ಮಡಿಕೇರಿ, ಮಾ. ೧೬: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿ, ಇಲ್ಲಿ ಪ್ರಥಮ ಬಾರಿಗೆ ೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದ ಅಂಗವಾಗಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾಯಕಲ್ಪ ಕಾರ್ಯಕ್ರಮವು ರಾಜ್ಯ ಮಟ್ಟದ ಎಲ್ಲಾ ಆಸ್ಪತ್ರೆಯ ಉತ್ತಮ ಸೇವೆ, ರೋಗಿಗಳ ಸುರಕ್ಷತೆ, ಸೋಂಕು ನಿಯಂತ್ರಣ, ಆಸ್ಪತ್ರೆಯ ಸ್ವಚ್ಛತೆ, ನೈರ್ಮಲ್ಯ ಸುಧಾರಣೆ ಈ ಎಲ್ಲಾ ಮುಖ್ಯ ಉದ್ದೇಶಗಳನ್ನು ಈಡೇರಿಸಲು ೨೦೧೫ ರಿಂದ ಪ್ರಾರಂಭಗೊAಡಿರುತ್ತದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯಲ್ಲಿನ ಅಧಿಕಾರಿ ಸಿಬ್ಬಂದಿ ವರ್ಗದವರೆಲ್ಲರೂ, ಸತತವಾಗಿ ಶ್ರಮಿಸಿ ೨೦೨೨-೨೩ನೇ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಮೌಲ್ಯಮಾಪನದಲ್ಲಿ, ಪ್ರಶಂಶನ ಪ್ರಶಸ್ತಿಗೆ ಅರ್ಹತೆಯನ್ನು ಪಡೆದು ಮೂರು ಲಕ್ಷ ಪುರಸ್ಕಾರಕ್ಕೆ ಪಾತ್ರರಾಗಿರುತ್ತಾರೆ.
ರೋಗಿಗಳ ಸೇವೆಯಲ್ಲಿ, ಆಸ್ಪತ್ರೆಯ ಎಲ್ಲಾ ಉಚಿತ ಸೌಲಭ್ಯಗಳನ್ನು ಸರ್ಕಾರದ ಮಾನದಂಡದAತೆ ಇನ್ನೂ ಹೆಚ್ಚು ಪ್ರೇರಣೆಗೊಂಡು, ಪ್ರತಿ ವರ್ಷವೂ ಇದೇ ರೀತಿ ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಹತೆ ಪಡೆಯಲು ನಾವೆಲ್ಲರೂ ಬದ್ಧರಾಗಬೇಕು ಎಂದು ಕಾಯಕಲ್ಪ ನೋಡಲ್ ಅಧಿಕಾರಿಗಳಾದ ಡಾ.ಪುರುಷೋತ್ತಮ್ ಡಿ.ಆರ್. ರವರು ಪ್ರಾಸ್ತವಿಕ ಭಾಷಣದಲ್ಲಿ ಉಲ್ಲೇಖಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರು ಆದ ಡಾ. ಲೋಕೇಶ್ ಎಜೆ ಅವರು ಸಂಸ್ಥೆಯ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸುತ್ತಾ, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯು ಇನ್ನೂ ಹೆಚ್ಚಿನ ಗುಣಮಟ್ಟ ಖಾತ್ರಿ ಸೇವೆಗಳನ್ನು ಒದಗಿಸುತ್ತಾ, ರಾಜ್ಯದಲ್ಲೇ ಪ್ರಥಮ ಬಹುಮಾನ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಕೆ.ಎಂ. ಆಸ್ಪತ್ರೆ ಗುಣಮಟ್ಟ ಕಾಪಾಡುವಲ್ಲಿ ತಮ್ಮ ಸಹಕಾರ ಹಾಗೂ ಮಾರ್ಗದರ್ಶನ ನಿರಂತರವಾಗಿ ಇರುತ್ತದೆ ಎಂದು ಹೇಳಿ ಅಭಿನಂದಿಸಿದರು.
ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ. ನಂಜುAಡಯ್ಯ ಪ್ರಶಸ್ತಿಗೆ ಶ್ರಮಿಸಿದ ಸಿಬ್ಬಂದಿಗಳಿಗೆ ಅಭಿನಂದಿಸಿದರು. ಜಿಲ್ಲಾ ಗುಣಮಟ್ಟ ಖಾತ್ರಿ ಘಟಕದ ನೋಡಲ್ ಅಧಿಕಾರಿಯಾದ ಡಾ. ಆನಂದ್ ಎನ್ ಅವರು, ಕಾಯಕಲ್ಪ ಕಾರ್ಯಕ್ರಮದ ಮಾನದಂಡಗಳು, ರೂಪರೇಷೆಗಳು, ಇತ್ತೀಚಿನ ಬದಲಾವಣೆಗಳ ಬಗ್ಗೆ ಸಂಕ್ಷಿಪ್ತವಾಗಿ ಸಭೆಗೆ ತಿಳಿಸಿದರು.
