x

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಭಾರಿ ಅಡಚಣೆ

ನವದೆಹಲಿ, ಮಾ. ೨೬: ಭಾರತದಾದ್ಯಂತ ಬಳಕೆದಾರರು ಯು.ಪಿ.ಐ. ವಹಿವಾಟುಗಳಲ್ಲಿ ಅಡಚಣೆಗಳನ್ನು ಅನುಭವಿಸುತ್ತಿದ್ದು ಗೂಗಲ್ ಪೇ, ಪೇಟಿಎಂ ಮತ್ತು ವಿವಿಧ ಬ್ಯಾಂಕಿAಗ್ ಅಪ್ಲಿಕೇಶನ್‌ಗಳಲ್ಲಿ ಪಾವತಿ ವೈಫಲ್ಯಗಳು ವರದಿಯಾಗಿವೆ. ಸಂಜೆಯ ವೇಳೆಗೆ ಸ್ಥಗಿತ ವರದಿಗಳು ಹೆಚ್ಚಾಗಿದ್ದು ನಿಧಿ ವರ್ಗಾವಣೆ, ವಹಿವಾಟುಗಳು ಮತ್ತು ಲಾಗಿನ್ ಪ್ರವೇಶದ ಮೇಲೆ ಪರಿಣಾಮ ಬೀರಿದೆ. ದೈನಂದಿನ ವಹಿವಾಟುಗಳಿಗಾಗಿ ಈ ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುವ ಬಳಕೆದಾರರಲ್ಲಿ ಈ ಸ್ಥಗಿತವು ಹತಾಶೆಯನ್ನು ಉಂಟುಮಾಡಿದೆ ಎಂದು ತಿಳಿದಿದೆ. ಬುಧವಾರ ಸಂಜೆ ದೂರುಗಳಲ್ಲಿ ಹೆಚ್ಚಳ ದಾಖಲಾಗಿದ್ದು ಸಂಜೆ ೭ ಗಂಟೆಯ ನಂತರ ೨೩,೦೦೦ಕ್ಕೂ ಹೆಚ್ಚು ದೂರುಗಳ ಏರಿಕೆ ಕಂಡುಬAದಿದೆ.

ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಕ್ಯಾಬ್ ಚಾಲಕ

ಬೆಂಗಳೂರು, ಮಾ. ೨೬: ೩೯ ವರ್ಷದ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಂದು ನಂತರ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಆರೋಪಿ ಚಂದ್ರಶೇಖರ್ ನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿಗೆ ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನವಿತ್ತು. ಇದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯ ಪತ್ನಿ ಯಾವಾಗಲೂ ಫೋನ್‌ನಲ್ಲಿ ಯಾರೊಂದಿಗೊ ಮಾತನಾಡುತ್ತಿದ್ದಳು. ಇದು ಆಗಾಗ್ಗೆ ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು. ಮಂಗಳವಾರವೂ ಸಹ, ಚಂದ್ರಶೇಖರ್ ಮತ್ತು ಅವರ ೩೫ ವರ್ಷದ ಪತ್ನಿ ವೇಲಾರಮಣಿ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಬ್ಬಂದಿಯಿAದ ಲಂಚ ಪಡೆಯುತ್ತಿದ್ದ ಡಿವೈಎಸ್ಪಿ ಲೋಕಾಯುಕ್ತ ಬಲೆಗೆ!

ಶಿವಮೊಗ್ಗ, ಮಾ. ೨೬: ತಮ್ಮ ಇಲಾಖೆಯ ಪೊಲೀಸ್ ಸಿಬ್ಬಂದಿಯಿAದಲೇ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲಾ ಸಶಸ್ತç ಮೀಸಲು ಪಡೆಯ(ಡಿಎಆರ್) ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಕೃಷ್ಣಮೂರ್ತಿ ಟಿ.ಪಿ. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಮ್ಮ ಅಧೀನದಲ್ಲಿ ಕೆಲಸ ಮಾಡುವ ಸಹಾಯಕ ಹೆಡ್ ಕಾನ್‌ಸ್ಟೆಬಲ್ ಅವರಿಂದ ರೂ. ೫,೦೦೦ ಲಂಚ ಪಡೆಯುತ್ತಿದ್ದಾಗ ಕೃಷ್ಣಮೂರ್ತಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಪ್ರಸನ್ನ ಕುಮಾರ್ ಟಿ.ಎಸ್. (೩೫) ಕಳೆದ ಒಂದೂವರೆ ವರ್ಷಗಳಿಂದ ಭದ್ರಾವತಿ ತಾಲೂಕು ಖಜಾನೆಯಲ್ಲಿ ಖಜಾನೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಮತ್ತು ರಜೆ ಸಂಬAಧಿತ ಅನುಮೋದನೆಗಾಗಿ ಕೃಷ್ಣಮೂರ್ತಿ ರೂ. ೫,೦೦೦ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಧಾರ್ಮಿಕ ಮೆರವಣಿಗೆ ವೇಳೆ ಕಲ್ಲುತೂರಾಟ : ಪರಿಸ್ಥಿತಿ ಉದ್ವಿಗ್ನ

ಹಜಾರಿಬಾಗ್, ಮಾ. ೨೬: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಧಾರ್ಮಿಕ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ೧೧ ಗಂಟೆ ಸುಮಾರಿಗೆ ರಾಮನವಮಿ ಆಚರಣೆಯ ಭಾಗವಾಗಿ ಮಂಗಳ ಮೆರವಣಿಗೆ ನಡೆಯುತ್ತಿದ್ದಾಗ ಜಾಮಾ ಮಸೀದಿ ಚೌಕ್ ಬಳಿ ಈ ಘಟನೆ ನಡೆದಿದೆ ಎಂದು ಹಜಾರಿಬಾಗ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪರಮೇಶ್ವರ್ ಕಾಮತಿ ತಿಳಿಸಿದ್ದಾರೆ. ಎರಡೂ ಕಡೆಯಿಂದ ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕಲ್ಲು ತೂರಾಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲಾಗುತ್ತಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು. ಸ್ಥಳೀಯರ ಪ್ರಕಾರ, ಕೋಮುಭಾವನೆ ಪ್ರಚೋದಿಸುವ ಹಾಡಿನ ಬಗ್ಗೆ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿ, ನಂತರ ಪರಿಸ್ಥಿತಿ ಕಲ್ಲು ತೂರಾಟಕ್ಕೆ ಕಾರಣವಾಯಿತು ಎನ್ನಲಾಗಿದೆ.