ವೀರಾಜಪೇಟೆ, ಮಾ. ೧೫: ಪುರಸಭೆ ವತಿಯಿಂದ ನಗರದ ಬಸ್ಸು ತಂಗುದಾಣಗಳ ಶುಚಿತ್ವ ಕಾರ್ಯವನ್ನು ಕೈಗೊಳ್ಳಲಾಯಿತು.

ಈ ಸಂದರ್ಭ ಮಾತನಾಡಿದ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ವೀರಾಜಪೇಟೆ ನಗರದ ಬಸ್ಸು ತಂಗುದಾಣಗಳ ಶುಚಿತ್ವ ಕಾರ್ಯವನ್ನು ಮಾಡುತ್ತಿದ್ದು ತಂಗುದಾಣಗಳ ಆಧುನೀಕರಣ ಮಾಡಲಾಗುತ್ತದೆ. ನಿಸರ್ಗ ಬಡಾವಣೆಯಲ್ಲಿ ನೂತನ ಬಸ್ಸು ತಂಗುದಾಣವನ್ನು ನಿರ್ಮಿಸ ಲಾಗುತ್ತದೆ.

ಬೆಳಿಗ್ಗೆ ೬ ಗಂಟೆಯಿAದ ಪೌರ ಕಾರ್ಮಿಕರು ಬಸ್ಸು ತಂಗು ದಾಣದಲ್ಲಿರುವ ಕಸ ತೆರವು ಮಾಡಿ ನೀರು ಹಾಕಿ ಸ್ವಚ್ಛ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ, ಪರಿಸರ ಅಭಿಯಂತರರಾದ ರೀತ್ ಸಿಂಗ್, ಪ್ರಭಾರ ಆರೋಗ್ಯಾಧಿಕಾರಿ ಕೋಮಲ ಸೇರಿದಂತೆ ಪೌರ ಕಾರ್ಮಿಕರು ಹಾಜರಿದ್ದರು.