ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಪ್ರಾರ್ಥನಾ ಸಭಾಂಗಣದಲ್ಲಿ ಎನ್ನೆಸ್ಸೆಸ್ ಮತ್ತು ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಹಿಳಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಇದ್ದರು.

ಕಣಿವೆ : ಅಂತರರಾಷ್ಟಿçÃಯ ಮಹಿಳಾ ದಿನದ ಅಂಗವಾಗಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ರೂಪಕಗಳ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.

ವಿದ್ಯಾವಂತರು ಹಾಗೂ ಉದ್ಯೋಗಸ್ಥರು ಹೆಚ್ಚಾಗಿ ತಮ್ಮ ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಿಗೆ ದಾಖಲಿಸುತ್ತಾ ಮಾನವೀಯತೆ ಮರೆಯುತ್ತಿರುವ ಚಿತ್ರಣ, ಸಮಾಜದಲ್ಲಿ ಇಂದಿಗೂ ಕೂಡ ಮರುಳಿಸುತ್ತಲೇ ಇರುವ ಹೆಣ್ಣುಮಕ್ಕಳ ಭ್ರೂಣ ಹತ್ಯೆಗಳು ಹಾಗೂ ಪರಿಣಾಮಗಳು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಲೇ ಇರುವ ಲೈಂಗಿಕ ದೌರ್ಜನ್ಯಗಳ ಕುರಿತು ವಿದ್ಯಾರ್ಥಿಗಳಿಂದ ರೂಪುಗೊಂಡಿತು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ ಅವರ ಮಾರ್ಗದರ್ಶನದಲ್ಲಿ ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತಾ ಅವರ ಪರಿಕಲ್ಪನೆಯಲ್ಲಿ ಕಲಾರಂಭ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಕಾಲೇಜು ಆವರಣ ಸಾಕ್ಷಿಯಾಗಿತ್ತು. ಕಾಲೇಜಿನ ಟ್ರಿಸ್ಟಿ ಎನ್.ಎನ್. ನಂಜಪ್ಪ, ಕಾಲೇಜು ಅಧೀಕ್ಷಕ ಮಹೇಶ್ ಅಮೀನ್, ವಿವೇಕಾನಂದ ಪಿ.ಯು. ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಶ್ಮಾ ಇದ್ದರು.

ರೂಪಕಗಳ ತೀರ್ಪುಗಾರರಾಗಿ ಪಿಯು ವಿಭಾಗದ ಉಪನ್ಯಾಸಕ ವಿಕ್ರಂ, ಮಂಜುನಾಥ್, ಮಹೇಶ್ ಅಮೀನ್, ಕಾರ್ಯನಿರ್ವಹಿಸಿದರು. ಉಪನ್ಯಾಸಕ ಮಂಜೇಶ್ ಸ್ವಾಗತಿಸಿದರು. ದೀಪ್ತಿ ನಿರೂಪಿಸಿದರು.ಚೆಯ್ಯಂಡಾಣೆ : ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಡಿಜಿಟಲ್ ಗ್ರಂಥಾಲಯದಲ್ಲಿ ಅಂತಾರಾಷ್ಟಿçÃಯ ಮಹಿಳಾ ದಿನ ಆಚರಿಸಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿ ಹೈದರಾಬಾದ್ ಹೈಕೋರ್ಟ್ ನಿವೃತ್ತ ವಕೀಲ ರಾಮರಾಮ್ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು, ಅವರ ರಕ್ಷಣೆಗೆ ಇರುವ ಕಾನೂನು ವ್ಯವಸ್ಥೆ ಹಾಗೂ ಮಹಿಳೆಯರು ಹೇಗೆ ಸಬಲರಾಗಬೇಕು ಎಂಬ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಏಕೆ ಆಚರಣೆ ಮಾಡುತ್ತೇವೆ ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಪರಿಹಾರದ ಬಗ್ಗೆ ಮಾಹಿತಿ ನೀಡಿದರು.

