ಸುಂಟಿಕೊಪ್ಪ, ಮಾ. ೧೪: ಸುಂಟಿಕೊಪ್ಪ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಒಂದಾಗಿದೆ. ಪಟ್ಟಣದಲ್ಲಿ ಅತಿ ಹೆಚ್ಚು ಮಂದಿ ಕೂಲಿ ಕಾರ್ಮಿಕರೇ ನೆಲೆಸಿದ್ದಾರೆ.
ಸುಂಟಿಕೊಪ್ಪ ಪಟ್ಟಣ ಹೋಬಳಿ ಕೇಂದ್ರವಾಗಿದೆ. ಆದರೂ ಬಸ್ ನಿಲ್ದಾಣ, ನಮೂನೆ ೯ ಮತ್ತು ೧೧ಎ ದಾಖಲಾತಿ ಪತ್ರ, ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿ ರುವುದು ಕಂದಾಯ ಇಲಾಖೆ, ಮೂಲಭೂತ ಸಮಸ್ಯೆಗಳಿಂದ ನಲುಗುತ್ತಿದೆ ಎಂಬ ನೋವುಗಳ ನುಡಿಗಳು ಗ್ರಾಮಸ್ಥರಿಂದ ಕೇಳಿಬಂದವು.
ಸುAಟಿಕೊಪ್ಪ ಪಟ್ಟಣದಲ್ಲಿ ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಜನರು ಬೆಳಕು ಚೆಲ್ಲಿದರು.
ಸುಂಟಿಕೊಪ್ಪ ಪಟ್ಟಣದ ಮಧ್ಯಭಾಗದಲ್ಲಿ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿದೆ. ಇತ್ತೀಚಿನ ದಿನಗಳಲ್ಲಿ ನೂತನ ಬಡಾವಣೆಗಳು ರೂಪುಗೊಂಡು ಜನವಸತಿ ಪ್ರದೇಶಗಳಾಗಿ ಮಾರ್ಪಾಡು ಗೊಂಡು ದಿನದಿಂದ ದಿನಕ್ಕೆ ಜನರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.
ಸುಂಟಿಕೊಪ್ಪ ಹೋಬಳಿ ಕೇಂದ್ರದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖಾ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುಚಿಕಿತ್ಸಾ ಕೇಂದ್ರಗಳು ಕಾರ್ಯಾಚರಿಸುತ್ತಿವೆ.
ಸುಂಟಿಕೊಪ್ಪ ರಾಷ್ಟಿçÃಯ ಹಾಗೂ ರಾಜ್ಯ ಹೆದ್ದಾರಿ ಮಾಕುಟ್ಟ ಹಾಗೂ ಹಿರಿಸಾವೆ ಅಂತರರಾಜ್ಯ ಸಂಪರ್ಕ ಹೆದ್ದಾರಿಯು ಇಲ್ಲಿಯೇ ಹಾದು ಹೋಗಿದ್ದರೂ ಯಾವುದೇ ರೀತಿಯ ಅಭಿವೃದ್ಧಿಗಳು ಇಲ್ಲದಿರುವುದು ವಿಷಾದದ ಸಂಗತಿ.
ಬಸ್ ನಿಲ್ದಾಣವಿಲ್ಲ
ಇಲ್ಲಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಕುಶಾಲನಗರ ಮಡಿಕೇರಿ ಸುತ್ತ ಮುತ್ತಲಿನ ಶಿಕ್ಷಣ ಸೇರಿದಂತೆ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸ ಬೇಕೆಂದರೆ ಸೂಕ್ತ ಬಸ್ ನಿಲ್ದಾಣವಿಲ್ಲದೆ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿರುವ ವಾಣಿಜ್ಯ ಮಳಿಗೆಗಳ ಮುಂದೆ ಮಳೆ, ಚಳಿ, ಬಿಸಿಲಿನಲ್ಲಿ ನಿಂತು ಪ್ರಯಾಣಿಸಬೇಕಾದ ಅನಿವಾರ್ಯತೆ ಈ ಹಿಂದೆ ಯಿಂದಲೂ ನಡೆದುಕೊಂಡು ಬಂದಿದೆ. ಇಂದಿಗೂ ಅದೇ ಪರಿಸ್ಥಿತಿ ಇರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿತೋರಿಸುತ್ತದೆ.
