ಸೋಮವಾರಪೇಟೆ,ಮಾ. ೧೪ : ತಾಲೂಕು ಹೋಂಸ್ಟೇ ಅಸೋಸಿ ಯೇಷನ್ ವತಿಯಿಂದ ಹೊಸತೋಟ ಜಂಕ್ಷನ್ ಬಳಿ ಪ್ರವಾಸೋದ್ಯಮ ಸ್ಥಳಗಳ ಮಾಹಿತಿಯನ್ನು ಒಳಗೊಂಡ ಸೂಚನಾ ಫಲಕವನ್ನು ಅಳವಡಿ¸ Àಲಾಗಿದ್ದು, ಅಸೋಸಿ ಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸೂಚನಾ ಫಲಕವನ್ನು ಅಳವಡಿಸುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈಗಾಗಲೇ ಆಯ್ದ ಕಡೆಗಳಲ್ಲಿ ಫಲಕಗಳನ್ನು ಅಳವಡಿಸಲಾಗಿದ್ದು, ಮುಂದೆಯೂ ಅವಶ್ಯವಿರುವ ಕಡೆಗಳಲ್ಲಿ ಅಸೋಸಿಯೇಷನ್ ಮೂಲಕ ಫಲಕ ಅಳವಡಿಸಲಾಗುವುದು ಎಂದರು.

ಇದಕ್ಕೂ ಮುನ್ನ ಹೋಂ ಸ್ಟೇ ಅಸೋಸಿಯೇಷನ್ ಕಾರ್ಯಾಗಾರವನ್ನು ಮೌಂಟ್ರೋಸ್ ರೆಸಾರ್ಟ್ನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಮಡಿಕೇರಿ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಹಾಗೂ ಉಪಾಧ್ಯಕ್ಷರಾದ ನವೀನ್ ಅಂಬೆಕಲ್ ಹಾಜರಿದ್ದರು. ಉಪಾಧ್ಯಕ್ಷ ಯೋಗೇಶ್ ಪಟೇಲ್ ಕಾರ್ಯದರ್ಶಿ ಅಭಿನಂದನ್ ಸೇರಿದಂತೆ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಜರಿದ್ದರು.