ಮಡಿಕೇರಿ, ಮಾ. ೧೩: ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯರಸ್ತೆಯಲ್ಲಿರುವ ಅರುವತ್ತೊಕ್ಲು ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ.೧೫ ಹಾಗೂ ೧೬ರಂದು ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಪ್ರೀತ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು; ಇತಿಹಾಸ ಪ್ರಸಿದ್ಧ ಅರುವತೋಕ್ಲು ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವಕ್ಕೆ ಫೆಬ್ರವರಿ ೨೬ರಂದು ಸಂಜೆ ಚಾಲನೆ ದೊರೆತಿದ್ದು, ಮಾರ್ಚ್ ೧ರಿಂದ ಊರಿನಲ್ಲಿ ದೇವರ ವಿವಿಧ ಕಟ್ಟುಪಾಡುಗಳನ್ನು ಆಚರಿಸಲಾಗುತ್ತಿದೆ. ತಾ.೧೫ ರಂದು ಸಂಜೆ ತಕ್ಕಮುಖ್ಯಸ್ಥರಾದ ಕಾಡ್ಯಮಾಡ ಐನ್‌ಮನೆಯಿಂದ ಭಂಡಾರ ತರುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ವಿವಿಧ ಆಚರಣೆಯೊಂದಿಗೆ ತಾ.೧೫ ರಂದು ರಾತ್ರಿ ಹಬ್ಬ ನಡೆದು, ೧೬ ರಂದು ಬೆಳಿಗ್ಗೆ ೮ ಗಂಟೆಗೆ ಬೆಂಕಿ ಕೊಂಡಹಾಯುವ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲ ಜಮ್ಮಡ ಕುಟುಂಬದ ನೇತೃತ್ವದಲ್ಲಿ ಅಜ್ಜಪ್ಪನಿಗೆ ಪೂಜಾ ಕಾರ್ಯಕ್ರಮ ಇದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.