ಮಡಿಕೇರಿ, ಮಾ. ೧೮: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಗೃಹಿಣಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಐಶ್ವರ್ಯ ಎಂಬವರು ನಾಪತ್ತೆ ಯಾಗಿರುವ ಕುರಿತು ಅವರ ಪತಿ ಬಿ. ರಾಮು ದೂರು ದಾಖಲಿಸಿದ್ದಾರೆ. ತಾ. ೧೪ ರಂದು ಗಂಡ ಹಾಗೂ ೨ ವರ್ಷ ಪ್ರಾಯದ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಂಡುಬAದಲ್ಲಿ ೦೮೨೭೬- ೨೭೮೪೩೩ ಸಂಖ್ಯೆಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.