ವೀರಾಜಪೇಟೆ, ಮಾ. ೧೪: ಮಾಜಿ ಸೈನಿಕರ ಸಹಕಾರ ಸಂಘದ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾ ಕೇಂದ್ರಸ್ಥಾನವಾದ ಮಡಿಕೇರಿಯಲ್ಲಿ ಜಾಗ ನೀಡುವಂತೆ ಕಳೆದ ೨೦ ವರ್ಷಗಳಿಂದಲೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು ಇದುವರೆಗೆ ಯಾವುದೇ ಸರ್ಕಾರ ಸ್ಪಂದಿಸಿಲ್ಲ ಎಂದು ನಿವೃತ್ತÀ ಮೇಜರ್ ಜನರಲ್ ಬಾಚಮಂಡ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು.

ವೀರಾಜಪೇಟೆ ಮಾಜಿ ಸೈನಿಕರ ಸಂಘದ ಕಟ್ಟಡದ ಮೂರನೇ ಅಂತಸ್ತಿನ ಮಳಿಗೆ ಉದ್ಘಾಟನೆ ಹಾಗೂ ಲಿಫ್ಟ್ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸೈನಿಕರು ಕರ್ತವ್ಯದಲ್ಲಿ ದೇಶ ಕಾಯುವಾಗ ಎಷ್ಟೆಲ್ಲ ಕಷ್ಟಪಡಬೇಕಾಗಿದೆ. ನಂತರ ನಿವೃತ್ತರಾದ ಬಳಿಕ ನಿರ್ಲಕ್ಷಿಸುವುದು ಸರಿಯಲ್ಲ. ಸರ್ಕಾರದಿಂದ ಮಾಜಿ ಸೈನಿಕರಿಗೆ ಸಿಗುವಂತ ಎಲ್ಲಾ ಸೌಲಭ್ಯಗಳು ದೊರಕುವಂತಾಗಬೇಕು. ವೀರಾಜಪೇಟೆಗೆ ಕೇರಳರಾಜ್ಯ ಹತ್ತಿರ ಇರುವುದರಿಂದ ಕೇರಳದಿಂದ ಹಲವು ಮಾಜಿ ಸೈನಿಕರು ವೀರಾಜಪೇಟೆ ಕ್ಯಾಂಟಿನ್‌ನಲ್ಲಿ ಮದ್ಯವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ವೀರಾಜಪೇಟೆ ಈ ವ್ಯಾಪ್ತಿಯಲ್ಲಿರುವ ಕೆಲವರಿಗೆ ಮದ್ಯ ಸಿಗದಂತಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಉದ್ಯಮಿ ದುದ್ದಿಯಂಡ ಸೂಫಿ ಹಾಜಿ ಮಾತನಾಡಿ, ಮಾಜಿ ಸೈನಿಕರ ಸಂಘದಿAದ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಸಂಘದ ಏಳಿಗೆಗಾಗಿ ಮುಂದೆಯು ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುವಂತಾಗಿ ನಿಮ್ಮೊಂದಿಗೆ ಕೈಜೋಡಿಸುವುದಾಗಿ ಹೇಳಿದರು

ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕ್ಯಾಂಟೀನ್ ಸಾಮಗ್ರಿಗಳನ್ನು ಮೇಲಂತಸ್ಥಿಗೆ ಸಾಗಿಸಲು ಸಮಸ್ಯೆ ಉಂಟಾಗುತ್ತಿತ್ತು. ಸಂಘದ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಲಿಫ್ಟ್ ವ್ಯವಸ್ಥೆಗೆ ತೀರ್ಮಾನಿಸಿ, ಹಣದ ವ್ಯವಸ್ಥೆಗಾಗಿ ಸಂಘ ಸಂಸ್ಥೆಗಳು, ದಾನಿಗಳಿಂದ, ಸ್ಥಳೀಯ ಶಾಸಕರು, ನಾಗರಿಕರಿಂದ ಸಂಗ್ರಹಿಸಿ ರೂ. ೧೯ ಲಕ್ಷ ವೆಚ್ಚದಲ್ಲಿ ಲಿಫ್ಟ್ ಸೇವೆ ಒದಗಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಯಾಂಟೀನ್ ವ್ಯವಸ್ಥಾಪಕ ಕಾವೇರಪ್ಪ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೇರ ನಂದ, ಖಜಾಂಚಿ ತೊರೇರ ರಾಜ, ಪಟ್ರಪಂಡ ರಮೇಶ್ ಕರುಂಬಯ್ಯ, ಬಾಳೆಕುಟ್ಟಿರ ದಿನಿ ಬೋಪಯ್ಯ, ಕಬ್ಬಚ್ಚೀರ ಬೋಪಣ್ಣ ರತ್ನ, ಎಂ.ಕೆ. ಸಲಾಂ ಕಡಂಗ, ಅಣ್ಣಳಮಾಡ ಸುಬ್ಬಯ್ಯ, ಕ್ಯಾಂಟೀನ್ ವ್ಯವಸ್ಥಾಪಕ ಡಾಲಿ ಮತ್ತಿತರರು ಉಪಸ್ಥಿತರಿದ್ದರು.