ಕುಶಾಲನಗರ: ಕುಶಾಲನಗರದ ಅನುಗ್ರಹ ಕಾಲೇಜು ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕುಶಾಲನಗರ ಇನ್ನರ್ ವೀಲ್ ಅಧ್ಯಕ್ಷೆ ಚಿತ್ರ ರಮೇಶ್, ಶಿಕ್ಷಣದ ಮೂಲಕ ಪ್ರತಿಯೊಬ್ಬ ಮಹಿಳೆ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ, ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳಬೇಕು. ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢ ಆಗಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಲಿಂಗ ಮೂರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಹರೀಶ್, ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಹಾಯಕ ಆಯುಕ್ತೆ ಸುಲೋಚನಾ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು. ಮಡಿಕೇರಿ : ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭ ಕಡ್ಲೇರ ತುಳಸಿ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ಸದಸ್ಯೆಯರಿಗಾಗಿ ಹಾಡಿನ ಸ್ಪರ್ಧೆ, ಅಡುಗೆ ಮತ್ತು ಹೂ ಜೋಡಣೆ ಸ್ಪರ್ಧೆಗಳನ್ನು ನಡೆಸಲಾಯಿತು. ಅಧ್ಯಕ್ಷೆ ಸವಿತಾ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಹಿಳೆಯರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಹೆಣ್ಣು ಮಕ್ಕಳಿಗೆ ಸಿಗುವ ವಿದ್ಯಾಭ್ಯಾಸದಿಂದಾಗಿ ಮಹಿಳೆಯರು, ಪುರುಷರಿಗೆ ಸರಿಸಮನಾಗಿದ್ದಾರೆ ಎಂದರು.
ಹಾಡಿನ ಸ್ಪರ್ಧೆಗೆ ತೀರ್ಪುಗಾರರಾಗಿ ಮಂಜುಳಾ ಭಟ್ ಮತ್ತು ಗೀತಾ ಸಂಪತ್‌ಕುಮಾರ್ ಆಗಮಿಸಿದ್ದರು. ಅಡುಗೆ ಮತ್ತು ಹೂ ಜೋಡಣೆ ಸ್ಪರ್ಧೆಗಳಿಗೆ ಬೊಳ್ಳಜಿರ ಯಮುನಾ ಅಯ್ಯಪ್ಪ ಮತ್ತು ಮುಕ್ಕಾಟಿರ ಅಂಜು ಸುಬ್ರಮಣಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ಯಾಮಲ ದಿನೇಶ್, ಆಡಳಿತ ಮಂಡಳಿಯ ಸದಸ್ಯರಾದ ಆಯಿಷಾ ಹಮೀದ್, ಭಾರತಿ ರಮೇಶ್, ಜಯಶೀಲಾ ಪ್ರಕಾಶ್, ಪ್ರೇಮ ರಾಘವಯ್ಯ, ವಸಂತಿ ಪೂಣಚ್ಚ ಉಪಸ್ಥಿತರಿದ್ದರು. ೧೨೦ಕ್ಕೂ ಹೆಚ್ಚು ಸಂಘದ ಸದಸ್ಯೆಯರು ಹಾಜರಿದ್ದರು. ಗೀತಾ ಮಧುಕರ್, ರಶ್ಮಿ ಪ್ರವೀಣ್ ನಿರೂಪಿಸಿದರು.
ಮಡಿಕೇರಿ: ಸ್ಥಳೀಯ ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಮಡಿಕೇರಿಯ ರಾಘವೇಂದ್ರ ದೇವಾಲಯದ ಬಳಿಯಿರುವ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ನಡೆಸಲಾಯಿತು.
ಮಹಿಳಾ ಮಂಡಳಿಯ ನಿರ್ದೇಶಕಿ ಪ್ರೇಮಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ತಾಯಿರಾ ನಿರೂಪಿಸಿದರೆ, ಸಾಜಿದ ಸ್ವಾಗತಿಸಿ, ರೀಟಾ ಪೂಣಚ್ಚ ವಂದಿಸಿದರು. ಅಧ್ಯಕ್ಷೆ ರಾಣಿ ಅರುಣ್, ಖಜಾಂಚಿ ಜಯ ಸದಸ್ಯರು ಹಾಜರಿದ್ದು ಸಿಹಿ ಹಂಚಿ ಸಂಭ್ರಮಿಸಿದರು. ಮಡಿಕೇರಿ : ಜಿಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದಿAದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ನಡೆಯಿತು. ಸಂಘದ ಅಧ್ಯಕ್ಷೆ ಕೆ.ಸಿ. ಕವಿತ ಅಧ್ಯಕ್ಷತೆ ವಹಿಸಿ ಮಾತನಾಡಿದರು.