿದ್ದ ಲಕ್ಷಗಟ್ಟಲೆ ಹಣವನ್ನು ಸಂಬಳ ಕೊಡಲು ಹಣವಿಲ್ಲ ಎಂದು ವಿನಿಯೋಗಿಸಲಾಗಿದೆ.

ಈ ಹಿಂದಿನ ಸಮಿತಿ ಅಧಿಕಾರ ಮುಗಿದ ಬಳಿಕ ನೂತನ ಸಮಿತಿ ರಚನೆಗೂ ಮುನ್ನ ಧಾರ್ಮಿಕ ದತ್ತಿ ಇಲಾಖೆ ಅಧಿಕಾರವನ್ನು ಎಡಿಸಿ ಅವರಿಗೆ ವಹಿಸಿತು. ಬಳಿಕ ಈ ಹಿಂದಿನ ಸರಕಾರ ಸಮಿತಿ ರಚಿಸಿತು. ಬಿಜೆಪಿ ಸರಕಾರವಿದ್ದಾಗ ಈ ಹಿಂದಿನ ಸಮಿತಿ ಅವಧಿ ಬಳಿಕ ಹೊಸ ಸಮಿತಿ ರಚನೆ ಸಂದರ್ಭ ಯಾವದೇ ಮಾನದಂಡಗಳನ್ನು ಪರಿಗಣಿಸದೆ ಯದ್ವಾ ತದ್ವಾ ರೀತಿಯಲ್ಲಿ ಸಮಿತಿ ರಚಿಸಿ ಆ ಸಮಿತಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿತ್ತು. ತಾ. ೨೧-೧-೨೦೨೧ ರಲ್ಲಿ ನೂತನ ಸಮಿತಿ ರಚನೆಯಾಗಿತ್ತು.

ಆದರೆ, ಆ ಸಮಿತಿ ಕಾನೂನನ್ನು ಗಾಳಿಗೆ ತೂರಿ ರಚಿಸಲ್ಪಟ್ಟಿದೆ ಎಂದು ಕೊಡಗಿನ ಕೆಲವು ಭಕ್ತಾದಿಗಳು ತಡೆಯಾಜ್ಞೆ ತಂದರು. ಬಳಿಕ ಆ ತಡೆಯಾಜ್ಞೆಯನ್ನು ತೆರವುಗೊಳಿಸಲು ಈ ಹಿಂದಿನ ಸರಕಾರವಾಗಲೀ, ಈಗಿನ ಸರಕಾರವಾಗಲೀ ಯಾವದೇ ಪ್ರಯತ್ನ ನಡೆಸಲಿಲ್ಲ. ಆ ಸಮಿತಿ ನ್ಯಾಯಾಲಯ ಆದೇಶದನ್ವಯ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೂ ಧಾರ್ಮಿಕ ದತ್ತಿ ಆದೇಶದ ಅನ್ವಯ ಅದರ ಅಧಿಕಾರಾವಧಿ ತಾ. ೧೮-೧-೨೦೨೫ ರ ವರೆಗೆ ಇದ್ದು ಈ ಅವಧಿ ಮುಗಿದೊಡನೆ ತನ್ನಷ್ಟಕ್ಕೇ ಮುಕ್ತಾಯಗೊಂಡಿತು. ಈಗಿನ ಕಾಂಗ್ರೆಸ್ ಸರಕಾರ ಕುಡಿಯುವ ನೀರು ಯೋಜನೆಗಳನ್ನು ಬೆಂಗಳೂರು ನಗರ ಮಟ್ಟÀದಲ್ಲಿ ಕಾವೇರಿಯನ್ನು ಬಳಸಿಕೊಂಡು ವಿಸ್ತರಿಸಲು ಭಾರೀ ಆಸಕ್ತಿ ತೋರಿಸಿದೆ. ಆದರೆ, ಕಾವೇರಿಯ ತವರೂರಿನಲ್ಲಿ ಸಮರ್ಪಕ ನಿರ್ವಹಣೆ ನಡೆಸಲು ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಿಗೆ ಉತ್ತಮವಾದ ವ್ಯವಸ್ಥಾಪನಾ ಸಮಿತಿ ರಚಿಸಲು ವಿಫಲವಾಗಿದೆ.

