ಸೋಮವಾರಪೇಟೆ, ಏ. ೭: ಇಲ್ಲಿನ ಶ್ರೀರಾಮ ನವಮಿ ಉತ್ಸವ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ೧೦ನೇ ವರ್ಷದ ರಾಮ ನವಮಿ ಉತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಶ್ರೀರಾಮನ ಸ್ಮರಣೆ ಮಾಡಿದರು.
ಪಟ್ಟಣದಲ್ಲಿ ರಾತ್ರಿ ಅದ್ದೂರಿ ಶೋಭಾಯಾತ್ರೆ ನಡೆಯಿತು. ಗ್ರಾಮೀಣ ಭಾಗದಿಂದ ಆಗಮಿಸಿದ್ದ ಸ್ತಬ್ಧಚಿತ್ರಗಳು ಆಕರ್ಷಿಸಿದವು. ಶೋಭಾಯಾತ್ರೆಯಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದವು.
ರಾಮನವಮಿ ಅಂಗವಾಗಿ ಪಟ್ಟಣವನ್ನು ಕೇಸರಿ ಬಂಟಿAಗ್ಸ್ ಹಾಗೂ ಧ್ವಜಗಳಿಂದ ಸಿಂಗರಿಸಲಾಗಿತ್ತು. ವಾಹನಗಳಲ್ಲಿ ಶ್ರೀರಾಮ-ಹನುಮನ ಧ್ವಜಗಳು ರಾರಾಜಿಸಿದವು.
ಸಂಜೆ ಪಟ್ಟಣದ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕ ಭಕ್ತಾದಿಗಳಿಗೆ ಸಮಿತಿ ವತಿಯಿಂದ ಅನ್ನದಾನ ನಡೆಯಿತು. ನಂತರ ಆಂಜನೇಯ
(ಮೊದಲ ಪುಟದಿಂದ) ದೇವಾಲಯದಿಂದ ಬೃಹತ್ ಶೋಭಾಯಾತ್ರೆ ಹೊರಟಿತು.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಸ್ತಬ್ಧಚಿತ್ರಗಳು ಆಗಮಿಸಿದ್ದವು. ದೇವಾಲಯದಿಂದ ಕಕ್ಕೆಹೊಳೆ ಜಂಕ್ಷನ್, ಕ್ಲಬ್ರಸ್ತೆ, ಖಾಸಗಿ ಬಸ್ ನಿಲ್ದಾಣ, ಸಿ.ಕೆ. ಸುಬ್ಬಯ್ಯ ರಸ್ತೆ, ಮಡಿಕೇರಿ ರಸ್ತೆ, ಬಾಣಾವರ ರಸ್ತೆಯವರೆಗೆ ಶೋಭಾಯಾತ್ರೆ ಸಂಚರಿಸಿತು.
ಆAಜನೇಯ ದೇವಾಲಯದ ವತಿಯಿಂದ ರೂಪಿಸಿದ್ದ ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಪಟ್ಟಣ, ಗೌಡ ಸಮಾಜ ರಸ್ತೆ, ಆಲೇಕಟ್ಟೆ ರಸ್ತೆ, ಹಾನಗಲ್ಲು, ಕಾನ್ವೆಂಟ್ ಬಾಣೆ, ಹಾನಗಲ್ಲು ಶೆಟ್ಟಳ್ಳಿ, ಬಜೆಗುಂಡಿ ಗ್ರಾಮಗಳಿಂದ ಆಕರ್ಷಕ ಸ್ತಬ್ಧಚಿತ್ರಗಳು ಆಗಮಿಸಿದ್ದವು. ಮಂಗಳೂರಿನ ಮುಡಿಪು ಗ್ರಾಮದಿಂದ ಆಗಮಿಸಿದ್ದ ಮಕ್ಕಳ ತಂಡದಿAದ ಮೂಡಿಬಂದ ಭಜನಾ ಕುಣಿತ ಗಮನ ಸೆಳೆಯಿತು.
ಕಕ್ಕೆಹೊಳೆ ಜಂಕ್ಷನ್ನಲ್ಲಿ ಸ್ಥಳೀಯರು ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಕಕ್ಕೆಹೊಳೆ ಆವರಣ ಕೇಸರಿಮಯವಾಗಿತ್ತು. ವಿಶ್ವರೂಪ ಕಲಾತಂಡದಿAದ ಮೂಡಿಬಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಆಕರ್ಷಣೀಯವಾಗಿತ್ತು.
ಶೋಭಾಯಾತ್ರೆಯಲ್ಲಿ ಹುಲಿವೇಷ, ಕೀಲು ಕುದುರೆ, ಮೈಸೂರು ತಮಟೆ ಬ್ಯಾಂಡ್, ಮಂಗಳೂರಿನ ಭಜನಾ ತಂಡ, ಡೊಳ್ಳು ಕುಣಿತ, ನಾಸಿಕ್ ಬ್ಯಾಂಡ್, ವೀರಗಾಸೆ, ಕೆಂಗಿಲೆ, ಕೊಡಗು ವಾದ್ಯ ಸೇರಿದಂತೆ ಇನ್ನಿತರ ಜಾನಪದ ಕಲಾತಂಡಗಳು ಭಾಗವಹಿಸಿ, ಯೋಭಾಯಾತ್ರೆಯ ಅದ್ದೂರಿತನಕ್ಕೆ ಸಾಕ್ಷಿಯಾದವು.
ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಸಾವಿರಾರು ಮಂದಿ ಸಾರ್ವಜನಿಕರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಪ್ರೊಬೇಷನರಿ ಐಪಿಎಸ್ ಆಫೀಸರ್ ಬೆನಕ ಪ್ರಸಾದ್, ಡಿವೈಎಸ್ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರುಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಎಸ್ಆರ್ಪಿಯ ಎರಡು ತುಕಡಿ ಸೇರಿದಂತೆ ೨೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು.
ಶ್ರೀರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಟಿ. ಸುಭಾಷ್, ಕಾರ್ಯದರ್ಶಿ ತಿಮ್ಮಯ್ಯ, ಉಪಾಧ್ಯಕ್ಷ ಎಂ.ಬಿ. ಉಮೇಶ್, ಉಪ ಕಾರ್ಯದರ್ಶಿ ದೀಪು ಕಿಬ್ಬೆಟ್ಟ, ದರ್ಶನ್ ಯಡೂರು, ಖಜಾಂಚಿ ಸಿ.ಸಿ. ನಂದ ಸೇರಿದಂತೆ ಪದಾಧಿಕಾರಿಗಳು ಉತ್ಸವದ ಉಸ್ತುವಾರಿ ವಹಿಸಿದ್ದರು.