ಮಡಿಕೇರಿ, ಮಾ. ೧೪: ನಗರಸಭಾ ಸದಸ್ಯ ಕೆ.ಎಂ. ಅಪ್ಪಣ್ಣ ಅವರಿಗೆ ಸೇರಿದ ‘ಪ್ಲಾಂಟರ್ಸ್ ವರ್ಲ್ಡ್’ ಎಂಬ ಸಂಸ್ಥೆಗೆ ಅಕ್ರಮವಾಗಿ ಒಂದೇ ಬಿಲ್ಲಿಗೆ ಎರಡು ಬಾರಿ ನಗರಸಭೆಯಿಂದ ಹಣ ಪಾವತಿ ಮಾಡಲಾಗಿದೆ ಎಂದು ನಗರಸಭಾ ವಿಪಕ್ಷ ಸದಸ್ಯ ಅಮೀನ್ ಮೊಹಿಸಿನ್ ಜಿಲ್ಲಾಧಿಕಾರಿಗೆ ನೀಡಿದ್ದ ದೂರಿಗೆ ಸಂಬAಧಿಸಿದAತೆ ತನಿಖೆ ಪ್ರಾರಂಭಗೊAಡಿದೆ.

ಅಪ್ಪಣ್ಣ ಅವರಿಗೆ ಸೇರಿದ ಸಂಸ್ಥೆಗೆ ಅಕ್ರಮವಾಗಿ ಒಂದೇ ಬಿಲ್ಲಿಗೆ ಎರಡು ಬಾರಿ ಹಣ ಪಾವತಿಯಾಗಿದ್ದು, ಹೆಚ್ಚುವರಿ ಪಾವತಿಯಾಗಿರುವ ಹಣ ದುರುಪಯೋಗವಾಗಿದ್ದಲ್ಲಿ ಸಂಬAಧಿಸಿದ ಅಧಿಕಾರಿ, ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅಮೀನ್ ಮೊಹಿಸಿನ್ ದೂರಿನಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಹಿರಿಯ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು.

ಹಿರಿಯ ಉಪವಿಭಾಗಾಧಿಕಾರಿಗಳು ಈ ಸಂಬAಧ ನಗರಸಭಾ ಆಯುಕ್ತರಿಂದ ವರದಿ ಕೇಳಿದ್ದು, ‘ಪ್ಲಾಂಟರ್ಸ್ ವರ್ಲ್ಡ್’ನ ಬಿಲ್ಲುಗಳನ್ನು ದ್ವಿತೀಯ ದರ್ಜೆ ಸಹಾಯಕರಾದ ಹರಿಣಿ ಅವರು ಪಾವತಿಗೆ ಮಂಡಿಸಿದ್ದು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ. ಸೌಮ್ಯ ಬಿಲ್ಲು ಪಾವತಿಗೆ ಕಡತ ಮುಂದುವರಿಸಲಾಗಿ ಲೆಕ್ಕಾಧೀಕ್ಷಕರಾದ ಸುಜಾತ ಕಂಡಿಕೆವಾರು ವರದಿಯನ್ನು ಮುಂದುವರೆಸಿ ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರ ಆದೇಶಕ್ಕೆ ಮಂಡಿಸಿದ್ದು, ರಾಮದಾಸ್ ಅವರು ಆದೇಶಿಸಿದ ಮೇರೆಗೆ ಬಿಲ್ಲು ಪಾವತಿಸಲಾಗಿದೆ ಎಂದು ನಗರಸಭಾ ಪೌರಾಯುಕ್ತರು ವರದಿ ನೀಡಿದ್ದು, ಅದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ಹಿರಿಯ ಉಪವಿಭಾಗಾಧಿಕಾರಿಗಳು ಈ ಸಂಬAಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾ ಅಧಿಕಾರಿಯಾಗಿ ತನ್ನನ್ನು ಹಾಗೂ ಮಂಡನಾಧಿಕಾರಿಯಾಗಿ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯನ್ನು ನೇಮಕ ಮಾಡಲು ಶಿಫಾರಸ್ಸು ಮಾಡಿ ಜಿಲ್ಲಾಧಿಕಾರಿಗಳ ಅವಗಾಹನೆಗೆ ತಂದಿದ್ದರು.

ಅದರಂತೆ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಾಗಿದ್ದ ರಾಮದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರಾಗಿದ್ದ ಕೆ. ಸೌಮ್ಯ, ಲೆಕ್ಕಾಧಿಕ್ಷಕರಾಗಿದ್ದ ಸುಜಾತ, ದ್ವಿತೀಯ ದರ್ಜೆ ಸಹಾಯಕರಾಗಿದ್ದ ಹರಿಣಿ ಇವರುಗಳನ್ನು ಇಲಾಖಾ ವಿಚಾರಣೆ ನಡೆಸಲು ಹಿರಿಯ ಉಪವಿಭಾಗಾಧಿಕಾರಿಗಳನ್ನು ವಿಚಾರಣಾಧಿಕಾರಿ ಯಾಗಿ ಹಾಗೂ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ತನಿಖೆ ಈಗಾಗಲೇ ಆರಂಭಗೊAಡಿದ್ದು, ೩ ತಿಂಗಳ ಒಳಗೆ ಶಿಸ್ತು ಪ್ರಾಧಿಕಾರಕ್ಕೆ ತನಿಖೆ ವರದಿ ನೀಡುವಂತೆ ಸೂಚಿಸಲಾಗಿದೆ.