ಮಡಿಕೇರಿ, ಏ. ೨: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಪೊಲೀಸ್ ಕವಾಯತ್ ಮೈದಾನದಲ್ಲಿ ಮುದ್ದಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ೬ನೇ ದಿನವಾದ ಬುಧವಾರದಂದು ೨೧ ತಂಡಗಳು ಮುನ್ನಡೆ ಕಾಯ್ದುಕೊಂಡವು. ಈ ಬಾರಿ ಉತ್ಸವದ ಆತಿಥ್ಯ ವಹಿಸಿರುವ ಮುದ್ದಂಡ ಮೊದಲ ಸೆಣಸಾಟದಲ್ಲಿ ಸೋಲು ಅನುಭವಿಸಿದೆ.
ಕೊಣಿಯಂಡ ತಂಡ ಟೈಬ್ರೇಕರ್ ಮೂಲಕ ಎದುರಾಳಿ ಕಲ್ಲುಮಾಡಂಡ ತಂಡವನ್ನು ೬-೩ ಗೋಲುಗಳ ಅಂತರದಿAದ ಮಣಿಸಿತು. ದಾಳಿ ಪ್ರತಿದಾಳಿಯ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಲ್ಲುಮಾಡಂಡ ತಂಡದ ಚಮನ್ ಚಂಗಪ್ಪ ೧೩ನೇ ನಿಮಿಷದಲ್ಲಿ ಆಕರ್ಷಕ ಗೋಲು ಸಿಡಿಸಿ ತಂಡಕ್ಕೆ ೧-೦ ಗೋಲಿನ ಮುನ್ನಡೆ ದೊರಕಿಸಿಕೊಟ್ಟರು. ಸಮಬಲದ ಗೋಲಿಗಾಗಿ ದಾಳಿಯ ಆಟಕ್ಕಿಳಿದ ಕೊಣಿಯಂಡ ತಂಡಕ್ಕೆ ೨೮ನೇ ನಿಮಿಷ ದೊರೆತ ಪೆನಾಲ್ಟಿ ಅವಕಾಶವನ್ನು ತಂಡದ ಕುಟ್ಟಪ್ಪ ಗೋಲಾಗಿ ಪರಿವರ್ತಿಸುವುದರೊಂದಿಗೆ ನಿಗದಿತ ಅವಧಿಯಲ್ಲಿ ಪಂದ್ಯ ೧-೧ ಗೋಲಿನಿಂದ ಡ್ರಾ ಗೊಂಡಿತು. ಟೈಬ್ರೇಕರ್‌ನಲ್ಲಿ ಕೋಣಿಯಂಡ ೫ ಗೋಲು ಗಳಿಸಿದರೆ, ಕಲ್ಲುಮಾಡಂಡ ತಂಡ ೨ ಗೋಲುಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಕೊಣಿಯಂಡ ೬-೩ ಗೋಲಿನ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು.
ಮೇವಡ ಮತ್ತು ಚಾರಿಮಂಡ ನಡುವಿನ ಪಂದ್ಯದಲ್ಲಿ ಮೇವಡ ತಂಡ ೪-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೇವಡ ತಂಡದ ಅಂಜನ್ ೨, ಜಶನ್ ತಮ್ಮಯ್ಯ ಹಾಗೂ ನಿತಿನ್ ತಲಾ ೧ ಗೋಲು ಬಾರಿಸಿದರು. ಚಾರಿಮಂಡ ನಿತೀನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೋಲತಂಡ ಮತ್ತು ಮಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಂಡ ತಂಡ ೫-೦ ಗೋಲು ಅಂತರದಿAದ ಜಯ ಸಾಧಿಸಿತು. ಮಲ್ಲಂಡ ತಂಡದ ಪರ ಪೊನ್ನಪ್ಪ ಹಾಗೂ ನಾಚಪ್ಪ ತಲಾ ೨ ಹಾಗೂ ಮದನ್ ತಿಮ್ಮಯ್ಯ ೧ ಗೋಲು ದಾಖಲಿಸಿದರು. ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚಿಲ್ಲವಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ಚಿಲ್ಲವಂಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಚಿಲ್ಲವಂಡ ತಂಡದ ಪರ ಮಾಚಯ್ಯ ಹಾಗೂ ಅಯ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಮುದ್ದಂಡ ರಶಿನ್ ಸುಬ್ಬಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪೊಂಜAಡ ಮತ್ತು ಪಟ್ಟಮಾಡ ತಂಡಗಳ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಪಟ್ಟಮಾಡ ತಂಡ ಗೆಲುವು ದಾಖಲಿಸಿತು. ಪಟ್ಟಮಾಡ ಪರ ದೀಪಕ್ ಪೂವಣ್ಣ, ನಿಖಿಲ್ ತಿಮ್ಮಯ್ಯ ಹಾಗೂ ಶ್ರೀಷ್ಮ ಬೊಳ್ಳಮ್ಮ ತಲಾ ೧ ಗೋಲು ದಾಖಲಿಸಿದರು. ಪೊಂಜAಡ ದೇಗುಲ್ ಪಿ.ಎನ್. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುದ್ದಿಯಡ ಮತ್ತು ಚಿಮ್ಮಣಮಾಡ ನಡುವಿನ ಪಂದ್ಯದಲ್ಲಿ ಮುದ್ದಿಯಡ ತಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುದ್ದಿಯಡ ತಂಡದ ಧೀರಜ್ ೨ ಹಾಗೂ ದಿಶಾಂತ್ ೧ ಗೋಲು ಬಾರಿಸಿದರು. ಚಿಮ್ಮಣಮಾಡ ಸಚಿನ್ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
