ಚೆಯ್ಯಂಡಾಣೆ, ಮಾ. ೧೬: ಸ್ಥಳೀಯ ಕಡಿಯತ್‌ನಾಡ್‌ಗೆ ಒಳಪಟ್ಟ ಕರಡ ಪಾಲಂಗಾಲ ಗ್ರಾಮದ ಬೆಟ್ಟಸಾಲುಗಳ ನಡುವೆ ಇರುವ ಶಕ್ತಿ ದೇವರೆಂದೇ ಹೆಸರುವಾಸಿಯಾಗಿರುವ ಮಲೆತಿರಿಕೆ ದೇವಾಲಯದ ಶ್ರೀಮಲೆ ತಂಬ್ರಾನ್ ಈಶ್ವರ ದೇವರಸ್ಥಾನದಲ್ಲಿ ವಾರ್ಷಿಕ ಉತ್ಸವ ಶ್ರದ್ದಾ ಭಕ್ತಿಯಿಂದ ಜರುಗಿತು.

ತಾ.೧೨ ರಿಂದ ಆರಂಭಗೊAಡ ಉತ್ಸವ ಬನಕ್ಕೆ ಹೋಗುವುದು ತಾ.೧೩ ರಂದು ನೆಟ್ಟಿಪಾಯಿ ಚಪ್ಪರ ನಡೆದು ತಾ.೧೪ರ ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ಪಟ್ರಪಂಡ ಕುಟುಂಬದಿAದ ಜೋಡೆತ್ತಿನ ಎತ್ತುಪೋರಾಟದೊಂದಿಗೆ ದೇವನೆಲೆಗೆ ಅಕ್ಕಿ ಸುರಿದು ನಂತರ ಗ್ರಾಮದ ಹಲವೆಡೆಯಿಂದ ಎತ್ತ್ ಪೋರಾಟದೊಂದಿಗೆ ಬಂದ ಭಕ್ತಾದಿಗಳಿಂದ ಅಕ್ಕಿ ಒಪ್ಪಿಸಲಾಯಿತು. ಬೆಳಿಗ್ಗೆ ಕರಡದ ಭಗವತಿ ದೇವಾಲಯದಿಂದ ದೇವಭಂಡಾರವನ್ನು ಸಾಂಪ್ರದಾಯಿಕ ಉಡುಗೆಯೊಂದಿಗೆ ದುಡಿಕೊಟ್ಟ್ ಪಾಟ್ ಮೇದಪರೆಯೊಂದಿಗೆ ದೇವನೆಲೆಗೆ ಬಂದು ಒಪ್ಪಿಸಿ ಕಡತಲೆ ಆಭರಣವನ್ನು ದೇವರಿಗೆ ಅರ್ಪಿಸಲಾಯಿತು. ಪಾಂಡವರು ವನವಾಸದಲ್ಲಿದ್ದಾಗ ದೇವಾಲಯದ ಸಮೀಪ ಅಡುಗೆ ಮಾಡಿ ಭೋಜನ ಮಾಡಿದ್ದ ಪ್ರತೀಕವಾಗಿ ಗ್ರಾಮಸ್ಥರು ಹೊಸದಾಗಿ ಖರೀದಿಸಿದ ಕುಯ್ಯಮಡಕೆಯಿಂದ ಬೆಳಗ್ಗಿನ ಜಾವ ತೆರಿಗೆಯವರು ಹೊಸ ಮಡಕೆಯಲ್ಲಿ ದೇವಾಲಯದ ಸಮೀಪ ಪೊಯ್ಯಕ್ಕಿಕೂಳ್ (ಅನ್ನ), ಚಕ್ಕೆಪಾರ (ಹಲಸಿನ ಹಣ್ಣಿನ ಉಪ್ಪಿನ ಕಾಯಿ), ಚಪ್ಪೆಪುಟ್ಟ್ ಭಕ್ತಾದಿಗಳಿಗೆ ನೀಡಲಾಯಿತು. ಮಧ್ಯಾಹ್ನ ದೇವರಿಗೆ ವಿಶೇಷವಾಗಿ ಅಲಂಕರಿಸಿ ಮಹಾಪೂಜೆ ನೆರವೇರಿತು. ನಂತರ ಪಾಯಸ ಪ್ರಸಾದದ ವಿನಿಯೋಗದ ಮೂಲಕ ಉತ್ಸವ ಸಂಪನ್ನಗೊAಡಿತು.