ಅಂಚೆ ಇಲಾಖೆಯ ಅಧಿಕಾರಿ ರಿಶೀದ್ ಬಾನು ಅಂಚೆ ಇಲಾಖೆಯಿಂದ ಮಹಿಳೆಯರಿಗೆ ದೊರೆಯುವ ಸವಲತ್ತು ಹಾಗೂ ವಿಮೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬೇಬಿ ಶಿವಪ್ಪ, ಮಾಜಿ ಸದಸ್ಯೆ ವನಿತಾ ಪ್ರಕಾಶ್, ಪ್ರೀತು, ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ದಮಯಂತಿ, ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು. ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಗ್ರಂಥಪಾಲಕಿ ರೆನಿ ಬಿಬು ಸ್ವಾಗತಿಸಿ, ವಂದಿಸಿದರು.ಮುಳ್ಳೂರು: ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮಾನರಾಗಿ ಸಾಧನೆ ಮಾಡಿರುವ ಮಹಿಳೆಯರನ್ನು ವಿದ್ಯಾರ್ಥಿನಿಯರು ಆದರ್ಶ ವ್ಯಕ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಶನಿವಾರಸಂತೆ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ದೇವಾಂಬಿಕ ಮಹೇಶ್ ಅಭಿಪ್ರಾಯಪಟ್ಟರು.

ಅವರು ಸಮೀಪದ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕುಟುಂಬವೊAದರಲ್ಲಿ ಮಹಿಳೆಯ ಪಾತ್ರ. ಜವಾÀಬ್ದಾರಿ ಸ್ವಾವಲಂಬಿ ಬದುಕು, ಸಮಾಜದಲ್ಲಿ ಮಹಿಳೆಯರ ಸಾಧನೆ ಇದರ ಸಲುವಾಗಿ ೧೯೭೫ ಮಾ ೮ ರಂದು ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ವಿಶ್ವ ಮಟ್ಟದಲ್ಲಿ ಆಚರಿಸಲಾಗುತ್ತಿದೆ ಎಂದರು. ಇಂದಿನ ಕಾಲಮಾನದಲ್ಲಿ ಮಹಿಳೆಯರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ, ಕ್ರೀಡೆ ಮುಂತಾದ ಪ್ರತಿಯೊಂದು ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಈ ಮೂಲಕ ಮಹಿಳೆಯರು ಅಬಲೆಯರಲ್ಲ ಎಂಬುವುದನ್ನು ನಿರೂಪಿಸುತ್ತಿದ್ದಾರೆ ಎಂದರು. ಸಾಧಕ ಮಹಿಳೆಯರಾದ ಕಿರಣ್ ಬೇಡಿ, ದಿ.ಕಲ್ಪನ ಚಾವ್ಲಾ, ಸುನಿತಾ ವಿಲಿಯಮ್, ಪಿ.ಟಿ.ಉಷಾ ಇನ್ನೂ ಮುಂತಾದ ಮಹಿಳೆಯರು ನಮ್ಮ ದೇಶ ಮಾತ್ರ ಅಲ್ಲದೆ ಅಂತರರಾಷ್ಟçಮಟ್ಟದಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನAದ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಉಪನ್ಯಾಸಕರಾದ ಟಿ.ಜೆ.ಶೋಭ, ಬಿ.ಎಂ.ಪೊನ್ನಪ್ಪ, ಎಚ್.ಎಂ.ವಿವೇಕ್, ವೇದಕುಮಾರ್ , ಕೆ.ವಿ.ಚಲನ ಮುಂತಾದವರು ಹಾಜರಿದ್ದರು.ಮಡಿಕೇರಿ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕೊಡಗು ಗೌಡ ಸಮಾಜ ಕಟ್ಟಡದಲ್ಲಿ ಗೌಡ ಮಹಿಳಾ ಒಕ್ಕೂಟ ಕೊಡಗು ವತಿಯಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಆಮೆ ದಮಯಂತಿ ವಹಿಸಿದ್ದರು.

ತೆಕ್ಕಡೆ ಗುಲಾಬಿ ಜನಾರ್ಧನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ಬೈತಡ್ಕ ಜಾನಕಿ ಹಾಗೂ ಹಿರಿಯರಾದ ದಂಬೆಕೋಡಿ ಲೀಲಾ ಚಿನ್ನಪ್ಪ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗುವ ಮೂಲಕ ಸಮಾರಂಭವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಸಭಾಧ್ಯಕ್ಷರಾದ ದಮಯಂತಿಯವರು ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ಕೋರಿದರು.

