ಶನಿವಾರಸAತೆ, ಮಾ. ೧೮: ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಿಒಟಿಪಿಎ ಕಾಯ್ದೆ ಉಲ್ಲಂಘನೆ ಕುರಿತು ಅಂಗಡಿ ಹಾಗೂ ಹೊಟೇಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ಸಂದರ್ಭ ಪತ್ತೆಯಾದ ೧೨ ಪ್ರಕರಣಗಳಿಗೆ ರೂ.೧೬೦೦ ದಂಡ ವಿಧಿಸಲಾಯಿತು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ, ಜಿಲ್ಲಾ ತಂಬಾಕು ಸಂಯೋಜಕಿ ಪುನೀತಾ, ಜಿಲ್ಲಾ ತಂಬಾಕು ಕೋಶದ ಮಂಜುನಾಥ್, ಹಾಗೂ ಪೊಲೀಸರು ಹಾಜರಿದ್ದರು.