ಮಡಿಕೇರಿ: ಅಂಗನವಾಡಿ ಮಕ್ಕಳ ಆರೋಗ್ಯ ಮತ್ತು ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಭರವಸೆ ನೀಡಿದ್ದಾರೆ.

ಮಾಯಮುಡಿ ಗ್ರಾ.ಪಂ ವತಿಯಿಂದ ಗ್ರಾ.ಪಂ ವ್ಯಾಪ್ತಿಯ ೧೧ ಅಂಗನವಾಡಿಗಳಿಗೆ ಕುರ್ಚಿಗಳನ್ನು ವಿತರಿಸಿ ಮಾತನಾಡಿದ ಅವರು ಅಂಗನವಾಡಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಗ್ರಾ.ಪಂ ಅನುದಾನದಲ್ಲಿ ೧೧ ಅಂಗನವಾಡಿಗಳ ಮಕ್ಕಳಿಗೆ ತಲಾ ೧೪ ಕುರ್ಚಿಗಳನ್ನು ವಿತರಿಸಲಾಗುತ್ತಿದೆ. ಪೋಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಟಾಟು ಮೊಣ್ಣಪ್ಪ ಕರೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಸದಪ್ಪ ಮಟಲ್‌ಕೋಡ್, ಉಪಾಧ್ಯಕ್ಷರಾದ ಪಿ.ಎಸ್.ಶಾಂತ, ಸದಸ್ಯರುಗಳಾದ ಹೆಚ್.ಆರ್.ಸುಶೀಲ, ಪಿ.ಕೆ.ಸರಸ್ವತಿ, ಕೆ.ಕೆ.ಸುಮಿತ್ರ ರವಿ, ಎಂ.ಪಿ.ವೀಣಾ, ಸಿ.ಕೆ.ಪೂವಯ್ಯ, ಕೆ.ಕೆ. ಶಬರೀಶ್, ಪಿ.ಮುತ್ತಮ್ಮ, ಸಿಬ್ಬಂದಿಗಳಾದ ಆಶಾ ಸೂದನ್, ಸಚಿತಾ, ಗುರು ಹಾಗೂ ಶ್ರೀಜೇಶ್ ಉಪಸ್ಥಿತರಿದ್ದರು.

ನಾಪೋಕ್ಲು: ಸಮೀಪದ ಮೂರ್ನಾಡಿನ ಮಾರುತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಡನ್ ಘಟಿಕೋತ್ಸವ ದಿನವನ್ನು ಆಚರಿಸಲಾಯಿತು.

ಘಟಿಕೋತ್ಸವವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಮುಂಡAಡ ಅಪ್ಪಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಆಗಬೇಕಾದರೆ ಪ್ರಾರಂಭದಲ್ಲಿ ಅವರ ತಳಹದಿ ಉತ್ತಮವಾಗಿರಬೇಕು. ಶಿಕ್ಷಕರು ಕಠಿಣ ಪರಿಶ್ರಮದಿಂದ ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಉತ್ತಮರಾಗಿ ರೂಪಿಸುತ್ತಾರೆ ಹಾಗೂ ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ ಭಾವನಾತ್ಮಕ ಬೌದ್ಧಿಕ ಅಂಶಗಳ ಕುರಿತು ತರಬೇತಿ ನೀಡಬೇಕು ಎಂದರು.

ಒಂದನೇ ತರಗತಿ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಸರ್ವರ ಮನ ಸೂರೆಗೊಳಿಸಿತು.

ಯುಕೆಜಿಯ ಪ್ರತಿಭಾನ್ವಿತ ಪುಟ್ಟ ಮಕ್ಕಳು ಪದವಿ ನಿಲುವಂಗಿ ಮತ್ತು ಕ್ಯಾಪ್ ಧರಿಸಿ ಪದವಿ ಸ್ವೀಕರಿಸಿದರು..

