ಮಕ್ಕಂದೂರು, ಮಾ. ೧೬: ಮಕ್ಕಂದೂರು ಕೊಡವ ಸಮಾಜ ಪೊಮ್ಮಕ್ಕಡ ಕೂಟ ಇದರ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಸಮಾಜದ ಕಟ್ಟಡದಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷರಾದ ಚೆನ್ನಪಂಡ ಗಂಗಮ್ಮ ನಾಣ್ಯಪ್ಪ ವಹಿಸಿದ್ದರು. ಮೊಣ್ಣಂಡ ಸಹನಾ ಹಾಗೂ ಹಂಚೆಟ್ಟಿರ ಸೌಮ್ಯ ಅವರು ಪ್ರಾರ್ಥಿಸಿದರು.

ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳೊಂದಿಗೆ ವಿವಿಧ ಮನೋರಂಜನಾ ಚಟುವಟಿಕೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಕೂಟದ ಉಪಾಧ್ಯಕ್ಷರಾದ ಪಡೇಟ್ಟಿರ ಶ್ವೇತಾ ಅಚ್ಚಯ್ಯ, ಸಹ ಕಾರ್ಯದರ್ಶಿ ಚೆನ್ನಪಂಡ ಅಂಬಿಕಾ ಉತ್ತಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ನಾಪಂಡ ಅರ್ಚನಾ ಕಾಳಪ್ಪ ಸ್ವಾಗತಿಸಿ, ಖಜಾಂಚಿ ಶಾಂತೆಯAಡ ನಮೃತಾ ವಿಕಾಸ್ ವಂದಿಸಿದರು.