ಕೊಡಗಿನ ಜನಪ್ರತಿನಿಧಿಗಳಾಗಲೀ, ರಾಜ್ಯ ಮುಜರಾಯಿ ಸಚಿವರಾಗಲಿ ಈ ಬಗ್ಗೆ ಆಸ್ಥೆ ವಹಿಸಿದಂತಿಲ್ಲ. ಏಕೆಂದರೆ, ಹಿಂದಿನ ಗೊಂದಲದ ಸಮತಿಯ ಅವಧಿ ಮುಗಿದೊಡನೆ, ರಾಜ್ಯ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಒಂದು ಸುತ್ತೋಲೆಯನ್ನು ರಾಜ್ಯಮಟ್ಟದಲ್ಲಿ ಹೊರಡಿಸಿದೆ. ಅದರ ಮಾಹಿತಿ ಹೀಗಿದೆ:- ಶ್ರೀ ಭಗಂಡೇಶ್ವರ ದೇವಸ್ಥಾನ, ಭಾಗಮಂಡಲ, ಮಡಿಕೇರಿ ತಾಲೂಕು- ಇದರ ವ್ಯವಸ್ಥಾಪನಾ

(ಮೊದಲ ಪುಟದಿಂದ) ಸಮಿತಿಯ ಅವಧಿ ತಾ. ೧೮-೧-೨೦೨೫ ಕ್ಕೆ ಮುಕ್ತಾಯಗೊಂಡಿದೆ. ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಡುವ ಈ ದೇವಾಲಯಗಳಿಗೆ ಕಾಯ್ದೆಯ ಸೆಕ್ಷನ್ ೨೫ರನ್ವಯ ಹೊಸದಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾದಿಗಳಿಂದ/ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ತಾ. ೧೩.೧೧.೨೦೨೪ ರಂದು ನಡೆದ ೪ನೇ ರಾಜ್ಯ ಧಾರ್ಮಿಕ ಪರಿಷತ್ತಿನ ೭ನೇ ಸಭೆಯ ವಿಷಯ ಸೂಚಿ ಸಂಖ್ಯೆ (೫)ರಲ್ಲಿ ತೀರ್ಮಾನಿಸಲಾಗಿರುತ್ತದೆ.

ಸದರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗೆ ಕನಿಷ್ಟ ೨೫ ವರ್ಷಕ್ಕಿಂತ ಮೇಲ್ಪಟ್ಟ ಆಸಕ್ತ ಭಕ್ತಾದಿಗಳು ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆ-೧(ಬಿ) (೨೨ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿ, ದಿನಾಂಕ: ೦೨.೦೪.೨೦೨೫ ರೊಳಗಾಗಿ "ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಮಿಂಟೋ ಶ್ರೀ ಆಂಜನೇಯ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮" ಇಲ್ಲಿಗೆ ನೇರವಾಗಿ ಸಲ್ಲಿಸತಕ್ಕದ್ದು. ಅಂತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ನಿಗದಿತ ಅವಧಿಯ ನಂತರದಲ್ಲಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ನಿಗದಿತ ಅರ್ಜಿ ನಮೂನೆಯು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮತ್ತು ತಿತಿತಿ.iಣms.ಞಚಿಡಿ.gov.iಟಿ ನಲ್ಲಿ ಲಭ್ಯವಿರುತ್ತದೆ” ಎಂದು ತಾ. ೧೪-೩-೨೦೨೫ ರಂದು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಈ ಕುರಿತು ಜಿಲ್ಲೆಯ ಜನತೆಗೆ ಯಾವುದೇ ಮಾಹಿತಿಯಿಲ್ಲ, ಈಗಾಗಲೇ ಏ.೨ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ಪ್ರಕಟಿಸಲಾಗಿದೆ. ಈ ಮಾಹಿತಿ ಈಗಷ್ಟೇ ದೊರೆತ ಕೊಡಗಿನ ಕೆಲವು ಆಸಕ್ತ ಮಂದಿ ಇಲಾಖೆೆ ಈ ರೀತಿ ರಹಸ್ಯವಾಗಿ ಸಮಿತಿ ರಚನೆಗೆ ಮುಂದಾದುದೇಕೆ? ಎಂದು ಪ್ರಶ್ನಿಸಿದ್ದಾರೆ. ಕೊಡಗಿನವರಲ್ಲದೆ ಬೇರೆ ಜಿಲ್ಲೆಯವರೇನಾದರೂ ಈ ಸಮಿತಿಗೆ ಬರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರನ್ನು “ಶಕ್ತಿ” ಕೇಳಿದಾಗ ತನಗೆ ಭಾಗಮಂಡಲ- ತಲಕಾವೇರಿ ಸಮಿತಿ ರಚನೆ ಕುರಿತು ಯಾವದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತಂದಾಗ ತನಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ. ಹಾಗೇನಾದರೂ ಆಗಿದ್ದರೆ, ಪುನರ್ ಪ್ರಕಟಣೆ ಮೂಲಕ ಕೊಡಗಿನ ಭಕ್ತಾದಿಗಳು ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲು ತಿಳಿಸುತ್ತೇನೆ ಎಂದು ಸ್ಪಷ್ಟನೆಯಿತ್ತರು. ಧಾರ್ಮಿಕ ದತ್ತಿ ಇಲಾಖೆ ಈ ಹಿಂದಿನ ಆಡಿಟ್ ವರದಿಯಲ್ಲಿ ಭಾಗಮಂಡಲ- ತಲಕಾವೇರಿ ಕ್ಷೇತ್ರಗಳಲ್ಲಿ ಕಂಡುಬAದ ಆರ್ಥಿಕ ಬಳಕೆ ಆಕ್ಷೇಪಗಳ ಕುರಿತೂ ಇದುವರೆಗೂ ಗಮನ ಹರಿಸಿಲ್ಲ. ಕಾವೇರಿ ಕ್ಷೇತ್ರವನ್ನು ಇತರ ಕ್ಷೇತ್ರಗಳಂತೆ ಸಾಮಾನ್ಯ ಕ್ಷೇತ್ರ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಿರುವುದು ಇದರಿಂದ ಸ್ಪಷ್ಟ ಗೋಚರ.

