ವೀರಾಜಪೇಟೆ, ಏ. ೭: ಕಾಡಾನೆ - ಮಾನವ ಸಂಘರ್ಷದ ನಡುವೆ ವ್ಯಾಘ್ರ ಸೇರಿದಂತೆ ಇತರ ವನ್ಯಜೀವಿಗಳಿಂದ ಉಪಟಳ ವಾಗುತ್ತಿದೆ. ವನ್ಯಜೀವಿಗಳು ನಾಡಿಗೆ ಬರುವುದನ್ನು ನಿಯಂತ್ರಿಸಿ ಗ್ರಾಮಸ್ಥರನ್ನು ರಕ್ಷಿಸಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.
ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು, ಬೆಳ್ಳರಿಮಾಡು ಮತ್ತು ಚೆಂಬೆಬೆಳ್ಳೂರು ಗ್ರಾಮ ಪ್ರದೇಶ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಹುಲಿಯೊಂದು ಸಂಚರಿಸುತ್ತಿದೆ. ಬೆಲೆಬಾಳುವ ಸಾಕು ನಾಯಿಯನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ವೀರಾಜಪೇಟೆ ಅರಣ್ಯ ಭವನದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಶಿವರಾಮ್ ಅವರಿಗೆ ಮನವಿ ಪತ್ರ ಸಲ್ಲಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಮತ್ತು ಸಂತ್ರಸ್ಥರಾದ ತೋಮಸ್ ಡಿಸೋಜಾ ಅವರು ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ಕಾಫಿ ತೋಟಗಳಲ್ಲಿ ಬೆಳೆದಿರುವ ಕಾಫಿ ಗಿಡ, ಬಾಳೆಗಿಡ ಮತ್ತು ಇತರ ಫಸಲು ನೀಡುವ ಗಿಡ ಮರಗಳು ಧÀ್ವಂಸಗೊAಡಿದೆ. ಮೊದಲು ಕಾಡಾನೆಗಳ ಭಯ ಕಾಡುತಿತ್ತು.
ಇದೀಗ ಹುಲಿ ಮತ್ತು ಚಿರತೆಯು ಗ್ರಾಮದಲ್ಲಿ ಕಾಣಸಿಕೊಂಡಿದೆ. ಸಾಕು ಪ್ರಾಣಿಗಳು ಸೇರಿದಂತೆ ಜಾನುವಾರಗಳ ಸಂರಕ್ಷಣೆ ಅಸಾಧ್ಯವಾಗಿರುವ ಪರಿಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಭಯದ ವಾತವರಣದಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ವ್ಯಾಘ್ರವನ್ನು ಸೇರೆ ಹಿಡಿಯುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿಗಳು ಹೆಣ್ಣು ಹುಲಿಯೊಂದು ಎರಡರಿಂದ ಮೂರು ಮರಿಗಳಿಗೆ ಜನ್ಮ ನೀಡಿದ್ದು. ಮರಿಗಳು ತಾಯಿಯಿಂದ ಬೇರ್ಪಟ್ಟವೆ. ಇವುಗಳು ಗ್ರಾಮದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಆಹಾರ ಅರಿಸಿ ಜಾನುವಾರುಗಳು ಸೇರಿದಂತೆ ಸಾಕು ಪಾಣಿಗಳನ್ನು ಬೇಟೆಯಾಡುತ್ತಿವೆ. ಹುಲಿಯ ಹೆಜ್ಜೆ ಗುರುತು ಆಧಾರಿಸಿ ಇಲಾಖೆಯು ಸಿ.ಸಿ. ಕ್ಯಾಮರಗಳನ್ನು ಅಳವಡಿಸಿ ಹುಲಿಯ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಹುಲಿಯನ್ನು ಸೆರೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಲಾಗಿದೆ. ಇಲಾಖೆಯು ಹುಲಿಯ ಸೆರೆಗಾಗಿ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಮನವಿ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರಾದ ದಿನೇಶ್ ಪೊನ್ನಪ್ಪ. ರಂಜಿ, ಚಾರ್ಲಿ ಪಿಂಟೋ, ಜೀವನ್ ಪಿಂಟೋ, ಡಾಲಿ ಮತ್ತು ಕುಕ್ಲೂರು, ಬೆಳ್ಳ್ಳರಿಮಾಡು, ಬೆಂಬೆಬೆಳ್ಳೂರು ಗ್ರಾಮದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.