ಮುಖ್ಯ ಅತಿಥಿಗಳಾಗಿದ್ದ ಗುಲಾಬಿ ಜನಾರ್ಧನ್ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಮಹಿಳೆಯ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತಾ ಹಿರಿಯರು ವಿವಾಹಿತ ಮಕ್ಕಳೊಂದಿಗೆ ಪ್ರೀತಿ ಸೌಹಾರ್ದದಿಂದ ವರ್ತಿಸುವ ಹಾಗೂ ಗಂಡು ಹೆಣ್ಣು ಮಕ್ಕಳು ಕೆಲಸ ಕಾರ್ಯಗಳನ್ನು ಸಹಭಾಗಿತ್ವದಲ್ಲಿ ಮಾಡುವ ಅನಿವಾರ್ಯತೆ ಬಗ್ಗೆ ಬೆಳಕು ಚೆಲ್ಲಿದರು. ಜನಾಂಗದ ಸಂಪ್ರದಾಯ ಪಾಲಿಸಬೇಕಾಗಿ ತಿಳಿಸಿದರು. ದಂಬೆಕೋಡಿ ಸುಶೀಲ ಅವರು ಪ್ರೀತಿಯೇ ಬದುಕಿನ ಜೀವಾಳವೆಂದರು. ಮಾನವೀಯತೆ ಮರೆಯಾದಾಗ ಕಾನೂನು ರಚನೆಯಾಗಲು ಅವಕಾಶವಾಗುತ್ತದೆ. ಚಲನೆ ಶಕ್ತಿಯ ಮೂಲವಾದ್ದರಿಂದ ನಮ್ಮ ಆಲೋಚನೆಗಳಲ್ಲೂ ಚಲನೆ, ಬದಲಾವಣೆಯನ್ನು ಕಾಲಕಾಲಕ್ಕೆ ಮಾಡುವುದು ಅನಿವಾರ್ಯವಾಗಿದ್ದು ಈ ದಿಶೆಯಲ್ಲಿ ಹೆಜ್ಜೆ ಇಡಬೇಕಾಗಿದೆ. ಒಕ್ಕೂಟದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಅಗತ್ಯ ಎಂದು ಅಧ್ಯಕ್ಷೆ ಅಮೆ ದಮಯಂತಿ ಹೇಳಿದರು.

ಕೋಳಿಬೈಲು ಹರಿಣಿ ಪ್ರಾರ್ಥಿಸಿದರು. ಬೈತಡ್ಕ ಜಾನಕಿಯವರ ಹಾಡು, ಅಂಬೇಕಲ್ಲು ಸುಶೀಲ ಅವರ ಸ್ವರಚಿತ ಕವನ ವಾಚನ ಸಮಾರಂಭಕ್ಕೆ ಮೆರಗು ನೀಡಿತ್ತು. ಶ್ರೀಮತಿ ಕಟ್ರತನ ಲಲಿತ ಅವರು ನಿರೂಪಣೆ ಮಾಡಿದರು. ಬಾರನ ಶೋಭಾರವರು ವಂದನಾರ್ಪಣೆ ಸಲ್ಲಿಸಿದರು. ರಾಷ್ಟçಗೀತೆ ಹಾಡುವುದರೊಂದಿಗೆ ಸಮಾರಂಭವನ್ನು ಸುಸಂಪನ್ನ ಗೊಳಿಸಲಾಯಿತು. ನಿರ್ದೇಶಕರಾದ ಕುದುಪಜೆ ರೋಹಿಣಿ ,ಮುದ್ಯನ ಜ್ಯೋತಿ, ಮೂಲೆಮಜಲು ಅಮಿತ , ಪಾಣತ್ತಲೆ ಭಾಗೀರಥಿ ಹಾಗೂ ಹಿರಿಯರಾದ ಕುಂತಿ ಬೋಪಯ್ಯ, ಕೊಲಂಬೆ ಯಮುನ ಹಾಗೂ ಗೌರವಾನ್ವಿತ ಸದಸ್ಯರು ಹಾಜರಿದ್ದರು. ಲಘು ಉಪಹಾರವನ್ನು ಸೇವಿಸಲಾಯಿತು.

