ಬಾಹ್ಯಾಕಾಶದಲ್ಲಿ ೮ ದಿನಗಳ ವಾಸ್ತವ್ಯಕ್ಕೆಂದು ತೆರಳಿ, ಸುಮಾರು ೯ ತಿಂಗಳು ಅಂತರರಾಷ್ಟಿçÃಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ಭುವಿಗೆ ಮರಳುವ ಸಮಯ ಸನ್ನಿಹಿತವಾಗಿದೆ.

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾನಿಗಳಾದ ಸುನಿತಾ ಮತ್ತು ವಿಲ್ಮೋರ್ ಅವರನ್ನು ಮರಳಿ ಕರೆತರಲು ಕ್ರೂö್ಯ -೧೦ ಮಿಷನ್ ಮಾರ್ಚ್ ೧೪ ರಂದು ಉಡ್ಡಯನವಾಗಿದೆ. ಕ್ರೂö್ಯ ಡ್ರಾö್ಯಗನ್ ಹೆಸರಿನ ಗಗನ ನೌಕೆಯನ್ನು ಹೊತ್ತೊಯ್ದ ಸ್ಪೇಸ್ - ಎಕ್ಸ್ನ ‘ಫಾಲ್ಕನ್ -೯’ ರಾಕೆಟ್ ಕೆನಡಿ ಬಾಹ್ಯಾಕಾಶ ಕೇಂದ್ರದಿAದ ಗಗನಕ್ಕೆ ಚಿಮ್ಮಿದೆ.

ಈ ಗಗನ ನೌಕೆ ಧರೆಗೆ ಹಿಂದಿರುಗುವಾಗ, ಸುನಿತಾ ಮತ್ತು ವಿಲ್ಮೋರ್ ಜೊತೆಗೆ, ಐಎಸ್‌ಎಸ್‌ನಲ್ಲಿರುವ ಇನ್ನಿಬ್ಬರು ಗಗನಯಾನಿಗಳಾದ ಅಲೆಗ್ಸಾಂಡರ್ ಗೊರ್ಬನೊವ್ ಮತ್ತು ನಿಕ್‌ಹೇಗ್ ಅವರನ್ನೂ ಸುರಕ್ಷಿತವಾಗಿ ಕರೆತರುವ ಗುರಿ ಹೊಂದಿದೆ. ಎಲ್ಲವೂ ನಿಗದಿಯಾದಂತೆಯೇ ಸರಿಯಾಗಿ ನಡೆದರೆ, ಈ ಗಗನ ನೌಕೆ ಗಗನಯಾತ್ರಿಗಳೊಂದಿಗೆ ಮಾರ್ಚ್ ೧೯ ರಂದು (ಇಂದು) ಭೂಮಿಗೆ ಮರಳಲಿದೆ.

ಸುನಿತಾ ಮತ್ತು ವಿಲ್ಮೋರ್, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಕಳೆದ ವರ್ಷ ಜೂನ್ ೫ ರಂದು ೮ ದಿನಗಳ ಬಾಹ್ಯಾಕಾಶದಲ್ಲಿನ ವಾಸ್ತವ್ಯಕ್ಕೆ ಬೋಯಿಂಗ್ ನೌಕೆ ಪರೀಕ್ಷೆಗೆ ಪ್ರಯಾಣಿಸಿದ್ದರು. ಆದರೆ ಅಂತರರಾಷ್ಟಿçÃಯ ಬಾಹ್ಯಾಕಾಶ ನಿಲ್ದಾಣ ತಲುಪಿದ ನಂತರ, ಗಗನ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬAದ ಹಿನ್ನೆಲೆಯಲ್ಲಿ ಭೂಮಿಗೆ ಮರಳದೆ ದೀರ್ಘ ಅವಧಿ ಐಎಸ್‌ಎಸ್‌ನಲ್ಲೇ ನೆಲೆಸುವಂತಾಯಿತು.

ಈಗ ಸುನಿತಾರನ್ನು ಸುರಕ್ಷಿತವಾಗಿ ಭುವಿಗೆ ಕರೆತರಲು ನಭಕ್ಕೆ ಚಿಮ್ಮಿರುವ ಸ್ಪೇಸ್‌ಎಕ್ಸ್ನ ಗಗನ ನೌಕೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ನಾಸಾದ ಆ್ಯನ್ ಮೆಕ್ಲೇನ್, ನಿಕೋಲ್ ಅಯೆರ್ಸ್, ಜಪಾನ್‌ನ ತಕುಯಾ ಒನಿಶಿ ಮತ್ತು ರಷ್ಯಾದ ಕಿರಿಲ್ ಪೆಸ್ಕೊವ್ ಈ ಗಗನಯಾನಿಗಳು. ಇವರು ಐಎಸ್‌ಎಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಭೂಮಿಯಿಂದ ೪೦೦ ಕಿ.ಮೀ. ದೂರದಲ್ಲಿರುವ ಅಂತರರಾಷ್ಟಿçÃಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದು ಸುನಿತಾ ಮತ್ತು ವಿಲ್ಮೋರ್ ಅವರ ೩ನೇ ಭೇಟಿ. ಈ ಹಿಂದಿನ ೨ ಭೇಟಿಯ ವೇಳೆ ಸುನಿತಾ ೩೨೨ ದಿನಗಳನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದಿದ್ದರೆ, ವಿಲ್ಮೋರ್ ೧೭೮ ದಿನ ಇದರಲ್ಲಿ ನೆಲೆಸಿದ್ದರು.