ವೈದ್ಯಕೀಯ ಅಧೀಕ್ಷಕರಾದ ಡಾ. ಸೋಮಶೇಖರ್ ಹೆಚ್ ಕೆ ರವರು, ಅಧ್ಯಕ್ಷತೆಯ ಭಾಷಣದಲ್ಲಿ ಆಸ್ಪತ್ರೆಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶುಶ್ರೂಷಕ ಅಧೀಕ್ಷಕರಾದ ವೀಣಾ ವಿ.ಎಂ. ಅವರು ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡಲು ವಿಶೇಷ ಪಾತ್ರವನ್ನು ವಹಿಸುತ್ತಿರುವ ಗ್ರೂಪ್ ಡಿ ಸಿಬ್ಬಂದಿಗಳು, ಸಫಾಯಿ ಕರ್ಮಚಾರಿಗಳು, ಭದ್ರತಾ ಸಿಬ್ಬಂದಿಗಳು ಹಾಗೂ ವಾಹನ ಚಾಲಕರು ಇವರನ್ನು ವಿಶೇಷವಾಗಿ ಅಭಿನಂದಿಸಿದರು.
ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಸತೀಶ್ ವಿ.ಎಸ್. ರವರು ಕಾಯಕಲ್ಪದ ಐತಿಹಾಸಿಕ ಉದ್ದೇಶ ಮತ್ತು ಇಂದಿನ ಆಸ್ಪತ್ರೆಗಳಲ್ಲಿನ ಅನುಷ್ಠಾನದ ಬಗ್ಗೆ ವಿಶ್ಲೇಷಿಸಿ ಅಭಿನಂದಿಸಿದರು. ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿಗಳಾದ ರೋಹಿಣಿ ಕೆ ಎಂ ಅವರು ಸಂಸ್ಥೆಯ ಆಡಳಿತಾತ್ಮಕ ಮತ್ತು ಹಣಕಾಸು ಸಹಕಾರವನ್ನು ಮುಂದಿನ ಎಲ್ಲಾ ಗುಣಮಟ್ಟ ಖಾತ್ರಿ ಕಾರ್ಯಕ್ರಮಗಳಿಗೆ ನೀಡುವುದಾಗಿ ತಿಳಿಸಿ ಅಭಿನಂದಿಸಿದರು.
ಸಭೆಗೆ ವಿವಿಧ ವಿಭಾಗದ ಮುಖ್ಯಸ್ಥರುಗಳಾದ ಡಾ ಶ್ವೇತಾ, ಡಾ, ಕೃಪಾಲಿನಿ, ಪ್ರಾಧ್ಯಾಪಕರಾದ ಡಾ. ಮೋಹನ್ ಅಪ್ಪಾಜಿ, ಸಹ ಪ್ರಾಧ್ಯಾಪಕರಾದ ಡಾ. ಪ್ರಿಯದರ್ಶಿನಿ, ಎನ್ ಕ್ಯೂ ಎ ಎಸ್ ನೋಡಲ್ ಅಧಿಕಾರಿಗಳಾದ ಡಾ. ಶ್ಯಾಮಲಾ ಹಾಗೂ ಇತರೆ ಬೋಧಕ ಸಿಬ್ಬಂಧಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಯ ಜಿಲ್ಲಾ ಗುಣಮಟ್ಟ ಖಾತ್ರಿ ಘಟಕದ ಸಿಬ್ಬಂಧಿಗಳು, ಆಸ್ಪತ್ರೆಯ ಗುಣಮಟ್ಟ ಖಾತ್ರಿ ವ್ಯವಸ್ಥಾಪಕ ಮದನ್ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಶ್ರಮಿಸಿದ ಆಸ್ಪತ್ರೆಯ ಐವತ್ತೆöÊದು ಸಿಬ್ಬಂದಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾಯಕಲ್ಪ ನೋಡಲ್ ಅಧಿಕಾರಿಯಾದ ಡಾ. ಪುರುಷೋತ್ತಮ್ ಡಿ.ಆರ್ ರವರು ವಂದನಾರ್ಪಣೆ ಮಾಡಿ ಸಮಾರಂಭವನ್ನು ಮುಕ್ತಾಯಗೊಳಿಸಿದರು. ಲೂಯಿಸ್ ಕಾರ್ಯಕ್ರಮದ ನಿರೂಪಿಸಿ, ಡಾ. ಕೇದಾರನಾಥ್ ಎನ್. ಎಸ್, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು ದಂತಚಿಕಿತ್ಸಾ ವಿಭಾಗ ಸ್ವಾಗತಿಸಿದರು.