ನಾಪೋಕ್ಲು: ಮಹಿಳೆ ತ್ಯಾಗಮೂರ್ತಿ. ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿಯ ಪ್ರತಿರೂಪ ವಾಗಿದ್ದಾಳೆ. ಎಂದು ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ, ಲೇಖಕಿ ಡಾ.ಕಾವೇರಿ ಪ್ರಕಾಶ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಮಹಿಳಾ ಸಮಾಜ ಮತ್ತು ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗಿನ ಹೆಣ್ಣು ಮಕ್ಕಳು ವ್ಯವಸ್ಥಿತವಾದ ಬದುಕನ್ನು ಕಟ್ಟಿಕೊಳ್ಳಬಲ್ಲಳು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಮಹಿಳೆಯರು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸಬೇಕು. ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇನ್ನಷ್ಟು ಸಾಧಿಸಬೇಕಿದೆ.ಸಮಾಜದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿ ಡಾ ಮಾದಂಡ ಪ್ರಿಯದರ್ಶಿನಿ ಮಾತನಾಡಿ ಒಂದು ಕುಟುಂಬದ ಆಧಾರ ಸ್ಥಂಭವಾಗಿರುವ ಮಹಿಳೆಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಮಹಿಳೆಯರು ಇಂದು ಸಾಕಷ್ಟು ವಿದ್ಯಾವಂತರಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮಹಿಳೆಯರು ಜಾಗೃತರಾಗಿರಬೇಕು ಎಂದರು. ಮಾರಕ ಕ್ಯಾನ್ಸರ್ ನಂತರ ರೋಗಗಳು ಬಾಧಿಸುವ ಮೊದಲೇ ಮುನ್ನಚ್ಚರಿಕೆಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದ ಅವರು ಆರೋಗ್ಯದ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ವಹಿಸಿ ತನ್ನ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು. ಈ ಸಂದರ್ಭ ಮಹಿಳಾ ಸಮಾಜದ ಉಪಾಧ್ಯಕ್ಷೆ ಬೊಪ್ಪಂಡ ಶೈಲಾ ಬೋಪಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಲಯನ್ ಕಾರ್ಯದರ್ಶಿ ಕಾಂಡAಡ ರೇಖಾ ಪೊನ್ನಣ್ಣ, ಮಹಿಳಾ ಸಮಾಜ ನಿರ್ದೇಶಕಿಯರಾದ ಕೆಟೋಳಿರ ಶಾರದಾ ಪಳಂಗಪ್ಪ ,ಬಿದ್ದಾಟಂಡ ಗಿರಿಜಾ ಬೋಪಣ್ಣ, ಅಪ್ಪಾರಂದ ಡೇಜಿ ತಿಮ್ಮಯ್ಯ, ಕುಂಡ್ಯೋಳAಡ ಕವಿತಾ ಮುತ್ತಣ್ಣ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ , ಕಾರ್ಯದರ್ಶಿ ರಾಜೇಶ್ವರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪಾಲಚಂಡ ಸೀಮಾ ಪ್ರತಾಪ್ ಪ್ರಾರ್ಥಿಸಿ ರೇಷ್ಮಾ ಉತ್ತಪ್ಪ ಸ್ವಾಗತಿಸಿದರು. ಬೊಳ್ಳಮ್ಮ ನಾಣಯ್ಯ ನಿರೂಪಿಸಿ. ಶೈಲಾ ಬೋಪಯ್ಯ ವಂದಿಸಿದರು.ವೀರಾಜಪೇಟೆ: ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಕೊಡವ ಕೂಟಾಳಿಯಡ ಕೂಟ ಸಂಘಟನೆಯಿAದ ಸಾಧನೆ ಮಾಡಿದ ಕೊಡವ ಜನಾಂಗದ ಮಹಿಳೆಯರಿಗೆ ಅವರ ಮನೆಗೆ ತೆರಳಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಈ ಕಾರ್ಯಕ್ರಮದಲ್ಲಿ ನಾಪೋಕ್ಲು ಜೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕಿಯಾಗಿ ತಮ್ಮ ಬಾಲ್ಯದಿಂದಲೂ ಉಮ್ಮತ್ತಾಟ್, ಕತ್ತಿಯಾಟ್, ಬೊಳಕಾಟ್, ಕೊಡವ ಹಾಡುಗಳನ್ನು ಕಲಿತು, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಕಲಿಸುತ್ತಾ ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಪ್ರದರ್ಶನ ನೀಡುತ್ತಾ ಬಂದಿರುವುದರ ಜೊತೆಗೆ ಕೊಡವ ಸಿನಿಮಾಗಳಲ್ಲಿ ಅಭಿನಯಿಸಿದ ಜಾನಪದ ಕಲಾವಿದೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸಂಸ್ಥಾಪಕಿ ಚಿಮ್ಮಚ್ಚಿರ ಪವಿತ ರಜನ್, ಖಜಾಂಚಿ ಬೊಜ್ಪಂಗಡ ಭವ್ಯ ದೇವಯ್ಯ , ಸದಸ್ಯೆ ಇಟ್ಟಿರ ಭವ್ಯ ಈಶ್ವರ್ ಪಾಲ್ಗೊಂಡಿದ್ದರು.

