ಮಡಿಕೇರಿ, ಮಾ. ೩೧: ಮೆಡಿಕಲ್ ಕೋರ್ಸ್ ಸೇರುವಾಗಲೇ ತಮ್ಮ ಪದವಿ ಮುಗಿದ ಮೇಲೆ ನಿರ್ದಿಷ್ಟ ಕಾಲ ಗ್ರಾಮೀಣ ಭಾಗದಲ್ಲಿ ಬಡವರ ಸೇವೆ ಮಾಡುತ್ತೇವೆ ಎಂಬ ಧೃಡ ಸಂಕಲ್ಪ ಮಾಡಬೇಕು ಎಂದು ಮೆಡಿಕಲ್ ವಿಧ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕಿವಿಮಾತು ಹೇಳಿದರು.
ಹತ್ತನೇ ವರ್ಷದ ವಾರ್ಷಿಕೋತ್ಸವದ ಸಲುವಾಗಿ ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆ ಮಡಿಕೇರಿಯಲ್ಲಿ ಆಯೋಜಿಸಿದ್ದ ಅವೆನ್ಸಿಸ್ ೨೦೨೫ ಬೃಹತ್ ಆರೋಗ್ಯ ಜಾಗೃತಿ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತ ವೃತ್ತಿಯಾಗಿದ್ದು ಜನಸೇವೆ ಮಾಡಲು ಅವಕಾಶ ಹೊಂದಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ಆರಂಭದಲ್ಲಿಯೇ ವೈದ್ಯರು ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದು ಹೇಳಿದರು. ವೈದ್ಯಕೀಯ ಪ್ರದರ್ಶನವನ್ನು ವೀಕ್ಷಿಸಿ ವಿದ್ಯಾರ್ಥಿಗಳ ವಿವರಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಪೊನ್ನಣ್ಣ ನವರು ಆಸ್ಪತ್ರೆಯ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟಿçÃಯ ಕ್ಷಯರೋಗ ದಿನಾಚರಣೆ ಅಂಗವಾಗಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಗೆ ಕೊಡಗು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಲೋಕೇಶ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಪ್ರಾಂಶುಪಾಲರಾದ ಡಾ ವಿಶಾಲ್, ಅಡಳಿತ ವಿಭಾಗದ ಮುಖ್ಯಸ್ಥರಾದ ಡಾ ಸೋಮಶೇಖರ್, ಡಾ. ಕಾಮತ್, ಡಾ. ಮಂಜುನಾಥ್, ಡಾ. ಪುರುಷೋತ್ತಮ್ ಕಾರ್ಯಕ್ರಮ ಉಸ್ತುವಾರಿ ಹೊತ್ತ ವಿದ್ಯಾರ್ಥಿ ಮುಖಂಡರಾದ ಪೂರ್ಣಚಂದ್ರ, ಮನೋಜ್ ಶೇಖರ್, ಮಿಥುನ್ ಆರ್, ಪವನ್ ವಶಿಷ್ಠ, ನೇಹಾ, ಪುನೀತ್, ಕಾವ್ಯ ಗುಪ್ತಾ, ಸೂರ್ಯ ವೈ, ಅನುದೀಪ್, ಶಶಾಂಕ್ ವೈ, ನಾಝಿಯಾ ತಸ್ವೀನ್, ಮನು, ಪ್ರಜ್ನಾ, ಜಹರಾ, ಲಿಖಿತ ಬಿ.ಟಿ. ಐಶ್ವರ್ಯ ರಾಜ್, ಭವಾನಿ ರೆಡ್ಡಿ, ತೃಪ್ತಿ, ಚಂದನಶ್ರೀ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.