ಬೊಳಿಯಾಡಿರ ಮತ್ತು ಪೆಮ್ಮುಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಿಯಾಡಿರ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಳಿಯಾಡಿರ ಚೇತನ್ ಸುಬ್ಬಯ್ಯ ೨ ಹಾಗೂ ಸಚಿನ್ ಗಣಪತಿ ೧ ಗೋಲು ಬಾರಿಸಿದರು. ಪೆಮ್ಮುಡಿಯಂಡ ಸೋನು ಮೇದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೊಂಡಿರ ಮತ್ತು ಪೇರಿಯಂಡ ನಡುವಿನ ಪಂದ್ಯದಲ್ಲಿ ಕೊಂಡಿರ ೨-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ತಂಡದ ಪರ ತೀರ್ಥ ತಮ್ಮಯ್ಯ ಹಾಗೂ ಸುಬ್ಬಯ್ಯ ತಲಾ ೧ ಗೋಲು ಬಾರಿಸಿದರು. ಪೇರಿಯಂಡ ನಿತಿನ್ ನಂಜಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಂಜಿತAಡ ಮತ್ತು ಪೊನ್ನಕಚ್ಚಿರ ನಡುವಿನ ಪಂದ್ಯದಲ್ಲಿ ಕಂಜಿತAಡ ೨-೦ ಗೋಲು ಅಂತರದಲ್ಲಿ ಗೆಲುವು ಸಾಧಿಸಿತು. ಕಂಜಿತAಡ ತಂಡದ ಪರ ಬೆಳ್ಯಪ್ಪ ಹಾಗೂ ದರ್ಶನ್ ತಲಾ ೧ ಗೋಲು ಬಾರಿಸಿದರು. ಪೊನ್ನಕಚ್ಚಿರ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ ೨ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಾಳೆಯಂಡ ಮತ್ತು ಬಲ್ಯಂಡ ತಂಡದ ನಡುವಿನ ಪಂದ್ಯದಲ್ಲಿ ಮಾಳೆಯಂಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮಾಳೆಯಂಡ ಪರ ಅಪ್ಪಣ್ಣ ಎಂ.ಎ. ಹಾಗೂ ರೋಹಿತ್ ಬೋಪಣ್ಣ ತಲಾ ೧ ಗೋಲು ದಾಖಲಿಸಿದರು. ವರುಣ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಮುಂಡಚಾಡಿರ ಮತ್ತು ಅಯ್ಯಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಂಡಚಾಡಿರ ತಂಡದ ಪರ ಮದನ್, ನಿಹಾಲ್ ಹಾಗೂ ರಜಿತ್ ತಲಾ ೧ ಗೋಲು ದಾಖಲಿಸಿದರು. ಅಯ್ಯಮಾಡ ಕುಟ್ಟಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಅಮ್ಮೆಕಂಡ ಮತ್ತು ಚೆಂಬAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಚೆಂಬAಡ ಗೆಲುವು ದಾಖಲಿಸಿತು. ಚೆಂಬAಡ ಪರ ವಿನ್ನ ನಂಜಪ್ಪ ೨ ಹಾಗೂ ರಂಜು ಭೀಮಯ್ಯ ೧ ಗೋಲು ದಾಖಲಿಸಿದರು. ಯೋಗ್ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬೊಟ್ಟಂಗಡ ಮತ್ತು ಉದ್ದಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಟ್ಟಂಗಡ ಪರ ಕೌಶಿಕ್, ಪ್ರಥು ಹಾಗೂ ನಿಖಿಲ್ ತಲಾ ೧ ಗೋಲು ದಾಖಲಿಸಿದರು. ರಜತ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ ೩ರಲ್ಲಿ ನಡೆದ ಪಂದ್ಯಾಟದಲ್ಲಿ ಚಿಂಡಮಾಡ ಮತ್ತು ಕೇಚೆಟ್ಟಿರ (ಬೆಂಗೂರು) ನಡುವಿನ ಪಂದ್ಯದಲ್ಲಿ ಚಿಂಡಮಾಡ ತಂಡ ೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚಿಂಡಮಾಡ ತಂಡದ ಪರ ತೀರ್ಥನ್ ಚಿಣ್ಣಪ್ಪ ೨ ಮತ್ತು ತೀರ್ಥನ್ ತಮ್ಮಯ್ಯ ೧ ಗೋಲುಗಳನ್ನು ಬಾರಿಸಿದರೆ, ಕೇಚೆಟ್ಟಿರ ತಂಡದ ಪರ ಪ್ರೀತಮ್ ತಮ್ಮಯ್ಯ ೧ ಗೋಲು ದಾಖಲಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕುಂಚೆಟ್ಟಿರ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ ೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಳವಂಡ ಪರ ಕಲನ್ ಚಿಟ್ಟಿಯಪ್ಪ ೨ ಹಾಗೂ ಆದಿತ್ ಮುತ್ತಣ್ಣ ೧ ಗೋಲು ದಾಖಲಿಸಿದರು. ಕುಂಚೆಟ್ಟಿರ ತಂಡದ ಪರ ಪುನೀತ್ ೧ ಗೋಲು ಬಾರಿಸಿದರು. ಕುಂಚೆಟ್ಟಿರ ಪೃಥ್ವಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೋಡಿರ ಮುನ್ನಡೆ
ತಾ. ೧ ರ ಪಂದ್ಯದಲ್ಲಿ ಕೋಡಿರ ತಂಡ ವಾಕ್ ಓವರ್‌ನಿಂದ ಮುನ್ನಡೆ ಸಾಧಿಸಿ ಮುಂದಿನ ಹಂತ ಪ್ರವೇಶಿಸಿದೆ.