ನಾಪೋಕ್ಲು, ಮಾ. ೧೫: ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಸಮಾಜದ ನೂತನ ಮಹಿಳಾ ಒಕ್ಕೂಟ ರಚಿಸಲಾಗಿದ್ದು ಅಧ್ಯಕ್ಷರಾಗಿ ಕಡ್ಲೇರ ತುಳಸಿ ಮೋಹನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಕೂರನ ಸುಶೀಲಾ ಅಪ್ಪಾಜಿ ಮತ್ತು ಹೊಸೋಕ್ಲು ಲತಾ ಮೊಣ್ಣಪ್ಪ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ಇವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ನೆಯ್ಯಣಿ ಶಾಂತಿ ಅರ್ಜುನ, ಪುದಿಯನೆರವನ ವೀಣಾ ವೆಂಕಟೇಶ್, ಬೈಚನ ಸ್ವಾತಿ ಮಂದಪ್ಪ, ಕಾಳೇರಮ್ಮನ ರಶಿ ಅಶೋಕ, ಪೊಡನೊಳನ ಪವಿತ್ರ ಗಿರೀಶ್, ಅಣ್ಣಚ್ಚಿ ಬೋಜಮ್ಮ ಕುಶಾಲಪ್ಪ, ಕೂಡಕಂಡಿ ಸೋನಿ, ಸೆಟ್ಟೇಜನ ಗೀತಾ ಪದ್ಮನಾಭ, ಕೂಡಕಂಡಿ ಬಬಿತ ಇವರನ್ನು ಆಯ್ಕೆ ಮಾಡಲಾಯಿತು.
ಚೇರಂಬಾಣೆ, ಕಾರುಗುಂದ ಗೌಡ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಕೊಡಪಾಲು ಗಪ್ಪು ಗಣಪತಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.