ಸಿದ್ದಾಪುರ, ಮಾ. ೧೪ : ಕಾಡುಕೋಣಗಳ ನಡುವೆ ಕಾದಾಟ ನಡೆದು ಕಾಡು ಕೋಣವೊಂದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಂಜಿಲಗೆರೆ ನಿವಾಸಿ ಮಂಡೇಪAಡ ಪ್ರವೀಣ್ ಬೋಪಯ್ಯ ಎಂಬವರ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡುಕೋಣಗಳ ನಡುವೆ ಕಾದಾಟ ನಡೆದ ಪರಿಣಾಮ ಒಂದು ಕಾಡು ಕೋಣ ಸಾವನ್ನಪ್ಪಿದೆ.

ಕಾದಾಟದಿಂದಾಗಿ ಕಾಫಿ ಗಿಡಗಳು ಸೇರಿದಂತೆ ಬೆಳೆಗಳು ನಾಶವಾಗಿದೆ. ಈ ಬಗ್ಗೆ ತೋಟದ ಮಾಲೀಕ ಪ್ರವೀಣ್ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಈ ಕಾಡುಕೋಣಗಳ ಕಾದಾಟದಿಂದಾಗಿ ಗಂಭೀರ ಗಾಯಗೊಂಡು ಕಾಡುಕೋಣ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.