ಕೂಡಿಗೆ, ಮಾ. ೧೭: ಶಿರಂಗಾಲ ಗ್ರಾಮ ದೇವತೆಯಾದ ಮಂಟಿಗಮ್ಮ ದೇವಿಯ ವಾರ್ಷಿಕೋತ್ಸವ ಅಂಗವಾಗಿ ನಡೆದ ಪೂಜ್ಯೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಶಿರಂಗಾಲದಲ್ಲಿರುವ ಮಂಟಿಗಮ್ಮ ದೇವಾಲಯದ ಅಭಿವೃದ್ಧಿಗೆ ಪೂರಕವಾದ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಗ್ರಾ.ಪಂ. ವ್ಯಾಪ್ತಿಗೆ ಸಂಬAಧಿಸಿದAತೆ ಈಗಾಗಲೇ ಕ್ರಿಯಾ ಯೋಜನೆ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಹಂತ-ಹAತವಾಗಿ ಪೂರ್ಣಗೊಳಿಸ ಲಾಗುವುದು, ಸರಕಾರದ ವಿವಿಧ ಯೋಜನೆಯ ಅಡಿಯಲ್ಲಿ ಗಡಿ ಭಾಗವಾದ ಶಿರಂಗಾಲ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುವ ಮುಖೇನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಕೊಡ್ಲಿಪೇಟೆ ಕಿರುಕೂಡ್ಲಿ ಮಠದ ಸದಾಶಿವ ಸ್ವಾಮೀಜಿ ಗ್ಯಾರಂಟಿ ಅನುದಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಗಣೇಶ್, ಕೆ.ಪಿ.ಸಿ.ಸಿ. ಸದಸ್ಯ ನಟೇಶ್ ಗೌಡ, ಸೇರಿದಂತೆ ಸಮಿತಿ ಸದಸ್ಯರು ಸೇರಿದಂತೆ ಭಕ್ತರು ಹಾಜರಿದ್ದರು.