ಸೋಮವಾರಪೇಟೆ,ಮಾ.೨೧: ಜೆಸಿಐ ಪುಷ್ಪಗಿರಿ ಮಹಿಳಾ ಘಟಕದ ವತಿಯಿಂದ ತಾ.೨೨ರಂದು (ಇಂದು) ಮಧ್ಯಾಹ್ನ ೨.೩೦ಕ್ಕೆ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಲಿದೆ.
ಜೆಸಿ ವಲಯ ನಿರ್ದೇಶಕಿ ಮಾಯಾ ಗಿರೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೇಡಿ ಜೆಸಿ ವಿಂಗ್ ಅಧ್ಯಕ್ಷೆ ಜ್ಯೋತಿ ರಾಜೇಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶನಿವಾರಸಂತೆಯ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸುಜಲಾದೇವಿ, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್ ಹಾಗೂ ಜೆಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಚಿಕ್ಕತೋಳೂರು ಗ್ರಾಮದ ಶಕುಂತಲ, ಕೃಷಿಯಲ್ಲಿ ಸಾಧನೆಗೈದ ಗೌಡಳ್ಳಿಯ ಜಿ.ಕೆ. ಲತ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ವಸಂತಿ, ಶಿಕ್ಷಣ ಕ್ಷೇತ್ರದಲ್ಲಿ ಎಂ.ಐ. ರಿಜ್ವಾನ ಬಾನು ಹಾಗೂ ಜೆಸಿ ಖೇಲ್‌ರತ್ನ ಪುರಸ್ಕೃತ ತಾನಿಯ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಕಾರ್ಯದರ್ಶಿ ವಿನುತಾ ಸುದೀಪ್ ತಿಳಿಸಿದ್ದಾರೆ.