ಜೊತೆಗೆ ‘ಎ’ ಗ್ರೇಡ್ ದೇವಾಲಯಗಳಾದ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳ ಸಮಿತಿ ರಚನೆ ಮಾಡುವಾಗಲೂ ಕೊಡಗಿನ ಭಕ್ತಾದಿಗಳ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡದೆ ಅಸಡ್ಡೆ ಮಾಡಿದೆ. ಕನಿಷ್ಟಪಕ್ಷ ಕೊಡಗಿನ ವಾರ್ತಾಧಿಕಾರಿಯವರ ಮೂಲಕವಾದರೂÀ ಎಲ್ಲ್ಲಾ ಮಾಧ್ಯಮಗಳಲ್ಲಿಯೂ ವರದಿ ಬಿತ್ತರಿಸಿ ಜನತೆಯ ಗಮನಕ್ಕೆ ತರಬೇಕಾಗಿತ್ತು. ಈಗಾಗಲೇ ಜಿಲ್ಲೆಯಲ್ಲಿ ಈ ಅಸಡ್ಡೆ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ. ಈ ನಡುವೆ ಈಗಾಗಲೇ ಶ್ರೀ ಓಂಕಾರೇಶ್ವರ ದೇವಾಲಯ ಮತ್ತು ಪಾಡಿ ಶ್ರೀ ಇಗ್ಗುತಪ್ಪ ವ್ಯವಸ್ಥಾಪನಾ ಸಮಿತಿ ರಚನೆಗೊಂಡಿದೆ. ಆದರೆ, ಸಿ. ಗ್ರೇಡ್ ದೇವಾಲಯಗಳಾದ ಇರ್ಪು ರಾಮೇಶ್ವರ, ಪಾಲೂರು ಮಹಾಲಿಂಗೇಶ್ವರ ಮತ್ತು ಪಾಲೂರು ಹರಿಶ್ಚಂದ್ರ ದೇವಾಲಯಗಳಿಗೆ ಸಮಿತಿಗಳನ್ನು ರಚಿಸದೆ ಅನೇಕ ವರ್ಷಗಳೇ ಕಳೆದು ಹೋಗಿವೆ. ಇದರ ಜವಾಬ್ದಾರಿಕೆ ಕೊಡಗು ಧಾರ್ಮಿಕ ಪರಷತ್‌ನದ್ದಾಗಿದ್ದು ಕೊಡಗಿನಲ್ಲಿ ಇದುವರೆಗೂ ಅಧಿಕೃತವಾಗಿ ಸರಕಾರದಿಂದ ಧಾರ್ಮಿಕ ಪರಿಷತ್ ರಚನೆಯಾಗದಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಅಂತೂ, ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖರು ಕೊಡಗಿನ ಭಾಗಮಂಡಲ- ತಲಕಾವೇರಿ ಕ್ಷೇತ್ರಗಳ ಕುರಿತಾದರೂ ಭವಿಷ್ಯತ್‌ನಲ್ಲಿ ಆದ್ಯತೆ ನೀಡಲಿ, ಜೀವನದಿ ಕಾವೇರಿಯ ಉಗಮ ಸ್ಥಾನ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾದುದು ಎಂಬುದನ್ನು ಮರೆಯದಿರಲಿ.