ಕುಶಾಲನಗರ, ಮಾ ೧೫: ಕುಶಾಲನಗರದ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ವತಿಯಿಂದ ಕರ್ನಾಟಕ ರತ್ನ, ಯೂತ್ ಐಕಾನ್ ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಾ.೧೭ರ ಸೋಮವಾರ ರಕ್ತದಾನ ಶಿಬಿರ, ಮಧುಮೇಹ, ರಕ್ತದೊತ್ತಡ ತಪಾಸಣೆ ಮತ್ತು ಜಾಗೃತಿ ಶಿಬಿರ ಕುಶಾಲನಗರದ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ತಿಳಿಸಿದರು.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು.
ಲಯನ್ಸ್ ವಲಯ ರಾಯಭಾರಿ ಕೊಡಗನ ಹರ್ಷ ಮಾತನಾಡಿ ಸೋಮವಾರ ಬೆಳಿಗ್ಗೆ ೧೦ ರಿಂದ ೩ ಗಂಟೆವರೆಗೆ ರಕ್ತದಾನ ನಡೆಯಲಿದೆ ಎಂದರು.
ಲಯನ್ಸ್ ವಲಯ ಅಧ್ಯಕ್ಷ ಸುಮನ್ ಬಾಲಚಂದ್ರ ಮಾತನಾಡಿ, ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ೨೦೨೨ ರಿಂದ ಪ್ರತಿ ವರ್ಷ ಶಿಬಿರ ಏರ್ಪಡಿಸಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತಿನ್ ಗುಪ್ತ, ಖಜಾಂಚಿ ಎಂ.ಜಿ. ಕಿರಣ್, ಗೌಡ ಸಮಾಜ ಸಹ ಕಾರ್ಯದರ್ಶಿ ಡಾಟಿ ಶಾಂತಕುಮಾರಿ ಇದ್ದರು.