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಂಡAಡ ಅಪ್ಪಚ್ಚು, ಉಪಾಧ್ಯಕ್ಷ ಚೇಂದ್ರಿಮಾಡ ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಬಡುವಂಡ ಅರುಣ್, ಪ್ರಾಂಶುಪಾಲರಾದ ಸುಮಿತ್ರಾ, ಉಪ ಪ್ರಾಂಶುಪಾಲ ರಾದ ಎಂ. ಡಿ. ಹೇಮಾವತಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಪಾಲ್ಗೊಂಡಿದ್ದರು.ಸಾಯಿಶAಕರ್ ವಿದ್ಯಾಸಂಸ್ಥೆಯಲ್ಲಿ ವಿಶೇಷವಾಗಿ ೧೦ ತರಗತಿ ಮುಗಿಸಿ ತೆರಳುವ ವಿದ್ಯಾರ್ಥಿಗಳಿಗೆ ‘ಉರಿಯುವ ದೀಪದಂತೆ ಬದುಕು ಉಜ್ವಲವಾಗಿ ಹೊಳೆಯಲಿ’ ಎಂಬ ಘೋಷವಾಕ್ಯದೊಂದಿಗೆ ಜ್ಯೋತಿಪ್ರಧಾನ್ ಕಾರ್ಯಕ್ರಮ ನಡೆಯಿತು. ನಾಗರಹೊಳೆ ವಿಭಾಗದ ಅರಣ್ಯಾಧಿಕಾರಿ ಸೀಮಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದರು. ಸಾಯಿ ಶಂಕರ್ ವಿದ್ಯಾ ಸಂಸ್ಥೆ ಅಧ್ಯಕ್ಷ ಝರು ಗಣಪತಿ, ಅರಮಣಮಡ ಸತೀಶ್ ದೇವಯ್ಯ, ಸಂಸ್ಥೆಯ ಕಾರ್ಯದರ್ಶಿ ಗೌರವ್ ಗಣಪತಿ, ಸಂಸ್ಥೆಯ ಆಡಳಿತ ಅಧಿಕಾರಿ ರಮ್ಯಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ರೀನಾ ಸ್ವಾಗತಿಸಿ ದರೆ, ಶಿಕ್ಷಕಿ ನಿರೀಕ್ಷಾ ವಂದಿಸಿದರು. ಕಾರ್ಯಕ್ರಮ ವನ್ನು ಶಿಕ್ಷಕಿ ಭವಾನಿ ಮತ್ತು ರೇಷ್ಮಾ ನಿರೂಪಿಸಿದರು.

ಚೆಯ್ಯಂಡಾಣೆ : ಕರ್ನಾಟಕ ರಾಜ್ಯ ಇಸ್ಲಾಂ ಧಾರ್ಮಿಕ ವಿದ್ಯಾಭ್ಯಾಸ ಸಂಸ್ಥೆಯ (ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್) ೨೦೨೪-೨೫ನೇ ಸಾಲಿನ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕೊಡಗು ಜಿಲ್ಲೆಯಲ್ಲಿ ೫, ೭, ೧೦ ಹಾಗೂ ೧೨ ತರಗತಿಗಳಲ್ಲಿ ಒಟ್ಟು ೧೭೩೦ ವಿದ್ಯಾರ್ಥಿಗಳ ಪೈಕಿ ೧೬೫೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೯೬% ಫಲಿತಾಂಶ ಲಭಿಸಿದೆ.

