ವೀರಾಜಪೇಟೆ, ಮಾ. ೧೩: ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ, ಮಾಕುಟ್ಟ ಗಡಿ ಪ್ರದೇಶದ ಕಾಕತ್ತೋಡು ದೇವಿಯ ವಾರ್ಷಿಕ ಉತ್ಸವ ತಾ.೧೫ ರಿಂದ ೧೭ ತನಕ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗಡಿ ಪ್ರದೇಶವಾದ ಮಾಕುಟ್ಟ ಶ್ರೀ ಕಾಕತ್ತೋಡು ದೇವಿ ಕ್ಷೇತ್ರದ ವಾರ್ಷಿಕ ಮಹೋತ್ಸವ ಹಲವು ದೈವಿಕ ಕಾರ್ಯಕ್ರಮಗಳೊಂದಿಗೆ ತಾ. ೧೫ ರಂದು ಆರಂಭವಾಗಲಿದೆ. ಶ್ರೀ ಕಾಕತ್ತೋಡು ಶ್ರೀ ದೇವಿ ಕ್ಷೇತ್ರವು ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ಭಕ್ತಾದಿಗಳಿಂದ ವಾರ್ಷಿಕ ಉತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಕ್ಷೇತ್ರದಲ್ಲಿ ಎರಡು ಶಕ್ತಿಶಾಲಿ ದೇವಿಗಳಾದ ಶ್ರೀ ವನದುರ್ಗಾ ಮತ್ತು ಶ್ರೀ ಕಾಳಿಮಾತೆ ಉತ್ಸವ ಮುತ್ತಪ್ಪನ್ ಹಾಗೂ ಗುಳಿಗ ದೈವಗಳಿಗೆ ತೆರೆ ಮಹೋತ್ಸವ ನಡೆಯಲಿದೆ. ತಾ. ೧೫ ಉಷಾಪೂಜೆ, ಮಧ್ಯಾಹ್ನ ವಿಶೇಷ ಪೂಜೆ, ಸಂಜೆ ತೆರೆ ಮಹೋತ್ಸವ ಬಳಿಕ ರಾತ್ರಿ ಪೂಜೆ ನಡೆಯಲಿದೆ.
ತಾ.೧೬ ರಂದು ಸಂಜೆ ೬ ಗಂಟೆಗೆ ಸಹಸ್ರ ದೀಪ, ಅಲಂಕಾರ ಪೂಜೆ, ದೇವಿಪೂಜೆ, ಪುಷ್ಪಾಲಂಕಾರ ನಡೆಯಲಿದೆ. ತಾ.೧೭ ರಂದು ಬೆಳಿಗ್ಗೆ ಉಷಾಪೂಜೆ, ನವಕ ಪೂಜೆ, ಕಲಶಾಭಿಷೇಕ, ಸಂಜೆ ಭಗವತಿ ಸೇವೆ, ಸರ್ಪ ಬಲಿ, ರಾತ್ರಿ ಪೂಜೆ, ತಾಲಪ್ಪೋಲಿ ಮೆರವಣಿಗೆ, ಸ್ವೀಕಾರ ಗುರುತಿ ಪೂಜೆ ನಡೆಯಲಿದೆ, ಮೂರು ದಿನಗಳ ಕಾಲ ಬೆಳಿಗ್ಗೆ ೬ ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆಯುವುದು, ದೇವಿಗೆ ಅಭಿಷೇಕ ಪೂಜೆ, ಗಣಪತಿ ಹೋಮ ನಡೆಯಲಿದೆ. ಮಧ್ಯಾಹ್ನದ ಪೂಜೆಗಳು ಮುಗಿದ ಬಳಿಕ ದೇಗುಲದ ಬಾಗಿಲನ್ನು ಮುಚ್ಚಲಾಗುವುದು. ಸಂಜೆ ೫ ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ವಾರ್ಷಿಕ ಉತ್ಸವ ಆಚರಣೆಯ ಅಂಗವಾಗಿ ರಾತ್ರಿ ೯ ಗಂಟೆಯ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ೧೭ ರಂದು ಕೇರಳ ರಾಜ್ಯದ ಸುಪ್ರಸಿದ್ದ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.