ಕಣಿವೆ, ಮಾ. ೧೬: ಅರಣ್ಯ ಇಲಾಖೆಗೆ ಗಿಡ ನೆಟ್ಟು ಮರಗಳನ್ನು ಬೆಳೆಸಿ ಪೋಷಣೆ ಮಾಡುವುದರ ಜೊತೆಗೆ ವನ್ಯಪ್ರಾಣಿಗಳನ್ನು ರಕ್ಷಿಸುವ ಹಾಗೂ ಪೋಷಿಸುವ ಮಹತ್ವದ ಜವಾಬ್ದಾರಿಯೂ ಇದೆ.
ಅಮ್ಮನೊಂದಿಗೆ ನಡು ರಾತ್ರಿ ನೀರು ಕುಡಿಯಲು ಬಂದ ಆನೆ ಮರಿಯೊಂದನ್ನು ರಕ್ಷಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಜೋಪಾನ ಮಾಡುತ್ತಾ ಪೋಷಿಸು ತ್ತಿರುವ ಚಿತ್ರಣ ಕುಶಾಲನಗರ ತಾಲೂಕಿನ ಅರಣ್ಯ ತೀರವೊಂದರಲ್ಲಿ ಕಂಡುಬAದಿದೆ.
ಸರಿಸುಮಾರು ಒಂದು ತಿಂಗಳ ಪ್ರಾಯದಲ್ಲಿರುವಾಗ ಅಮ್ಮನೊಂದಿಗೆ ತೆವಳುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಈ ಆನೆಮರಿ ಚಿಕ್ಲಿಹೊಳೆ ನಾಲೆಯಲ್ಲಿ ಕುಶಾಲನಗರ ಅರಣ್ಯ ಸಿಬ್ಬಂದಿಗಳಿಗೆ ಸಿಕ್ಕಿತ್ತು. ಬಳಿಕ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ಎರಡು ದಿನಗಳ ಕಾಲ ಆನೆಮರಿಯನ್ನು ಅದು ಸಿಕ್ಕಿದ ಪ್ರದೇಶದ ಅರಣ್ಯ ತೀರದಲ್ಲಿ ಬಿಟ್ಟು ಹೆತ್ತೊಡಲು ಕಂದನ ಹುಡುಕಾಟ ದಲ್ಲಿದ್ದರೆ ಬಂದು ಕರೆದೊಯ್ಯ ಬಹುದು ಎಂದು ಹಗಲು-ರಾತ್ರಿ ಸಿಬ್ಬಂದಿಗಳೊAದಿಗೆ ಕಾವಲು ಕಾದಿದ್ದರು. ಆದರೆ ಅದೇಕೋ ಏನೋ ತಾಯಿ ಆನೆ ಅತ್ತ ಸುಳಿಯಲೇ ಇಲ್ಲ. ಬಳಿಕ ಈ ಹಸುಳೆ ಯನ್ನು ಹಾಗೆಯೇ ಬಿಟ್ಟರೆ ಅದರ ಜೀವಕ್ಕೆ ಅಪಾಯ ಎಂದುಕೊAಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಾನವೀಯತೆ ದೃಷ್ಟಿ ಹರಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ದು ಓರ್ವ ಮಾವುತನನ್ನು ಈ ಹಸುಳೆಯ ಆರೈಕೆಗೆಂದೇ ನಿಯೋಜಿಸಿದರು. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈಗ ಈ ಕಂದನಿಗೆ ಮೂರು ತಿಂಗಳ ಪ್ರಾಯ.