ಈ ಬಾರಿಯ ಗಗನಯಾತ್ರೆಯ ಸಂದರ್ಭ ತಾವು ಗಣೇಶನ

ಮೂರ್ತಿಯನ್ನು ಬಾಹ್ಯಾಕಾಶ ಕೇಂದ್ರಕ್ಕೆ ತಮ್ಮೊಂದಿಗೆ ಒಯ್ಯುವುದಾಗಿ ಸುನಿತಾ ಹೇಳಿದರು. ಹಿಂದಿನ ಗಗನಯಾತ್ರೆ ಸಂದರ್ಭ ಅವರು ಭಗವದ್ಗೀತೆಯ ಪ್ರತಿಯನ್ನು ತಮ್ಮೊಂದಿಗೆ ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ದಿದ್ದರು. ಈ ವರ್ಷ ಜನವರಿಯ ವೇಳೆಗೆ ೯ ಬಾರಿ ಬಾಹ್ಯಾಕಾಶ ನಡಿಗೆ ಮಾಡಿ ಸುನಿತಾ ವಿಲಿಯಮ್ಸ್ ೬೨ ಗಂಟೆ ೬ ನಿಮಿಷ ಸ್ಪೇಸ್ ವಾಕ್ ದಾಖಲೆ ನಿರ್ಮಿಸಿದ್ದಾರೆ.

ಸುನಿತಾ ಅವರ ೩ನೇ ಬಾರಿಯ ಗಗನಯಾನಕ್ಕೆ ಆರಂಭದಿAದಲೂ ವಿಘ್ನಗಳು ಎದುರಾದವು. ಆರಂಭದಲ್ಲಿ ಅವರನ್ನು ಬಾಹ್ಯಾಕಾಶ ಕೇಂದ್ರಕ್ಕೆ ಒಯ್ಯಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಆಮ್ಲಜನಕ ಬಿಡುಗಡೆ ಕವಾಟ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಉಡ್ಡಯನವನ್ನು ಮುಂದೂಡಲಾಗಿತ್ತು.

ಕಳೆದ ವರ್ಷ ಜೂನ್ ೫ ರಂದು ಪ್ರಯಾಣಿಸಿ ಜೂನ್ ೬ ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ ನಂತರ, ಸ್ಟಾರ್‌ಲೈನರ್ ನೌಕೆಯ ನೋದಕ ವ್ಯವಸ್ಥೆ ಮತ್ತು ಯಂತ್ರಗಳಲ್ಲಿ ದೋಷದ ಹಿನ್ನೆಲೆ, ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಲು ಪ್ರಯಾಸಪಡಬೇಕಾಯಿತು. ತಾಂತ್ರಿಕ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಸ್ಟಾರ್‌ಲೈನರ್ ಪೂರ್ವ ನಿಗದಿಯಂತೆ ಜೂನ್ ೧೪ ರಂದು ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟು ಭೂಮಿಗೆ ಮರಳುವುದು ಸಾಧ್ಯವಾಗಲಿಲ್ಲ.

ಹೀಗಾಗಿ ಸುನಿತಾ ಮತ್ತು ವಿಲ್ಮೋರ್ ಭೂಮಿಗೆ ಸುರಕ್ಷಿತವಾಗಿ ಮರಳುವ ದಿನದ ಕುರಿತು ಅನಿಶ್ಚಿತತೆ ಮುಂದುವರಿದಿತ್ತು. ೨೦೦೩ರ ಫೆಬ್ರವರಿ ೧ ರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆ ಪತನಗೊಂಡು ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ದುರಂತ ಅಂತ್ಯಕAಡ ಕಹಿನೆನಪು ಕಾಡತೊಡಗಿತ್ತು. ಇದೀಗ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳುವ ಸಮಯ.

ಅವರು ಸುರಕ್ಷಿತವಾಗಿ ಭುವಿಗಿಳಿದು ಆದಷ್ಟು ಶೀಘ್ರವಾಗಿ ಭೂಮಿಯಲ್ಲಿನ ವಾಸ್ತವ್ಯಕ್ಕೆ ಒಗ್ಗಿಕೊಳ್ಳಲಿ. ಬಾಹ್ಯಾಕಾಶದಲ್ಲಿನ ಸನ್ನಿವೇಶಗಳಿಂದ ಮರಳಿ ಧರೆಯ ಸನ್ನಿವೇಶಕ್ಕೆ ಆಗಮಿಸುವಾಗ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಲಿ.

- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ

ಮಡಿಕೇರಿ. ಮೊ. ೯೮೪೫೪೯೯೧೧೨