ಕುಶಾಲನಗರ, ಏ. ೨: ಕುಶಾಲನಗರ ಮಹಾತ್ಮಾ ಗಾಂಧಿ ಸ್ಮಾರಕ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ೨೦೨೪-೨೫ರ ವಾರ್ಷಿಕ ವಿಶೇಷ ಶಿಬಿರ ಕುಶಾಲನಗರ ಸಮೀಪದ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಐದು ದಿನಗಳ ಕಾಲ ನಡೆಯಿತು. ಕಾರ್ಯಕ್ರಮ ಅಧಿಕಾರಿ ಕೆ.ಆರ್. ಮಂಜೇಶ್ ಮತ್ತು ಪ್ರಾಂಶುಪಾಲೆ ಟಿ.ಎ. ಲಿಖಿತ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ೪೦ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಕಾಲೇಜಿನ ಅಧೀಕ್ಷಕ ಮಹೇಶ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಯಡವನಾಡು ಕೃಷಿಕ ಕೆ.ಎಂ. ಗಣೇಶ್ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪತ್ರಕರ್ತೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷೆ ವನಿತಾ ಚಂದ್ರಮೋಹನ್, ಪ್ರಾಂಶುಪಾಲೆ ಟಿ.ಎ. ಲಿಖಿತ ಮಾತನಾಡಿದರು. ಪದವಿ ಕಾಲೇಜಿನ ವಿಭಾಗ ಮುಖ್ಯಸ್ಥೆ ಬಿ.ಜೆ. ಭವ್ಯ, ಶಿಬಿರದ ಸಹ ಶಿಬಿರಾಧಿಕಾರಿಗಳಾದ ಪಿ.ಎಸ್. ದಿನೇಶ್ ಕುಮಾರ್, ಹೆಚ್.ಎನ್. ಲಾವಣ್ಯ, ಜಿ.ಸಿ. ಮಂಜುಶ್ರೀ, ಶರಣ್, ದೀಪ್ತಿ ಡಿಸೋಜ, ಮಂಜುಶ್ರೀ, ಲಾವಣ್ಯ ಮತ್ತಿತರ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.