ಹಿಂದಿನ ಶಾಸಕರು ಪಟ್ಟಣದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಮಹಾದಾಸೆಯನ್ನು ಇರಿಸಿಕೊಂಡು ಮಾರುಕಟ್ಟೆಯನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನದ ನೂತನವಾಗಿ ನಿರ್ಮಾಣಗೊಂಡಿರುವ ಲೋಟಾಸ್ ಬಡಾವಣೆಗೆ ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಗಿ ಭೂಮಿಪೂಜೆ ಯನ್ನು ನೇರವೇರಿಸಿ ಅಲ್ಪಪ್ರಮಾಣದ ಕಟ್ಟಡವನ್ನು ನಿರ್ಮಿಸಿದೆ. ಆದರೆ ಕಳೆದ ೫ ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದರ ಬಗ್ಗೆ ಚಿಂತಿಸಿ ಮುಂದುವರಿದ ಕಾಮಗಾರಿ ಯನ್ನು ನಿರ್ವಹಿಸಬೇಕಾಗಿದೆ ಎಂದು ಸಂವಾದದಲ್ಲಿ ಕೇಳಿಬಂದಿತು.
ಸೂರಿಗಾಗಿ ಪರದಾಟ
ಬಡವರಿಗೆ ಸೂರು ನಿರ್ಮಿಸುವ ಯೋಜನೆಗೆ ಸರಕಾರ ತಣ್ಣೀರು ಎರಚಿದ್ದು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ನೀಡಲಾಗುತ್ತಿದ್ದ ಜಾಗದ ನಮೂನೆ ೯ ಮತ್ತು ೧೧ ಎ ದಾಖಲೆಪತ್ರಗಳು ಕೆಲವೇ ದಿನಗಳಲ್ಲಿ ಜನತೆಗೆ ದೊರೆಯುತ್ತಿತ್ತು.
ಸರಕಾರವು ಹೊಸ ರೀತಿಯ ಕಾನೂನು ಜಾರಿಗೆ ತಂದ ಹಿನೆÀ್ನಲೆಯಲ್ಲಿ ಮೂಡ ಇಲಾಖೆಗೆ ಅಧಿಕಾರವನ್ನು ನೀಡಲಾಗಿದ್ದು, ಇದರಿಂದ ಸೂರು ನಿರ್ಮಿಸಲು ಖರೀದಿಸಿರುವ ಮಂದಿಗೆ ಮೂಡ ಇಲಾಖೆಯಲ್ಲಿ ಸೂಚಿಸಲಾಗುವ ದಾಖಲಾತಿ ಪತ್ರಗಳನ್ನು ಹೊಂದಿಸಿಕೊಳ್ಳುವುದು ಜಾಗಗಳನ್ನು ಖರೀದಿಸಿ ತಮ್ಮ ಹೆಸರಿಗೆ ಉಪನೋಂದಾವಣೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವAತಹ ಪರಿಸ್ಥಿತಿ ಎದುರಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಒಂದೇ ರೀತಿಯಲ್ಲಿ ಕಾನೂನು ರೂಪುಗೊಳಿಸಿ ಜಾರಿಗೆ ತಂದಿರುವುದರಿAದ ಬಡವರು ಸೂರು ನಿರ್ಮಿಸುವ ಕನಸ್ಸಿಗೆ ಸರಕಾರಗಳ ಹೊಸ ನೀತಿ ನಿಯಮಗಳಿಂದ ತೊಂದರೆಯಾಗಿದೆ. ಸರಕಾರ ಈ ಗಂಭೀರ ಸಮಸ್ಯೆಯ ಬಗ್ಗೆ ಗಮನಹರಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕಾಗಿದೆ.
ಪ್ರತಿನಿತ್ಯ ಟ್ರಾಫಿಕ್ ಜಾಮ್
ಸುಂಟಿಕೊಪ್ಪ ಪಟ್ಟಣ ನಡುವೆ ರಾಷ್ಟಿçÃಯ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುವು ದರಿಂದ ಆಗಿಂದಾಗ್ಗೆ ಟ್ರಾಫಿಕ್ ಜಾಮ್‌ಗೊಳ್ಳುತ್ತಿದೆ.
