ನಾಪೋಕ್ಲು, ಮಾ. ೧೭: ಇಲ್ಲಿಗೆ ಸಮೀಪದ ಬಲ್ಲಮಾವಟ್ಟಿ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ಪತ್ತೆಯಾದ ನವಜಾತ ಶಿಶು ವಾರಿಸುದಾರರ ಪತ್ತೆಗೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳ ಸಭೆ ನಡೆಯಿತು.

ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಭಾಗವಹಿಸಿ ಪೇರೂರು ಗ್ರಾಮದಲ್ಲಿ ಶನಿವಾರ ರಾತ್ರಿ ನವಜಾತ ಶಿಶು ಪತ್ತೆಯಾಗಿದೆ. ಮಗುವಿನ ವಾರಿಸುದಾರರ ಬಗ್ಗೆ ಪತ್ತೆ ಕಾರ್ಯ ಕೈಗೊಂಡಿದ್ದು ಯಾರಿಗಾದರೂ ಮಾಹಿತಿ ಸಿಕ್ಕಿದಲ್ಲಿ ಮೊ. ೯೪೮೦೮೦೪೯೪೮ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದರು. ಮಾಹಿತಿ ನೀಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು. ಆರೋಪಿಗಳ ಪತ್ತೆ ಹಚ್ಚುವ ಬಗ್ಗೆ ಎಲ್ಲರೂ ಸಹಕರಿಸುವಂತೆ ಸೂಚಿಸಿದರು.

ಈ ಸಂದರ್ಭ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಹೆಣ್ಣು ಮಕ್ಕಳಿಗೆ ಸಂಬAಧಿಸಿದ ಕಾಯಿದೆ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚೌರಿರ ಶರತ್, ನೇತಾಜಿ ಪ್ರೌಢಶಾಲೆಯ ಶಿಕ್ಷಕ ರವಿ ಪೂಜಾರ್. ಬಲ್ಲಮಾವಟ್ಟಿ ಸಿಎಚ್‌ಒ ಮಿಲನ, ಕೋರಂಗಾಲದ ಜೀವಿತ, ಅಯ್ಯಂಗೇರಿಯ ಮಿಲನ, ಆಶಾ ಕಾರ್ಯಕರ್ತೆ ನಂದಿನಿ, ಪೂವಮ್ಮ, ಸವಿತಾ, ಅಂಗನವಾಡಿ, ಪೊಲೀಸ್ ಸಿಬ್ಬಂದಿ, ಇನ್ನಿತರರು ಉಪಸ್ಥಿತರಿದ್ದರು.