ಚೆಯ್ಯAಡಾಣೆ: ಪ್ರಪಂಚದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡುತ್ತಿರುವ ದೇಶ ಅಂದರೆ ಅದು ಭಾರತ. ಸ್ತಿçà ಶಕ್ತಿ ಅಭಿವೃದ್ಧಿ ಹೊಂದಿದರೆ ಈ ದೇಶವೇ ಅಭಿವೃದ್ಧಿ ಹೊಂದಿದ ಹಾಗೆ ಎಂದು ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಅಭಿಪ್ರಾಯಪಟ್ಟರು.

ಇವರು ಚನ್ನಂಗೊಲ್ಲಿಯಲ್ಲಿ ಆಮಿನಾಸ್ ಡ್ರಿಮ್ಸ್ ವರ್ಲ್ಡ್ ಕೊಡಗು ಆಯೋಜಿಸಿದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮ ಆಯೋಜಿಸುತ್ತ ಬರುತ್ತಿದ್ದರು. ಇಂದಿರಾಗಾAಧಿ, ಮದರ್ ತೆರೇಸಾ ಕೂಡ ಮಹಿಳೆಯರಿಗಾಗಿ, ಸಾಮಾನ್ಯ ಜನರಿಗಾಗಿ ಸ್ವಾವಲಂಬಿಗಳಾಗಲು ಹಲವಾರು ರೀತಿಯಲ್ಲಿ ಪ್ರಯತ್ನಪಟ್ಟಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಉನ್ನತ ಮಟ್ಟಕ್ಕೆರಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ತಿçà ಶಕ್ತಿ ಸಂಘದ ತಾಲೂಕು ಅಧ್ಯಕ್ಷೆ ರಜಿನಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗವನ್ನು ತಿದ್ದಬೇಕಾದ ಕೆಲಸ ನಮ್ಮದು; ಅವರೇ ದಾರಿ ತಪ್ಪಿದರೆ ಏನಾಗುತ್ತೆ ಅದೇ ಇಂದಿನ ಕಾಲಘಟ್ಟದಲ್ಲಿ ನಡೆಯುತ್ತಿರುವುದು. ಸ್ವಾರ್ಥಕ್ಕಾಗಿ ಬರುವವರನ್ನು ದೂರವಿಡಿ, ಸ್ವಾರ್ಥಿಗಳ ಪ್ರಪಂಚದಲ್ಲಿ ಎಷ್ಟೇ ಉತ್ತಮ ಕೆಲಸ ಮಾಡಿದರು ಅದು ತೊಳೆದು ಹೋಗುತ್ತೆ. ಮಹಿಳೆಯೊರ್ವಳು ಕಲಿತರೆ ಶಾಲೆಯೊಂದು ತೆರೆದಂತೆ ಎಂದರು.

ಆಮಿನಾಸ್ ಡ್ರಿಮ್ಸ್ ವಲ್ಡ್ ಕೊಡಗು ಸ್ಥಾಪಕಾಧ್ಯಕ್ಷೆ ಅಮೀನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಶಭರಿಶ್ ಹಾಗೂ ಮಾಜಿ ಸದಸ್ಯ ವಿನೋದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೆ ಸಂದರ್ಭ ಚೆನ್ನಂಗೊಲ್ಲಿ ಸರಕಾರಿ ಶಾಲೆಯಲ್ಲಿ ೭ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ ಅನುಷ್ಕಾಳಿಗೆ ನಗದು ಬಹುಮಾನ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ಆಯೋಜಿಸಲಾದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಆಮಿನಾಸ್ ಡ್ರಿಮ್ಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಲೀಲಾ,ಕಾರ್ಯದರ್ಶಿ ಸಂಧ್ಯಾ, ಉಪಾಧ್ಯಕ್ಷೆ ರಾಶೀದಾ, ಸಹ ಕಾರ್ಯದರ್ಶಿ ದಿವ್ಯ, ಗ್ರಾ.ಪಂ. ಸದಸ್ಯೆ ನಝಿರಾ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಮೀನಾ, ಶೋಭಾ, ಸರಸು, ಸುಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಅಲ್ಫೋನ್ಸ ಪ್ರಾರ್ಥಿಸಿ, ಸರಸು ಸ್ವಾಗತಿಸಿ, ಲೀಲಾ ವಂದಿಸಿದರು.