೫ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ೫೯೦ ಅಂಕಗಳನ್ನು ಪಡೆದು ಹಿಯಾನ ಫಾತಿಮ ವಿ.ಕೆ. ತಹ್ಲೀಮುದ್ದೀನ್ ಮದರಸ ಅಮ್ಮತಿ ಪ್ರಥಮ, ೫೮೯ ಅಂಕಗಳನ್ನು ಪಡೆದು ಸಾಕಿಬ್ ಮತ್ತು ಅಫ್ನಾನ್ ಹೆಚ್.ಯು., ಹಯಾತುಲ್ ಇಸ್ಲಾಂ ಮದರಸ ಕೊಂಡAಗೇರಿ ದ್ವಿತೀಯ ಹಾಗೂ ೫೮೪ ಅಂಕಗಳನ್ನು ಪಡೆದು ಫಾತಿಮಾ ರಿಝಾನ ಟಿ.ಎಸ್. ಮುನವ್ವಿರುಲ್ ಇಸ್ಲಾಂ ಮದರಸ ಸುಂಟಿಕೊಪ್ಪ ತೃತೀಯ ಸ್ಥಾನವನ್ನು ಗಳಿಸಿ ಸಾಧನೆ ಮಾಡಿದ್ದಾರೆ.

೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ೫೯೬ ಅಂಕಗಳನ್ನು ಪಡೆದು ಸನಾ ಫಾತಿಮಾ ತಖ್ವೀಮುಲ್ ಇಸ್ಲಾಂ ಮದ್ರಸ ಅಯ್ಯಂಗೇರಿ ಪ್ರಥಮ, ೫೯೧ ಅಂಕಗಳನ್ನು ಪಡೆದು ಇಝ್ನಾ ಫಬಿನ್ ಎಂ.ಹೆಚ್. ಮುನವ್ವಿರುಲ್ ಇಸ್ಲಾಂ ಮದರಸ ಸುಂಟಿಕೊಪ್ಪ ದ್ವಿತೀಯ ಹಾಗೂ ೫೮೭ ಅಂಕಗಳನ್ನು ಪಡೆದು ಅಸ್ಮಿಲಾ ತೃತೀಯ ಸ್ಥಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

೧೦ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ೪೦೦ ಅಂಕಗಳನ್ನು ಪಡೆದು ಸುಹಾನ ಅನ್ವಾರುಲ್ ಇಸ್ಲಾಂ ಮದರಸ ದರ್ಗಾ ಪ್ರಥಮ, ೩೯೬ ಅಂಕಗಳನ್ನು ಪಡೆದು ರಈಸಾ ಕೆ.ಆರ್. ಇರ್ಷಾದುಲ್ ಇಸ್ಲಾಂ ಮದರಸ ಕಿಕ್ಕರೆ ದ್ವಿತೀಯ ಹಾಗೂ ೩೯೫ ಅಂಕಗಳನ್ನು ಪಡೆದು ಆಯಿಶಾ ವಿ. ಅನ್ವಾರುಲ್ ಇಸ್ಲಾಂ ಮದರಸ ದರ್ಗಾ ತೃತೀಯ ಸ್ಥಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

೧೨ನೇ ತರಗತಿಯ ಪಬ್ಲಿಕ್ ಪರಿಕ್ಷೇಯಲ್ಲಿ ೨೯೬ ಅಂಕಗಳನ್ನು ಪಡೆದು ಆಯಿಶತ್ ಅಝ್ಮಿಯಾ ಮುನವ್ವಿರುಲ್ ಇಸ್ಲಾಂ ಮದರಸ ಸುಂಟಿಕೊಪ್ಪ ಪ್ರಥಮ, ೨೯೫ ಅಂಕಗಳನ್ನು ಪಡೆದು ಮುಹಮ್ಮದ್ ಶಾಹಿಲ್ ಮುನವ್ವಿರುಲ್ ಇಸ್ಲಾಂ ಮದರಸ ಮಾಪಿಳತ್ತೋಡು ದ್ವಿತೀಯ ಹಾಗೂ ೨೯೧ ಅಂಕಗಳನ್ನು ಪಡೆದು ಅಫೀಫಾ ಶರಿನ್ ಹಯಾತುಲ್ ಇಸ್ಲಾಂ ಮದರಸ ಕಂಡಕ್ಕರೆ ತೃತೀಯ ಸ್ಥಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ.