ಕುಶಾಲನಗರ, ಏ. ೭: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿ ರಸ್ತೆಯನ್ನು ಅತಿಕ್ರಮಣ ಮಾಡಿ ನಿಯಮಬಾಹಿರವಾಗಿ ನಿರ್ಮಾಣ ಮಾಡಿ ರುವ ಕಟ್ಟಡಗಳನ್ನು ಎರಡು ತಿಂಗಳ ಒಳಗಾಗಿ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ಕೊಡಗು ಜಿಲ್ಲಾಧಿಕಾರಿ ಗಳಿಗೆ ಆದೇಶ ನೀಡಿದೆ.
ಕುಶಾಲನಗರದ ದಂಡಿನ ಪೇಟೆಯ ಹೆಚ್ ನೂರುಲ್ಲಾ, ಅಬ್ದುಲ್ ವಾಜಿದ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾಯಾಧೀಶರು ಈ ಬಗ್ಗೆ ವಿಚಾರಣೆ ನಡೆಸಿ ಅರ್ಜಿದಾರರ ಮನವಿಗೆ ಪುರಸ್ಕರಿಸಿ ಈ ಆದೇಶ ಹೊರಡಿಸಿದ್ದಾರೆ.
ಅರ್ಜಿದಾರರು ಹೈಕೋರ್ಟ್ ವಕೀಲರಾದ ಮೋಹನ ಕುಮಾರಿ ಮತ್ತು ಅಬೂಬಕರ್ ಶಾಫಿ ಅವರ ಮೂಲಕ ಹೈಕೋರ್ಟ್ನಲ್ಲಿ ರಿಟ್ ಪೀಟಿಷನ್ ಸಲ್ಲಿಸಿದ್ದು, ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರು. ಸಂಬAಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈ ಕೋರ್ಟ್ ನ್ಯಾಯಾಧೀಶರು ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿಗೆ ಆದೇಶಿಸಿದ್ದಾರೆ.