ಈ ಸಮಸ್ಯೆ ಮೂಲ ಕಾರಣ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದೆ ಬಸ್‌ಗಳು ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿಯೇ ನಿಲ್ಲಿಸುವುದರಿಂದ ಪ್ರಯಾಣಿಕರು ಹತ್ತಿ ಇಳಿಯುವುದು ಮಾಡುವುದರಿಂದ ವಾರದ ಅಂತ್ಯ, ರಜಾದಿನಗಳಲ್ಲಿ ಕಿ.ಮೀ.ಗಟ್ಟಲೇ ವಾಹನಗಳ ಸರತಿಸಾಲು ಕಂಡು ಬರುತ್ತವೆ. ರಾಷ್ಟಿçÃಯ ಹೆದ್ದಾರಿಯು ವಾರದ ಅಂತ್ಯದಲ್ಲAತೂ ವಾಹನ ದಟ್ಟಣೆಯಿಂದ ಕೂಡಿದ್ದು, ಜನರು ಒಂದು ಬದಿಯಿಂದ ಮತ್ತೊಂದು ಕಡೆಗೆ ದಾಟಬೇಕಾದರೂ ಹರಸಾಹಸ ಪಡಬೇಕಾಗುತ್ತದೆ. ಬಸ್ ನಿಲ್ದಾಣವನ್ನು ನಿರ್ಮಿಸಲು ಮುಂದಾಗಲಿ.
ಶಾಲಾ ಮಕ್ಕಳಿಗೆ ಬೆಳಗ್ಗಿನ ವೇಳೆ ಸಂಚರಿಸಲು ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಿದರೂ ಇಂದಿಗೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳೂ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರೆ ಹೊರತು ಇಂದಿಗೂ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಸೋರುವ ಕಟ್ಟಡ
ಬ್ರಿಟಿಷರ ಕಾಲದ ನಾಡಕಚೇರಿ ಯಲ್ಲಿ ಇಂದಿಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಕಟ್ಟಡವು ಮಳೆಗಾಲದಲ್ಲಿ ಸಂಪೂರ್ಣ ಮೇಲ್ಛಾವಣಿಯಿಂದ ಮಳೆ ನೀರು ಸೋರಿಕೆಗೊಳ್ಳುತ್ತಿದ್ದು ಸಿಬ್ಬಂದಿಗಳು ಸೋರುವ ಕಟ್ಟಡದಲ್ಲಿ ಕುಳಿತು ಕರ್ತವ್ಯ ನಿರ್ವಹಿಸಬೇಕು.
ಮಳೆಯ ನೀರಿನಿಂದ ಸಾರ್ವಜನಿಕರ ಕಡತ ಮತ್ತು ದಾಖಲಾತಿಗಳನ್ನು ಸಂರಕ್ಷಿಸಲು ಹರಸಾಹಸ ಪಡಬೇಕಾಗಿದೆ ಎಂದು ದೂರು ಕೇಳಿಬಂದಿತು.
ಸಾರಿಗೆ ಸಂಸ್ಥೆಗೆ ಪತ್ರ
ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣ ನಿರ್ಮಾಣ, ಶಾಲಾ ಕಾಲೇಜು ಸೇರಿದಂತೆ ವಿವಿಧ ಉದ್ಯೋಗಗಳಿಗೆ ಬೆಳಗ್ಗಿನ ವೇಳೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬಸ್ ಸಂಚಾರ ಹೆಚ್ಚಿಸುವ ಬಗ್ಗೆ ರಾಜ್ಯ ಸಾರಿಗೆ ಸಂಸ್ಥೆಯ ಮೇಲಾಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ.