ಈ ಹಸುಳೆಗೆ ಶಿಬಿರಕ್ಕೆ ಕರೆತಂದ ದಿ£ದಿಂದ ಇಂದಿನವರೆಗೂ ಕೇವಲ ಗೋಹಾಲು, ಆಡು ಹಾಲು, ಎಳನೀರು, ಗ್ಲೂಕೋಸ್ಗಳನ್ನು ನೀಡಲಾಗುತ್ತಿದೆ. ತಾಯಿ ಹಾಲಿನಿಂದ ವಂಚಿತವಾಗಿರುವ ಈ ಕಂದನಿಗೆ ದೊಡ್ಡ ಬಾಟಲಿಯಲ್ಲಿ ಹಾಲು ನೀಡಲಾಗುತ್ತಿದೆ. ಪ್ಲಾಸ್ಟಿಕ್ ತೊಟ್ಟನ್ನು ಅಳವಡಿಸಲಾದ ಬಾಟಲಿಗೆ ಹಾಲು ತುಂಬಿಸಿ ಈತನ ಮುಂದೆ ಹಿಡಿದರೆ ಸಾಕು ಓಡೋಡಿ ಬಂದು ಸಂತೃಪ್ತಿ ಯಾಗುವವರೆಗೂ ಹಾಲು ಚೀಪಿ ಕುಡಿಯುತ್ತಾನೆ. ದಿನಕ್ಕೆ ಐದಾರು ಬಾರಿ ಹಾಲನ್ನು ಈತನಿಗೆ ಫೀಡಿಂಗ್ ಮಾಡಲಾಗುತ್ತಿದೆ.
ಆಡಿನ ಹಾಲಿಗೆ ಪಟ್ಟು...!
ಸ್ವಾಭಾವಿಕವಾಗಿ ಬೆಳೆಯುವ ಸಸ್ಯಗಳ ಎಲೆಗಳನ್ನು ತಿನ್ನುವ ಆಡುಗಳ ಹಾಲು ಹೆಚ್ಚು ಪೌಷ್ಟಿಕಾಂಶ ಗಳಿಂದ ಕೂಡಿರುವುದಲ್ಲದೇ ಅಷ್ಟೇ ರುಚಿಯನ್ನು ಬೀರುವ ಕಾರಣ ಆಡಿನ ಹಾಲಿಗಾಗಿ ಹೆಚ್ಚು ಪಟ್ಟು ಹಿಡಿಯುತ್ತಾನೆ ಎನ್ನಲಾಗಿದೆ. ಹಾಗಾಗಿ ಮಳವಳ್ಳಿಯ ತನಕ ತೆರಳಿ ಇವನಿಗೋಸ್ಕರ ಆಡುಗಳ ಹಾಲನ್ನು ತಂದು ಕುಡಿಸಲಾಗುತ್ತಿದೆ. ಬಿಸಲ ಝಳ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಈತನನ್ನಿ ತಂಪನೆಯ ವಾತಾವರಣ ದಲ್ಲಿಟ್ಟು ಆರೈಕೆ ಮಾಡಲಾಗುತ್ತದೆ.
ಶಿಬಿರದ ೨೯ನೇ ಅತಿಥಿ
ದುಬಾರೆ ಸಾಕಾನೆ ಶಿಬಿರದಲ್ಲಿ ಇರುವ ೨೮ ಸಾಕಾನೆಗಳ ಪೈಕಿ ಈ ಗಂಡು ಹಸುಳೆ ೨೯ನೇ ಅತಿಥಿ ಯಾಗಿದ್ದಾನೆ. ಶಿಬಿರದಲ್ಲಿ ಈಗ ೨೬ ಮಂದಿ ಗಂಡು ಆನೆಗಳೇ ಇದ್ದು ಈತ ೨೭ನೇಯವನಾಗಿದ್ದಾನೆ.
ಅಜ್ಞಾತ ಸ್ಥಳದಲ್ಲಿ ಆರೈಕೆ
ಈ ಹಸುಳೆಯ ಆರೋಗ್ಯದ ಹಿತದೃಷ್ಟಿಯಿಂದ ಶಿಬಿರಕ್ಕೆ ನಿತ್ಯವೂ ಧಾವಿಸುವ ಪ್ರವಾಸಿಗರಿಂದ ಕಿರಿಕಿರಿಯಾಗಬಾರದೆಂದು ಈ ಹಸುಳೆಯನ್ನು ನಂಜರಾಯಪಟ್ಟಣ ವ್ಯಾಪ್ತಿಯ ಅಜ್ಞಾತ ಸ್ಥಳ ವೊಂದರಲ್ಲಿ ಮಾವುತ ರೊಬ್ಬರು ಆರೈಕೆ ಮಾಡುತ್ತಿದ್ದಾರೆ.
- ಕೆ.ಎಸ್. ಮೂರ್ತಿ