ಮಡಿಕೇರಿ, ಮಾ. ೧೭: ಒಂದು ಲಕ್ಷ ಜನಸಂಖ್ಯೆಗಿAತ ಕಡಿಮೆ ಇರುವ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಎಲ್ಲಾ ಮನೆಗಳಿಗೆ ನೀರು ಸರಬರಾಜು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಮೃತ್ ೨.೦ ಯೋಜನೆಯನ್ನು ಜಾರಿಗೆ ತಂದಿದೆ.
ನಗರ ಹಾಗೂ ಪಟ್ಟಣದ ಎಲ್ಲಾ ಮನೆಗಳಿಗೆ ಪೈಪ್ ಮುಖಾಂತರ ನೀರು ಪೂರೈಕೆಯೊಂದಿಗೆ ಕ್ರಿಯಾತ್ಮಕ ಗೃಹ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ, ಇದಕ್ಕೆ ಕೇಂದ್ರ ಸರ್ಕಾರ ಶೇ.೫೦, ರಾಜ್ಯ ಸರ್ಕಾರ ಶೇ.೪೦ ಹಾಗೂ ಸ್ಥಳೀಯ ಸಂಸ್ಥೆ ಶೇ.೧೦ರಷ್ಟು ಅನುದಾನವನ್ನು ಒದಗಿಸುತ್ತದೆ. ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಜಾರಿಗೆ ಬಂದಿರುವ ಈ ಅಮೃತ ಯೋಜನೆಯ ಕಾಮಗಾರಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಕುಂಡಾಮೇಸ್ತಿç ಹಾಗೂ ಕೂಟು ಹೊಳೆ ಜಲಮೂಲಗಳಿಂದ ಮಡಿಕೇರಿ ನಗರ ವ್ಯಾಪ್ತಿಗೆ ನೀರು ಸರಬರಾಜಾಗುತ್ತಿದ್ದು, ಈ ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮಡಿಕೇರಿಯಲ್ಲಿ ಪೈಪ್ಗಳನ್ನು ಬದಲಿಸುವ ಕಾರ್ಯ ನಡೆಯುತ್ತಿದೆ. ಕುಂಡಾಮೇಸ್ತಿç ಹಾಗೂ ಕೂಟುಹೊಳೆ ಮೂಲಗಳಿಂದ ನಗರಕ್ಕೆ ನೀರು ಸರಬರಾಜಾಗುವ ಪೈಪ್ಲೈನ್ಗಳು ಹಳೆಯದಾಗಿದ್ದು, ಜನತೆಗೆ ಅಗತ್ಯ ನೀರು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿಲ್ಲ.
(ಮೊದಲ ಪುಟದಿಂದ) ಆದ್ದರಿಂದ ಅಮೃತ್ ಟೂ ಪಾಯಿಂಟ್ ಝೀರೋ ಯೋಜನೆ ಅಡಿ ೪೭.೪೧ ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಕಾಮಗಾರಿಗಾಗಿಯೇ ರಸ್ತೆಗಳನ್ನು ಅಗೆಯುವ ಕಾರ್ಯ ನಡೆಯುತ್ತಿದೆ.
ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ ೧೩೫ ಲೀಟರ್ ನೀರನ್ನು ಒದಗಿಸಬೇಕೆಂಬ ನಿಯಮವಿದೆ. ಅಲ್ಲದೆ ಮನೆಗಳಲ್ಲಿ ನೆಲ ಅಂತಸ್ತಿನಲ್ಲಿದ್ದ ನೀರಿನ ಸಂಪರ್ಕಗಳು ಮೇಲಂತಸ್ತಿನವರೆಗೂ ವಿಸ್ತರಿಸಲ್ಪಟ್ಟಿದೆ. ಪ್ರಸ್ತುತ ಮಡಿಕೇರಿ ನಗರಕ್ಕೆ ನೀರು ಸರಬರಾಜು ಆಗುವ ಪೈಪ್ಗಳು ಕೇವಲ ಆರು ಮೀಟರ್ ನಷ್ಟು ಒತ್ತಡವನ್ನು ಮಾತ್ರ ಸಹಿಸುವ ಸಾಮರ್ಥ್ಯ ಹೊಂದಿವೆ. ಆದರೆ ನಿಯಮದ ಪ್ರಕಾರ ೧೨ ಮೀಟರ್ ಒತ್ತಡದಷ್ಟು ನೀರನ್ನು ಒದಗಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಹಳೆಯ ಪೈಪ್ಗಳನ್ನು ಬದಲಿಸಿ ಹೆಚ್ಡಿಪಿಇ ಪೈಪ್ಗಳನ್ನು ಅಳವಡಿಸಲಾಗುತ್ತದೆ. ಈಗ ಇರುವ ಪಿವಿಸಿ ಹಾಗೂ ಸಿಐ ಪೈಪ್ಗಳು ೬ ಮೀಟರ್ ಉದ್ದವಿದ್ದು, ನೂತನವಾಗಿ ಅಳವಡಿಸಲಾಗುತ್ತಿರುವ ಒಂದೊAದು ಹೆಚ್ಡಿಪಿಇ ಪೈಪ್ಗಳು ೨೦೦ ಮೀಟರ್ ಉದ್ದವಿರುತ್ತದೆ. ಈ ಪೈಪ್ ಅನ್ನು ಅಳವಡಿಸಿದ ಬಳಿಕ ನೀರಿನ ರಭಸ ಹೆಚ್ಚಾಗಲಿದೆ.
೧೨೫ ಕಿ.ಮೀ ಸಂಪರ್ಕ
ಅಮೃತ್ ಯೋಜನೆಯಡಿಯಲ್ಲಿ ನೂತನ ಪೈಪ್ಗಳ ಅಳವಡಿಕೆ ಕಾರ್ಯ ಮಡಿಕೇರಿ ನಗರದ ೧೨೫ ಕಿ.ಮೀ ನಷ್ಟು ವಿಸ್ತೀರ್ಣದಲ್ಲಿ ನಡೆಯಲಿದ್ದು ೭೭೦೦ ಸಂಪರ್ಕಗಳನ್ನು ನೀಡಲಾಗುತ್ತದೆ. ರಾಜ್ಯದ ೧೮೩ ನಗರಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಮಡಿಕೇರಿ ನಗರವು ಸೇರಿದೆ. ಈ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ೧೮ ತಿಂಗಳ ಅವಧಿಯನ್ನು ಮೀಸಲಿಡಲಾಗಿದ್ದು ಬೆಂಗಳೂರಿನ ಕೆವಿಆರ್ ಕನ್ಸ÷್ಟçಕ್ಷನ್ಸ್ ಹೈಟ್ಸ್ ಪ್ರೆöÊವೇಟ್ ಲಿಮಿಟೆಡ್ ಎಂಬ ಸಂಸ್ಥೆಗೆ ರೂ. ೪೭.೬೬ ಕೋಟಿಯ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಮುಗಿದ ಬಳಿಕ ೫ ವರ್ಷಗಳ ಕಾಲ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಇದೆ ಸಂಸ್ಥೆ ನಿಭಾಯಿಸಲಿದೆ.