ಆದರೆ ಇದುವರೆಗೂ ಸುಂಟಿಕೊಪ್ಪದಿAದ ಬಸ್ ಸಂಚಾರ ಆರಂಭಿಸಿಲ್ಲ. ಕಂದಾಯ ಸಮಸ್ಯೆಯ ಬಗ್ಗೆಯೂ ಸಂಬAಧಿಸಿದ ಇಲಾಖೆಗೆ ಪಂಚಾಯಿತಿ ವತಿಯಿಂದ ಬರೆಯಲಾಗಿದೆ ಎಂದು ಹೇಳಿದರು.
ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಮಹಿಳೆಯರು, ಶಾಲಾ ಕಾಲೇಜು ಮಕ್ಕಳು ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಾಣಿಜ್ಯ ಮಳಿಗೆಗಳ ಮುಂದೆ ನಿಲ್ಲುವಂತಹ, ಮಳೆ, ಗಾಳಿ, ಕೊರೆವಚಳಿ, ಬಿಸಿಲಿನ ಧೆಗೆಯಲ್ಲಿ ನಿಂತು ಬಸ್‌ಗಳನ್ನು ಹತ್ತಿ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಅದಷ್ಟು ಬೇಗನೆ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಬಸ್ ನಿಲ್ದಾಣ ನಿರ್ಮಿಸುವಂತೆ ಬಿಜೆಪಿ ಶಕ್ತಿ ಅಧ್ಯಕ್ಷ ಧನು ಕಾವೇರಪ್ಪ ಆಗ್ರಹಿಸಿದರು.
ಸೂರು ನಿರ್ಮಿಸಿಕೊಡಿ
ಬಡವರ ಸೂರಿನ ಕನಸು ಕಂಡು ಮನೆನಿರ್ಮಿಸಲು ಹೋದಾಗ ಉಪನೋಂದಾವಣೆ ಇಲಾಖೆಯಲ್ಲಿ ನೋಂದಾವಣೆಗೆ ನಮೂನೆ ೯ ಮತ್ತು ೧೧ ಎ ದಾಖಲಾತಿಯನ್ನು ಕೇಳುತ್ತಿದ್ದು ದಾಖಲಾತಿಯನ್ನು ಪಡೆದುಕೊಳ್ಳಲು ಪಂಚಾಯಿತಿ ಕಚೇರಿಗಳಿಗೆ ತೆರಳಿದರೆ, ಅದು ಮೂಡ ಇಲಾಖೆಗೆ ವರ್ಗಾಯಿಸಲಾಗಿದೆ ಎಂಬ ಉತ್ತರ ಬರುತ್ತದೆ. ಅಲ್ಲಿ ಕೇಳುವ ಹತ್ತಾರು ದಾಖಲಾತಿಗಳನ್ನು ಹೊಂದಿಸಿ ಕೊಳ್ಳಲು ಇಲಾಖೆಗಳಲ್ಲಿ ಇನ್ನಿಲ್ಲದ ಹರಸಾಹಸ ಪಡಬೇಕಾಗಿದೆ. ಬಡವರು ಸೂರು ನಿರ್ಮಿಸುವ ಕನಸನ್ನೇ ಬಿಡುವಂತಾಗಿದೆ.
ಕೂಡಲೇ ಸಂಬAಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಕ್ರಮ ಕೈಗೊಂಡು ಬಡವರ ಸೂರಿನ ಕನಸಿಗೆ ಸಹಕಾರವಾಗುವಂತಹ ಕಾನೂನು ಜಾರಿಗೆ ತರುವಂತೆ ಬಿಜೆಪಿ ಶಕ್ತಿ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಬಿ.ಕೆ. ಪ್ರಶಾಂತ್ ಆಗ್ರಹಿಸಿದರು.
ಕಂದಾಯ ಇಲಾಖೆಗೆ ನೂತನ ಕಟ್ಟಡ ನಿರ್ಮಾಣಗೊಳಿಸುವ ಕಾರ್ಯಕ್ಕೆ ಮುಂದಾಗ ಬೇಕೆಂದು ಬಿಜೆಪಿ ಯುವಮೋರ್ಚಾ ಮಾಜಿ ಅಧ್ಯಕ್ಷ ಬಿ.ಕೆ. ರಂಜಿತ್ ಪೂಜಾರಿ ಒತ್ತಾಯಿಸಿದರು.
- ರಾಜು ರೈ