ಮರಳು ಮೂಟೆಗಳ ಅಳವಡಿಸುವಿಕೆ
ಕೂಡಿಗೆ, ಏ. ೨: ಹೆಬ್ಬಾಲೆಯಿಂದ ಕುಶಾಲನಗರ ತಾಲೂಕು ವ್ಯಾಪ್ತಿಯ ೧೨ ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಕೇಂದ್ರ ಸ್ಥಳವಾದ ಹೆಬ್ಬಾಲೆ ಗ್ರಾಮದ ಸಮೀಪದಲ್ಲಿರುವ ಕಾವೇರಿ ನದಿಯಿಂದ ಜಾಕ್‌ವೆಲ್ ಮೂಲಕ ನೀರನ್ನು ಎತ್ತಿ ೧೨ ಗ್ರಾಮಗಳಿಗೆ ಸರಬರಾಜು ಮಾಡುವ ಸಂದರ್ಭದಲ್ಲಿ ಪ್ರಮುಖ ನದಿಯಾದ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆಯ ಮಟ್ಟ ತೀರಾ ಕಡಿಮೆ ಅದ ಹಿನ್ನೆಲೆಯಲ್ಲಿ ಸಂಬAಧಿಸಿದAತೆ ಇಲಾಖೆಯವರು ಕಾವೇರಿ ನದಿಗೆ ಅಡ್ಡಲಾಗಿ ಮರಳು ತುಂಬಿದ ಮೂಟೆಗಳನ್ನು ಹಾಕಿ ನೀರು ಸಂಗ್ರಹ ಮಾಡುತ್ತಿದ್ದಾರೆ.
ಬೇಸಿಗೆಯ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರು ಹರಿಯುವಿಕೆಯು ತೀರಾ ಕಡಿಮೆಯಾಗಿದೆ. ಹೆಬ್ಬಾಲೆಯಲ್ಲಿ ಕಾವೇರಿ ನದಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಶಿರಂಗಾಲದಲ್ಲಿ ಗುಮ್ಮನಕೊಲ್ಲಿವರೆಗೆ ೧೨ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ನದಿಯಲ್ಲಿ ನೀರಿನ ಪ್ರಮಾಣವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಬೃಹತ್ ಜಾಕ್‌ವೆÀಲ್ ನೀರು ಎತ್ತುವ ಯಂತ್ರ ಸ್ಥಳಕ್ಕೆ ನೀರು ಸಂಗ್ರಹ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಇಲಾಖೆಯವರು ನೀರು ಎತ್ತುವ ಯಂತ್ರ ಸ್ಥಳಕ್ಕೆ ಹೆಚ್ಚುವರಿಯಾಗಿ ನೀರು ಸಿಗುವಂತೆ ನೂರಾರು ಮರಳು ಮೂಟೆಗಳನ್ನು ಹಾಕಿ ನದಿಯ ನೀರು ಒಂದೆಡೆ ಹರಿಯುವಂತೆ ಮಾಡುವ ಪ್ರಯತ್ನ ನಡೆದಿದೆ. ನೀರಿನ ಸಂಗ್ರಹವನ್ನು ಹೆಚ್ಚು ಮಾಡಿ ನದಿಯಿಂದ ನೀರನ್ನು ಬೃಹತ್ ಯಂತ್ರಗಳ ಮೂಲಕ ಎತ್ತಿ ಹೆಬ್ಬಾಲೆಯಲ್ಲಿರುವ ನೀರು ಶುದ್ಧೀಕರಣ ಘಟಕದ ಮೂಲಕ ನೀರನ್ನು ಶುದ್ಧೀಕರಣಗೊಳಿಸಿ ನಂತರ ಬೃಹತ್ ಪಂಪ್‌ಗಳ ಮೂಲಕ ಹೆಬ್ಬಾಲೆಯಿಂದ ಶಿರಂಗಾಲದವರೆಗೆ ಮತ್ತು ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಗುಮ್ಮನಕೊಲ್ಲಿವರೆÀಗಿನ ಉಪ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಕಾರ್ಯದಲ್ಲಿ ಸಂಬAಧಿಸಿದ ಇಲಾಖೆಯವರು ತೊಡಗಿದ್ದಾರೆ.
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಹಾರಂಗಿ ನದಿಯಿಂದ ೨೦೦ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಜಾನುವಾರುಗಳಿಗೆ ಮತ್ತು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಅನುಕೂಲವಾಗುವಂತೆ ನೀರನ್ನು ಹರಿಸಿದ್ದ ಹಿನ್ನೆಲೆಯಲ್ಲಿ ಹಾರಂಗಿ ನದಿಯ ನೀರು ಕೂಡಿಗೆ ಹತ್ತಿರ ಕಾವೇರಿ ನದಿಗೆ ಸೇರಿ ಮುಂದೆ ಸ್ವಲ್ಪ ಪ್ರಮಾಣದಲ್ಲಿ ಹರಿಯುತ್ತಿದೆ. ಹೆಚ್ಚುವರಿ ಸಂಗ್ರಹ ಮೂಲಕ ಜಾಕ್‌ವೆÀಲ್‌ನ ಮೂಲಕ ನೀರು ಎತ್ತಿ ೧೨ ಗ್ರಾಮಗಳಿಗೆ ಸರಬರಾಜು ಮಾಡಿ ಅಲ್ಲಿನ ಬೃಹತ್ ಟ್ಯಾಂಕ್‌ಗಳ ಸಂಗ್ರಹದ ಮೂಲಕ ಎಲ್ಲಾ ಉಪ ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಕಾವೇರಿ ನದಿಯಲ್ಲಿ ನೀರಿನ ಮಟ್ಟವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಹಾಕಿ ನೀರು ಸಂಗ್ರಹದ ಮುಖೇನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವೀರೇಂದ್ರ್ ಕುಮಾರ್ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.