ಗುಣಮಟ್ಟ ಪರಿಶೀಲಿಸಿ ಜಾರಿ
ಈ ಯೋಜನೆಯಲ್ಲಿ ಈಗಾಗಲೇ ಮಂಗಳಾದೇವಿ ನಗರ, ಭಗವತಿ ನಗರ, ವಿದ್ಯಾನಗರ, ಕನ್ನಂಡಬಾಣೆ, ಚಾಮುಂಡೇಶ್ವರಿ ನಗರ, ಕಾವೇರಿ ಲೇಔಟ್, ಟೀ ಜಾನ್ ಲೇಔಟ್ಗಳಲ್ಲಿ ಪೈಪ್ ಅಳವಡಿಕೆ ನಡೆದಿದೆ. ಉಳಿದೆಡೆಗಳಲ್ಲಿಯೂ ಕಾಮಗಾರಿ ನಡೆಯಲಿದೆ. ಪೈಪ್ ಅಳವಡಿಕೆ ಬಳಿಕ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಅದು ಹೇಗೆಂದರೆ ವೆಲ್ಡಿಂಗ್ ಮೂಲಕ ಜೋಡಿಸಲಾದ ಪೈಪ್ಗಳಲ್ಲಿ ನೀರು ಹರಿಯಬಿಟ್ಟಾಗ ಪೈಪ್ರೇಟಿಂಗ್ ಕನಿಷ್ಠ ೧೨ ಕೆಜಿ ಯಿಂದ ೧೬ ಕೆಜಿ ವರೆಗೆ ಕಂಡು ಬರಬೇಕು. ನೀರನ್ನು ಬಿಟ್ಟು ಸುಮಾರು ೩ ಗಂಟೆ ಕಾಲ ನಿಗದಿಪಡಿಸಲಾದ ಪೈಪ್ ರೇಟಿಂಗ್ ತೋರಿಸಬೇಕಲ್ಲದೆ ನೀರಿನ ರಭಸ ಕಡಿಮೆಯಾಗಬಾರದು. ಕಡಿಮೆಯಾಗಲಿಲ್ಲವೆಂದರೆ ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಮಂಡಳಿ ದೃಢಪಡಿಸುತ್ತದೆ. ಈ ಪರೀಕ್ಷೆ ಕೈಗೊಳ್ಳುವ ವೇಳೆ ಸ್ಥಳೀಯ ಕೌನ್ಸಿಲರ್ಗಳಿಗೂ ಮಂಡಳಿ ಮಾಹಿತಿ ನೀಡಿ ಅವರ ಸಮ್ಮುಖದಲ್ಲೇ ಪ್ರಕ್ರಿಯೆ ಕೈಗೊಳ್ಳಲಿದೆ ಗುಣಮಟ್ಟ ದೃಢಪಟ್ಟ ಬಳಿಕ ನೀರಿನ ಸಂಪರ್ಕ ನೀಡಲಾಗುತ್ತದೆ.
ಸಾರ್ವಜನಿಕರ ಸಹಕಾರ ಅಗತ್ಯ
ಅಮೃತ್ ಯೋಜನೆಯು ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಯೋಜನೆಯಾಗಿದೆ ಮಡಿಕೇರಿಗೆ ಪ್ರಥಮ ಹಂತದ ನೀರು ಸರಬರಾಜು ಯೋಜನೆಗೆ ಕೂಟುಹೊಳೆಯನ್ನು ಮೂಲವಾಗಿರಿಸಿಕೊಂಡು ೧೯೬೬ರಲ್ಲಿ ಕಾರ್ಯಗತಗೊಳಿಸಲಾಗಿತ್ತು. ೨೦೦೩ರಲ್ಲಿ ಕೂಟುಹೊಳೆ ಯೋಜನೆಯನ್ನು ಚಾಲನೆಗೊಳಿಸಲಾಯಿತು. ಕೆಲ ವರ್ಷಗಳ ಹಿಂದೆ ಕೂಟು ಹೊಳೆಯೊಂದಿಗೆ ಕುಂಡಾಮೇಸ್ತಿç ಯೋಜನೆಯು ಸೇರ್ಪಡೆಗೊಂಡಿತು. ಈ ಎರಡು ಯೋಜನೆಗಳ ಮೂಲಕ ಮಡಿಕೇರಿಗೆ ಪ್ರಸ್ತುತ ನೀರು ಸರಬರಾಜಾಗುತ್ತಿದೆ. ಇದಕ್ಕಾಗಿ ಸ್ಟೋನ್ ಹಿಲ್, ಸುದರ್ಶನ್ ವೃತ್ತ, ಉಕ್ಕುಡದಲ್ಲಿ ಜಲ ಸಂಗ್ರಹಗಾರಗಳು ಇವೆ. ಈ ನಡುವೆ ನೀರಿನ ಸರಬರಾಜನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಅಮೃತ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ; ಜನರ ಅನುಕೂಲಕ್ಕಾಗಿ ಕಾಮಗಾರಿ ಕೈಗೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎ. ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.