ವೀರಾಜಪೇಟೆ, ಮಾ. ೧೪: ಇಲ್ಲಿಗೆ ಸಮೀಪದ ಕುಕ್ಲೂರು ಗ್ರಾಮದಲ್ಲಿನ ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮುತ್ತಪ್ಪ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಎರಡು ದಿನಗಳ ಕಾಲ ನಡೆಯಿತು.
ಮುತ್ತಪ್ಪನ್ ವೆಳ್ಳಾಟಂನೊAದಿಗೆ ಆರಂಭವಾದ ತೆರೆ ಮಹೋತ್ಸವವು ಶಾಸ್ತಾಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಮಧ್ಯರಾತ್ರಿ ನಡೆದ ಬಸುರಿಮಾಲ ವೆಳ್ಳಾಟಂ ತೆರೆಯು ಮೈಕ್ರೋ ಸ್ಟೇಶನ್‌ನಿಂದ ಮೆರವಣಿಗೆ ಯೊಂದಿಗೆ ದೇಗುಲಕ್ಕೆ ಆಗಮಿಸಿ ಭಕ್ತರಿಗೆ ತನ್ನ ಅಭಯಹಸ್ತ ನೀಡಿತು.
ಕರಿಂಗುಟ್ಟಿ ಶಾಸ್ತಪ್ಪನ ವೆಳ್ಳಾಟಂ ವಿಶೇಷ ತೆರೆ ಮಹೋತ್ಸವದೊಂದಿಗೆ ಎರಡನೇ ಹಂತದ ಉತ್ಸವ ಆರಂಭವಾಗಿ ಗುಳಿಗನ ತೆರೆ ಪ್ರಾತಃಕಾಲ ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ, ಶಾಸ್ತಾಪ್ಪನ್ ತೆರೆ ಕರಿಂಗುಟ್ಟಿ ಶಾಸ್ತಾಪ್ಪ ತೆರೆ ಮಧ್ಯಾಹ್ನ ಬಸುರಿಮಾಲ ತೆರೆಯೊಂದಿಗೆ ಉತ್ಸವ ಅಂತ್ಯ ಕಂಡಿತು.
ದೇಗುಲದ ಆಡಳಿತ ಮಂಡಳಿಯಿAದ ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಿತು. ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಸೇರಿದಂತೆ ನಗರ ಮತ್ತು ನೆರೆಯ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಮುತ್ತಪ್ಪನ್ ಹಾಗೂ ವಿವಿಧ ತೆರೆಗಳ ಆಶೀರ್ವಾದವನ್ನು ಪಡೆದರು.