ವೀರಾಜಪೇಟೆ, ಮಾ. ೧೬: ವೀರಾಜಪೇಟೆಯ ಸರ್ಕಾರಿ ಪ್ರಥಮದರ್ಜೆಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಎಸ್.ಸಿ, ಎಸ್.ಟಿ ಸಮಿತಿಯ ವತಿಯಿಂದ ನಮ್ಮ ನಡಿಗೆ ಸಮು ದಾಯದಕಡೆಗೆ ಶೀರ್ಷಿಸಿಕೆಯಡಿಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿಯ ಮರಪಾಲ ಹಾಡಿಯಲ್ಲಿ ಹಾಡಿಜನರಿಗಾಗಿ ವಿಶೇಷ ಉಪನ್ಯಾಸ, ಹಾಡಿ ಬೇಟಿ ಮತ್ತು ಜಾಗೃತಿ ಅರಿವು ಕಾರ್ಯಕ್ರಮವನ್ನು ಮರಪಾಲ ಅಂಗನವಾಡಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾದ ಶ್ರೀರಾಮು ಪಿ.ಸಿ. ರವರು ಉದ್ಘಾಟಿಸಿ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಇಂದಿನ ವಿದ್ಯಾರ್ಥಿಗಳಿಗೆ ಹಾಡಿಯಅರಿವು ಹಾಗೂ ಹಾಡಿಯ ಜನರಲ್ಲಿ ಜಾಗೃತಿಯನ್ನು ಮೂಡಿಸಲುಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.

ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಘುರಾಜ್ ಆರ್. ರವರು ಸಮುದಾಯದ ಶ್ರೇಯೋಭಿವೃದ್ಧಯಿಲ್ಲಿ ಶಿಕ್ಷಣದ ಪಾತ್ರ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಹಾಡಿಯ ಜನರು ಒಳ್ಳೆಯ ಶಿಕ್ಷಣ ಪಡೆಯಬೇಕು. ಆಗ ನಿಮ್ಮಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದÀರು.

ಕಾಲೇಜಿನ ಪ್ರಾಂಶುಪಾಲರಾದ ಡಾ ದಯಾನಂದ. ಕೆ.ಸಿ ಅಧ್ಯಕ್ಷತೆಯನ್ನು ವಹಿಸಿ ಹಾಡಿಯ ಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಅರಿವು ಬಹಳ ಮುಖ್ಯ. ವಿದ್ಯಾರ್ಥಿಗಳಿಂದ ಪ್ರತಿ ಆರು ತಿಂಗಳಿಗೊಮ್ಮೆ ಹಾಡಿಯ ಜನರ ನೋವು ನಲಿವುಗಳನ್ನು ಅಧ್ಯಯನ ಮಾಡಲು ಹಾಗೂ ಕಾಲೇಜನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ವೃಂದದವರ ಮೂಲಕ ಹಾಡಿಯ ಅಭಿವೃದ್ಧಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದರು. ನಂತರ ವಿದ್ಯಾರ್ಥಿಗಳಿಂದ ಜಾಗೃತಿ ಅರಿವು ಮೂಡಿಸಲು ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ಮರಪಾಲ ಹಾಡಿಯ ಅಧ್ಯಕ್ಷರಾದ ರಾಜು, ಮರಪಾಲ ಹಾಡಿಯ ಹಿರಿಯರಾದ ಸುಬ್ಬು, ಕಾಲೇಜಿನಎಸ್.ಸಿ, ಎಸ್.ಟಿ ಸಮಿತಿಯ ಸಂಚಾಲಕಿ ಕು. ಧನ್ಯ.ಕೆ.ಜಿ, ನಿರ್ವಹಣಾಶಾಸ್ತç ವಿಭಾಗದ ಉಪನ್ಯಾಸಕಿ ಸುಮಯ್ಯತಬಾಸಂ, ಮರಪಾಲ ಅಂಗನವಾಡಿ ಶಿಕ್ಷಕಿ ಮಲ್ಲಿಗೆ ಮರಪಾಲ ಹಾಡಿಯ ಹಲವಾರು ಪುರುಷರು, ಮಹಿಳೆಯರು, ಮಕ್ಕಳು ಹಾಜರಿದ್ದರು. ದ್ವೀತಿಯ ಬಿ.ಎ ವಿದ್ಯಾರ್ಥಿನಿ ಕೀರ್ತನ ಸ್ವಾಗತಿಸಿ, ಅರ್ಚನ ವಂದಿಸಿ, ಕೀರ್ತನ ನಿರೂಪಿಸಿದರು.