ಸೋಮವಾರಪೇಟೆ, ಮಾ. ೧೭: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾ ಮಂಡಳಿ (ಟಿ.ಯು.ಸಿ.ಸಿ.)ಯ ೨೦೨೪-೨೫ನೇ ಸಾಲಿನ ವಾರ್ಷಿಕ ಸಮಾರಂಭ ಸ್ಥಳೀಯ ಸ್ತಿçà ಶಕ್ತಿ ಭವನದಲ್ಲಿ ಸಂಘಟನೆ ಅಧ್ಯಕ್ಷೆ ಧನಲಕ್ಷಿö್ಮà ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳ ಅಂಗನವಾಡಿಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವೆಯನ್ನು ಎಲ್ಲರೂ ಗೌರವಿಸಬೇಕೆಂದರು.

ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ ಮಾತನಾಡಿ, ಬೆಳಗ್ಗಿನಿಂದ ಸಂಜೆಯ ತನಕ ಚಿಕ್ಕ ಮಕ್ಕಳನ್ನು ನೋಡಿಕೊಳ್ಳು ವುದರೊಂದಿಗೆ, ಮಾತೃವಂದನ, ಭಾಗ್ಯಲಕ್ಷಿö್ಮ, ಬಿ.ಎಲ್.ಓ ಕೆಲಸಗಳಲ್ಲಿ ಕಾರ್ಯಕರ್ತೆಯರು ಸಕ್ರಿಯರಾ ಗಿದ್ದಾರೆ. ಅವರ ಭಾಗದ ಗರ್ಭಿಣಿ ಮಹಿಳೆಯರ ಆರೋಗ್ಯ ಮತ್ತು ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ಸೇರಿದಂತೆ ಬಿಡುವಿಲ್ಲದ ಕೆಲಸ ಮಾಡುತ್ತಾರೆ. ಇವರ ಸೇವೆ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷೆ ಪವಿತ್ರ, ಕ್ಷೇಮ ನಿಧಿ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷೆ ಜಯ, ಪ್ರಧಾನ ಕಾರ್ಯದರ್ಶಿ ತಾರಾ ಲೋಬೊ, ಖಜಾಂಜಿ ಗೀತಾ, ಜಗದಾಂಬ ಇದ್ದರು.

ಇದೇ ಸಂದರ್ಭ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯೆ ಶೀಲಾ ಡಿಸೋಜ, ಅಂಗನವಾಡಿ ಕಾರ್ಯಕರ್ತೆಯರಾದ ಪಲಿತಾ, ಲೀಲಾ, ಮೀನಾಕ್ಷಿ, ಚಂದ್ರಿಕಾ, ಜಯಲಲಿತ, ಸುಮಾಮಣಿ, ಭಾನುಮತಿ ಹಾಗೂ ಸಹಾಯಕಿಯರಾದ ರೇಣುಕಾ, ಯಾಸ್ಮಿನ್, ಮೋಹಿನಿ, ಜಯ ಪಳನಿ, ಸರಸ್ವತಿ, ಶಾಂತ, ಲೀಲಾವತಿ ಅವರುಗಳನ್ನು ಸನ್ಮಾನಿಸಲಾಯಿತು.