ವೀರಾಜಪೇಟೆ, ಏ. ೭: ವೀರಾಜಪೇಟೆ ಬಿಟ್ಟಂಗಾಲ ಗ್ರಾಮದ ಕಂಪೆನಿಮೊಟ್ಟೆ ಶ್ರೀ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ ೩೩ ನೇ ವರ್ಷ ವಾರ್ಷಿಕ ತೆರೆ ಮಹೋತ್ಸವ ಎರಡು ದಿನಗಳ ಕಾಲ ಜರುಗಿ ಸಂಪನ್ನ ವಾಯಿತು.

ತಾ.೧ ರಂದು ಗಣಪತಿ ಹೋಮ ದೊಂದಿಗೆ ಆರಂಭವಾದ ಉತ್ಸವವು ಧ್ವಜರೋಹಣ, ಕಣ್ಣಂಬಾಡಿ ಅಮ್ಮ ಅವರ ಪೂಜೆಗಳು ನಡೆಯಿತು. ಬಳಿಕ ಸಂಜೆ ಮುತ್ತಪ್ಪನ್ ವೆಳ್ಳಾಟಂ, ಗುಳಿಗನ ತೋಟ್ಟಂ ತೆರೆ ನಡೆದು ರಾತ್ರಿ ವಿಶೇಷ ಆಕರ್ಷಣೆಯಾದ ಬಸುರಿಮಾಲ ದೇವರ ತೊಟ್ಟಂ ತೆರೆಯು ಪುಳಕಿತವಾಗುವಂತೆ ಮಾಡಿತು. ತಾ. ೨ ರಂದು ಪ್ರಾತಃಕಾಲ ಗುಳಿಗನ್ ತೆರೆಯಿಂದ ಅರಂಭ ವಾಯಿತು. ಬೆಳಿಗ್ಗೆನ ವೇಳೆಯಲ್ಲಿ ಮುತ್ತಪ್ಪನ್ ಮತ್ತು ತಿರುವಪ್ಪನ್ ವಳ್ಳಾಟಂ ನಡೆದು ಬಸುರಿಮಾಲ ತೆರೆಯೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಸಂಪನ್ನವಾಯಿತು. ರಾತ್ರಿ ಮತ್ತು ಹಗಲು ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವದ ವೇಳೆಯಲ್ಲಿ ಕಂಪೆನಿಮೊಟ್ಟೆ ಶ್ರೀ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಭಕ್ತರು ಪಾಲ್ಗೊಂಡಿದ್ದರು.