ಮಡಿಕೇರಿ, ಮಾ. ೨೩: ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆ ಮಡಿಕೇರಿ ತಾಲೂಕಿನ ವತಿಯಿಂದ ಅಂತರ್ಜಾಲದ ಮುಖಾಂತರ ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಡಾ. ವಿ.ಕೃ. ಗೋಕಾಕರ ಕುರಿತಾಗಿ ವಿಚಾರ ಸಂಕಿರಣ ಸಂಘದ ಅಧ್ಯಕ್ಷರಾದ ವಿಜಯ ವಿಷ್ಣುಭಟ್ ಅಧ್ಯಕ್ಷತೆಯಲ್ಲಿ, ಉಪಾಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಅವರ ಉಪಸ್ಥಿತಿಯಲ್ಲಿ ನಡೆಯಿತು. ಮಡಿಕೇರಿ ತಾಲೂಕಿನ ನಿರ್ದೆಶಕರುಗಳಾದ ಶೋಭಾ ರಕ್ಷಿತ್ ಹಾಗೂ ಪುಷ್ಪ ಡಿ.ಹೆಚ್. ವಿಚಾರ ಮಂಡಿಸಿದರು. ಶೋಭಾ ರಕ್ಷಿತ್ ಪ್ರಾರ್ಥಿಸಿದರು. ದೀಪಿಕಾ ಸಂದೀಪ್ ಸ್ವಾಗತಿಸಿದರು, ಜಯಲಕ್ಷಿö್ಮ ಎಂ.ಬಿ. ವಂದಿಸಿದರು. ಸಂಘದ ಕಾರ್ಯದರ್ಶಿ ಶರ್ಮಿಳಾ ರಮೇಶ್ ನಿರೂಪಿಸಿದರು. ಸಂಘದ ಉಪಾಧ್ಯಕ್ಷರಾದ ಹಲವು ಸದಸ್ಯರೊಂದಿಗೆ ವಿ.ಕೃ. ಗೋಕಾಕರ ಜನ್ಮ ಸ್ಥಳವಾದ ಸವಣೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಣಿತ-ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಎನ್. ಆನಂದ್ ಭಾಗವಹಿಸಿದ್ದರು.