ಮಡಿಕೇರಿ, ಮಾ. ೨೧: ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾಗಿದ್ದ ಕೊಡಗಿನ ಆಪಾಡಂಡ ರಘು (೭೫) ನಿಧನ ಹೊಂದಿದರು.
೫೫ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಚಿತ್ರರಂಗ ಶೋಕ ಸಾಗರದಲ್ಲಿದೆ. ಅನಾರೋಗ್ಯದಿಂದ ಬಳಲುತ್ತಾ ಇದ್ದ ರಘು ಅವರು ತಾ. ೨೦ ರಂದು ರಾತ್ರಿ ನಿಧನ ಹೊಂದಿದರು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.