ಮಡಿಕೇರಿ: ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂಜೀವಿನಿ ಮಾಲ್ದಾರೆ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಮಹಿಳೆಯರಿಗೆ ಕ್ರೀಡಾಕೂಟ ಹಾಗೂ ವಿವಿಧ ಆಟೋಟ ಕಾರ್ಯಕ್ರಮಗಳು ಮಾಲ್ದಾರೆಯ ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ಮಹಿಳೆಯರು ಸಂಘಟನೆಗಳ ಮೂಲಕ ಶಕ್ತರಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವದರ ಮೂಲಕ ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದು ಹೇಳಿದರು. ಗ್ರಾಮ ಪಂಚಾಯಿತಿಯಿAದ ಸಿಗುವ ಸೌಲಭ್ಯಗಳನ್ನ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಮುಖ್ಯ ವಾಹಿನಿಗೆ ಬರಬೇಕೆಂದರು

ಓಡಿಪಿ ಸಂಸ್ಥೆಯ ವಲಯ ಮೇಲ್ವಿಚಾರಕಿ ಜಾಯ್ಸ್ ಮೆನೇಜಿಸ್ ಮಾತನಾಡಿ, ಮಹಿಳಾ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಮಹಿಳೆಯರು ಸ್ವ-ಉದ್ಯೋಗದ ಮೂಲಕ ಗುರುತಿಸಿಕೊಂಡು ಅಭಿವೃದ್ಧಿಯೊಂದಿಗೆ ಮುಂದೆ ಬರುತ್ತಿದ್ದಾರೆ. ಮಹಿಳೆಯರು ಸಂಘಟನೆಯ ಮೂಲಕ ಒಗ್ಗಟ್ಟಿನೊಂದಿಗೆ ಮುನ್ನಡೆಯಬೇಕೆಂದರು.

ಸAಜೀವಿನಿ ಒಕ್ಕೂಟದ ಅಧ್ಯಕ್ಷೆ ರಾಣಿ ಮಾತನಾಡಿ, ಸಂಕಷ್ಟದ ಬದುಕಿನ ನಡುವೆ ಜೀವನ ನಡೆಸುತ್ತಿರುವ ಮಹಿಳೆಯರು ಸಂಘಟನೆ ಮೂಲಕ ಗುರುತಿಸಿಕೊಂಡು ಸ್ವಂತ ದುಡಿಮೆಯೊಂದಿಗೆ ಸ್ವಾವಲಂಬಿಗಳಾಗಿ ಮುಂದೆ ಬರುತ್ತಿದ್ದಾರೆ. ಮಹಿಳಾ ಸಂಘಟನೆಗಳಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಮುಖ್ಯವಾಹಿನಿಗೆ ತರಲು ಮುಂದಾಗಬೇಕೆAದರು. ಕಾರ್ಯಕ್ರಮದಲ್ಲಿ ಮಾಲ್ದಾರೆ ಬ್ಯಾಂಕ್ ವ್ಯವಸ್ಥಾಪಕ ವಲ್ಸರಾಜ್, ಅಂಬೇಡ್ಕರ್ ಸೇನೆಯ ಸತೀಶ್, ಒಕ್ಕೂಟದ ಲ್.ಸಿ.ರ್.ಪಿ. ಪುಷ್ಪ, ಎಂ.ಬಿ.ಕೆ. ರೋಹಿಣಿ, ಪಶು ಸಖಿ ರೇಖಾ, ಕೃಷಿ ಸಖಿ ನಿತ್ಯ, ವನ ಸಖಿ ಶೋಭಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.